ಶ್ರೀರಾಮುಲು ತವರಿನಲ್ಲಿ ವರ್ಕೌಟ್ ಆಯ್ತು ಡಿಕೆಶಿ ಒಗ್ಗಟ್ಟಿನ ಮಂತ್ರ, ಬಿಜೆಪಿಗೆ ಮಖಭಂಗ

Published : Mar 19, 2022, 03:52 PM ISTUpdated : Mar 19, 2022, 03:53 PM IST
ಶ್ರೀರಾಮುಲು ತವರಿನಲ್ಲಿ ವರ್ಕೌಟ್ ಆಯ್ತು ಡಿಕೆಶಿ ಒಗ್ಗಟ್ಟಿನ ಮಂತ್ರ, ಬಿಜೆಪಿಗೆ ಮಖಭಂಗ

ಸಾರಾಂಶ

* ಶ್ರೀರಾಮುಲು ತವರಿನಲ್ಲಿ ಡಿಕೆಶಿ ಪ್ಲಾನ್ ವರ್ಕೌಟ್ * ಗೊಂದಲದ ನಡುವೆಯೂ ಗೆದ್ದ ಕಾಂಗ್ರೆಸ್ * ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲುಗೆ ಮುಖಭಂಗ  

ಬಳ್ಳಾರಿ, (ಮಾ.19): ಗೊಂದಲ ಮತ್ತು ಭಿನ್ನಾಭಿಪ್ರಾಯದ ನಡುವೆಯೂ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ (Bellary Mayor And Deputy Mayor Election) ಗೆಲ್ಲುವ‌ ಮೂಲಕ ಸತತ ಎರಡನೇ ಬಾರಿಗೆ ಪಾಲಿಕೆಯನ್ನು ಕಾಂಗ್ರೆಸ್(Congress) ತನ್ನ ವಶಕ್ಕೆ ಪಡೆದಿದೆ.. ಗೆಲ್ಲಲು ಅಗತ್ಯ ಸದಸ್ಯರ ಬಲ‌ ಇಲ್ಲದೇ ಇದ್ರೂ ಕಣಕ್ಕಿಳಿಯೋ ಮೂಲಕ ಬಿಜೆಪಿ(BJP) ಭಾರಿ ಮುಖಭಂಗ ಅನುಭವಿಸಿದೆ..

ಮೇಯರ್ ಆಗಿ 34 ನೇ ವಾರ್ಡಿನ ರಾಜೇಶ್ವರಿ ಮತ್ತು ಉಪಮೇಯರ್ ಆಗಿ 37 ನೇ ವಾರ್ಡಿನ ಮಲಾನ ಭೀ ಅಯ್ಕೆಯಾಗಿದ್ದಾರೆ. ಇನ್ನೂ ಬಹುಮತ ಇಲ್ಲದೇ ಇದ್ರೂ ಮೇಯರ್ ಸ್ಥಾನಕ್ಕೆ ಬಿಜೆಪಿಯ ಸುರೇಖ ಮತ್ತು ಉಪಮೇಯರ್ ಸ್ಥಾನಕ್ಕೆ ಸ್ಪರ್ದೆ ಮಾಡಿದ ಗೋವಿಂದ ರಾಜುಲು ಮುಖಭಂಗ ಅನುಭವಿಸಿದ್ದಾರೆ.

ಬಳ್ಳಾರಿ ಮೇಯರ್ ಎಲೆಕ್ಷನ್, ಬಹುಮತ ಇದ್ರು ಕಾಂಗ್ರೆಸ್‌ನಲ್ಲಿ ಮೂಡದ ಒಮ್ಮತ, ಡಿಕೆಶಿ ಪಾಠ

ಗೊಂದಲದ ನಡುವೆಯೂ ಗೆದ್ದ ಕಾಂಗ್ರೆಸ್

ಒಟ್ಟು 39 ಸದಸ್ಯರ ಪೈಕಿ 21 ಕಾಂಗ್ರೆಸ್ ಮತ್ತು ಐದು ಪಕ್ಷೇತರರ ಬಲ ಇದ್ರೂ ಆಪರೇಷನ್ ಕಮಲದ ಭೀತಿಯಿಂದ ಕಳೆದ ನಾಲ್ಕು ದಿನಗಳ ಹಿಂದೆ ಎಲ್ಲ ಸದಸ್ಯರನ್ನು ಕಾಂಗ್ರೆಸ್ ಬೆಂಗಳೂರಿಗೆ ಶಿಫ್ಟ್ ‌ಮಾಡಲಾಗಿತ್ತು.
ಬೆಂಗಳೂರಿನಿಂದ ಶುಕ್ರವಾರ ತಡರಾತ್ರಿ ಬಳ್ಳಾರಿಗೆ ಬಂದಿದ್ರೂ ಇಂದು ಬೆಳಿಗ್ಗೆ ನಾಮಪತ್ರ ಸಲ್ಲಿಸೋವರೆಗೂ ಎರಡು ಮೂರು ಗುಂಪುಗಳಲ್ಲಿ ಭಿನ್ನಾಭಿಪ್ರಾಯವಿತ್ತು
ಕೇವಲ 13 ಸದಸ್ಯರ ಬಲ ಇದ್ರೂ ಕೊನೆಯ ಕ್ಷಣದಲ್ಲಿ ಬದಲಾವಣೆ ನೀರಿಕ್ಷೆ ಮಾಡಿದ ಬಿಜೆಪಿಗೆ ಯಾವುದೇ ಲಾಭವಾಗಿಲ್ಲ..

ಫಲಿಸಿದ ಯುಟಿ ಖಾದರ್ ಮತ್ತು ನಾಗೇಂದ್ರ ತಂತ್ರಗಾರಿಕೆ
ಗೊಂದಲದ ಗೂಡಾದ ಕಾಂಗ್ರೆಸ್ ಸದಸ್ಯರನ್ನು ಒಟ್ಟು ಗೂಡಿಸುವಲ್ಲಿ ಶಾಸಕ ನಾಗೇಂದ್ರ ಮತ್ತು ಚುನಾವಣೆ ಉಸ್ತುವಾರಿಗಳಾದ ಯು.ಟಿ.ಖಾದರ್ ಮತ್ತು ಆಂಜನೇಯಲು ಅವರು ಎಲ್ಲರನ್ನೂ ಒಟ್ಟು ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೆಡ್ಡಿ & ಟೀಂ ಮತ್ತು  ಶ್ರೀರಾಮುಲುಗೆ ಭಾರಿ ಮುಖಭಂಗ
ಪಾಲಿಕೆ ಚುನಾವಣೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಮಗ ಮತ್ತು ಶ್ರೀರಾಮುಲು ಸಹೋದರ ಮಾಜಿ ಸಂಸದ ಪಕೀರಪ್ಪ ಮಗಳು ಭಾರಿ ಅಂತರದಿಂದ ಸೋಲನ್ನು ಅನುಭವಿಸಿದ್ರು.. ಇದೀಗ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿಯೂ ಹಿನ್ನಡೆಯಾಗಿರೋದು ಬಳ್ಳಾರಿ ಬಿಜೆಪಿ ಪಾಲಿಕಗೆ ಬಹುದೊಡ್ಡ ಮುಖಭಂಗವಾಗಿದೆ...

ಬೆಂಗಳೂರಿನಲ್ಲಿ ಡಿಕೆಶಿ ಒಗ್ಗಟ್ಟಿನ ಮಂತ್ರ
ಕೆಪಿಸಿಸಿ ಡಿ.ಕೆ. ಶಿವಕುಮಾರ್ ಪಕ್ಷ ನಿಷ್ಠೆ ಮತ್ತು ವಾರ್ಡ್ ಮತ್ತು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಆದ್ಯತೆ ನೀಡಬೇಕು. ಈ ಹಿನ್ನಲೆಯಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ಮೇಯರ್ ಮತ್ತು ಉಪ ಮೇಯರ್ ಹುದ್ದೆಯ ಆಕಾಂಕ್ಷಿಗಳು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂದು ಒಗ್ಗಟ್ಟಿನ ಮಂತ್ರವನ್ನು ಬೋಧಿಸಿದ್ದರು.

ಬಹುಮತ ಇದ್ರೂ ಟೆನ್ಷನ್ ಟೆನ್ಷನ್
ಬಳ್ಳಾರಿ ಮಹಾನಗರ ಪಾಲಿಕೆಯ 39 ಸದಸ್ಯರ ಫೈಕಿ 21 ಸ್ಥಾನಗಳಲ್ಲಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ ಪಕ್ಷೇತರರಾಗಿ ಆಯ್ಕೆಯಾಗಿರುವ ಐವರು ಸದಸ್ಯರು ಸಹ ಚುನಾವಣೆ ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಪರಿಣಾಮ‌ ಸದಸ್ಯರ ಬಲ ಈಗ 26ಕ್ಕೆ ಎರಿದೆ. ಜೊತೆಗೆ ಶಾಸಕರೊಬ್ಬರು. ರಾಜ್ಯಸಭಾ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರೊಬ್ಬರ ಮತ ಬೆಂಬಲದಿಂದ ಕಾಂಗ್ರೆಸ್ ಪಕ್ಷಕ್ಕೆ 29 ಸದಸ್ಯರ ಮತಗಳು ಕಾಂಗ್ರೆಸ್ ಪಕ್ಷದಲ್ಲಿವೆ ಆದ್ರೂ ಆಪರೇಷನ್ ಕಮಲ ಭೀತಿ ಹಿನ್ನೆಲೆ ರೆಸಾರ್ಟ್ ಗೆ ಹೋಗಿದ್ರು..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ