Family Politics: ನನ್ನ ಮಗನ ಹಣೆಬರಹದಲ್ಲಿ ಬರೆದಿದ್ದರೆ ಎಂಎಲ್ಎ ಆಗ್ತಾನೆ: ಸಚಿವ ಸೋಮಣ್ಣ

Published : Mar 19, 2022, 09:02 AM IST
Family Politics: ನನ್ನ ಮಗನ ಹಣೆಬರಹದಲ್ಲಿ ಬರೆದಿದ್ದರೆ ಎಂಎಲ್ಎ ಆಗ್ತಾನೆ: ಸಚಿವ ಸೋಮಣ್ಣ

ಸಾರಾಂಶ

*   ಮೋದಿ ಅವರಂತಹ ನಾಯಕರನ್ನು ಪಡೆದಿದ್ದಕ್ಕೆ ನಾವು ಹೆಮ್ಮೆ ಪಡಬೇಕು *  ಮುಚ್ಚಿ ಹೋಗಿರುವ ಇತಿಹಾಸವನ್ನು ಜನರಿಗೆ ತಿಳಿಸಬೇಕಾಗಿದೆ *  ಕುಟುಂಬ ರಾಜಕಾರಣಕ್ಕೆ ಬ್ರೇಕ್ಹಾಕುವ ಮೋದಿ ಚಿಂತನೆ ನಾವೆಲ್ಲರೂ ಒಪ್ಪಬೇಕು   

ಕೊಳ್ಳೇಗಾಲ(ಮಾ.19):  ರಾಜ್ಯದ ಆರೂವರೆ ಕೋಟಿ ಜನರಲ್ಲಿ 224 ಮಂದಿಯಷ್ಟೇ ಎಂಎಲ್ಎ(MLA) ಆಗಲು ಸಾಧ್ಯ. ನನ್ನ ಮಗನ ಹಣೆ ಬರಹದಲ್ಲಿ ಆತ ಎಂಎಲ್ಎ ಆಗಬೇಕು ಎಂದು ಬರೆದಿದ್ದರೆ ಆಗುತ್ತಾನೆ. ಇಲ್ಲದಿದ್ದರೆ ಇಲ್ಲ ವಸತಿ ಮತ್ತು ಮೂಲಭೂತ ಸೌಕರ್ಯ ಹಾಗೂ ಚಾಮರಾಜನಗರ(Chamarajanagar) ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ(V Somanna) ತಿಳಿಸಿದರು.

ಕೊಳ್ಳೇಗಾಲದಲ್ಲಿ(Kollegal) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಂತಹ ಮಹಾನ್ನಾಯಕರನ್ನು ಪಡೆದಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು, ಕುಟುಂಬ ರಾಜಕಾರಣಕ್ಕೆ(Politics) ಬ್ರೇಕ್ಹಾಕುವ ಮೋದಿ ಚಿಂತನೆಯನ್ನು ನಾವೆಲ್ಲರೂ ಒಪ್ಪಬೇಕು, ಬೆಂಬಲಿಸಬೇಕಿರುವುದು ಅನಿವಾರ್ಯ ಎಂದು ಹೇಳಿದರು.

Bhagavad Gita: ಭಗವದ್ಗೀತೆ ಅದ್ಭುತವಾದ ತರ್ಕಶಾಸ್ತ್ರ: ಸೋಮಣ್ಣ

ಎಲ್ಲಾ ಮುಸ್ಲಿಮರು(Muslims) ಕೆಟ್ಟವರಲ್ಲ, ಎಲ್ಲಾ ಹಿಂದೂಗಳು(Hindu) ಒಳ್ಳೆಯವರಲ್ಲ ಎಂದು ಕಾಶ್ಮೀರ್ಫೈಲ್ಸ್(The Kashmir Files) ಚಿತ್ರ ವೀಕ್ಷಿಸಿದ ಅವರು, ದೇಶದ್ರೋಹಿಗಳು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕಹಿ ಘಟನೆಗಳನ್ನು ಚಿತ್ರ(Movie) ನೋಡಿ ಮರೆಯಬೇಕು ಎಂದು ಉತ್ತಮ ಸದುದ್ದೇಶದಿಂದಾಗಿ ಚಿತ್ರ ನಿರ್ಮಿಸಲಾಗಿದೆ. ಮುಚ್ಚಿ ಹೋಗಿರುವ ಇತಿಹಾಸವನ್ನು(History) ಜನರಿಗೆ ತಿಳಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಅಂತಹ ಘಟನೆಗಳು ನಡೆಯಬಾರದು ಎಂಬ ದೃಷ್ಠಿಕೋನದಿಂದ ಈ ಚಿತ್ರ ನಿರ್ಮಿಸಲಾಗಿದೆ ಎಂದರು. ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರ ಈ ಬಗ್ಗೆ ನನಗೇನು ಗೊತ್ತಿಲ್ಲ. ಪಠ್ಯ ಪುಸ್ತಕ ರಚನೆಗೆ ಸಮಿತಿ ಇದೆ ಸಮಿತಿಯವರು ಸೇರ್ಪಡೆ ತೀರ್ಮಾನ ಕೈಗೊಳ್ಳುತ್ತಾರೆ. ಮುಂದಿನ ಪೀಳಿಗೆಗೆ ಏನು ತಿಳಿಸಬೇಕು ಎಂಬುದರ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತದೆ ಎಂದರು.

ವಸತಿ ಯೋಜನೆಗಳ ಆದಾಯಮಿತಿ ಹೆಚ್ಚಳ

ಬೆಂಗಳೂರು: ಕರ್ನಾಟಕದ ವಿವಿಧ ವಸತಿ ಯೋಜನೆಗಳಲ್ಲಿ (Housing Schemes) ಫಲಾನುಭವಿಗಳನ್ನು ಆಯ್ಕೆಗೆ ನಿಗದಿಪಡಿಸಿರುವ ಆದಾಯಮಿತಿ ಪ್ರಮಾಣವನ್ನು ಹೆಚ್ಚಳ ಮಾಡಿ ನಾಳೆಯೇ ಸರ್ಕಾರದಿಂದ ಆದೇಶ ಹೊರಡಿಸುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದರು. 

ಮಾ.14 ರಂದು ಶಾಸಕ ಸಿ.ಟಿ.ರವಿ (CT Ravi) ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮೀಣ ಭಾಗಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಆದಾಯ ಮಿತಿಯನ್ನು 32 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. ಇನ್ನು ಮುಂದೆ ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ 1.20 ಲಕ್ಷಕ್ಕೆ ಹಾಗೂ ನಗರಪ್ರದೇಶಗಳಲ್ಲಿದ್ದ ಆದಾಯ ಮಿತಿ 87 ಸಾವಿರದಿಂದ 3 ಲಕ್ಷ ರೂ.ಗೆ ಏರಿಕೆ ಮಾಡುವುದಾಗಿ ಪ್ರಕಟಿಸಿದರು. 

ಬಜೆಟ್ ಮೇಲೆ ಉತ್ತರ ಕೊಡುವಾಗಿ ಸಿಎಂ ಬೊಮ್ಮಾಯಿ ಅವರು ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ ಆದಾಯ ಮಿತಿ ಪ್ರಮಾಣ ಹೆಚ್ಚಳ ಮಾಡುವ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು. 

ಈವರೆಗೂ ನಾವು ಗ್ರಾಮೀಣ ಭಾಗಗಳಲ್ಲಿ 32 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ 87 ಸಾವಿರ ರೂ. ಆದಾಯ ಮಿತಿಯನ್ನು ನೀಡಿದ್ದೆವು. ಮಾನದಂಡದ ಪ್ರಕಾರವಾಗಿ ನಿಗದಿಪಡಿಸಲಾಗಿತ್ತು ಎಂದು ಸಚಿವ ಸೋಮಣ್ಣ ಸಮರ್ಥಿಸಿಕೊಂಡಿದ್ದರು. 

Bengaluru Suburban Rail: 4 ವರ್ಷದೊಳಗೆ ಸಬ್‌ ಅರ್ಬನ್‌ ರೈಲು ಯೋಜನೆ ಪೂರ್ಣ: ಸೋಮಣ್ಣ

ಈ ವೇಳೆ ಸಭಾಧ್ಯಕ್ಷರು ಸುಳ್ಳು ಪ್ರಮಾಣ ಪತ್ರಗಳನ್ನು ಕೊಟ್ಟುಬಿಡಿ. ಈಗ ನಡೆಯುತ್ತಿರುವುದು ಅದೇ ತಾನೆ. ಸುಳ್ಳು ದಾಖಲೆಗಳನ್ನು ಕೊಟ್ಟರೆ ಸಾಕು ಫಲಾನುಭವಿಗಳನ್ನು ಹೇಗೋ ಆಯ್ಕೆ ಮಾಡುತ್ತಾರೆ. ಈಗ ಅದೇ ತಾನೆ ನಡೆಯುತ್ತಿರುವುದು ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. 

ಈ ವೇಳೆ ಶಾಸಕ ರಮೇಶ್‍ಕುಮಾರ್ ಪ್ರವೇಶಿಸಿ, ಈ ಹಿಂದೆಯೂ ವಸತಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಗೆ ಆದಾಯ ಮಿತಿ ಹೆಚ್ಚಳ ಮಾಡಬೇಕೆಂದು ಚರ್ಚಿಸಲಾಗಿತ್ತು. ಸರ್ಕಾರ ಪರಿಶೀಲನೆ ಮಾಡುತ್ತದೆ ಎಂದು ಹೇಳಿದರೆ ಹೇಗೆ? ಒಂದು ಆದಾಯ ಮಿತಿ ಪ್ರಮಾಣವನ್ನು ಕಡಿಮೆಯಾದರೂ ಮಾಡಿ ಇಲ್ಲವೇ ಹೆಚ್ಚಳವಾದರೂ ಮಾಡಿ. ಸರ್ಕಾರ ಇಷ್ಟು ನಿಗದಿಪಡಿಸಿದರೆ ಮನೆ ಕಟ್ಟಿಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!