ಕಾಂಗ್ರೆಸ್ ಉಗ್ರರನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ, ತೇಜಸ್ವಿ ಸೂರ್ಯ ಆಕ್ರೋಶ

By Suvarna NewsFirst Published Dec 18, 2022, 8:22 PM IST
Highlights

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪಟಾಕಿಗಳಂತೆ ಬಾಂಬ್ ಗಳು ಬ್ಲಾಸ್ಟ್ ಆಗುತ್ತಿದ್ದವು, ಆದ್ರೆ ನರೇಂದ್ರ ಮೋದಿ ಅವಧಿಯಲ್ಲಿ ಅವೆಲ್ಲವಕ್ಕೂ ಕಡಿವಾಣ ಬಿದ್ದಿದೆ. ಎಲ್ಲೇ ಉಗ್ರ ಚಟುವಟಿಕೆಗಳು ನಡೆದರೂ ಆ ಘಟನೆಗಳನ್ನ ಮತ ಬ್ಯಾಂಕಗಳಿಗೆ ಬಳಸಿಕೊಳ್ಳುತ್ತದೆಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮನಹಳ್ಳಿ (ಡಿ.18): ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪಟಾಕಿಗಳಂತೆ ಬಾಂಬ್ ಗಳು ಬ್ಲಾಸ್ಟ್ ಆಗುತ್ತಿದ್ದವು, ಆದ್ರೆ ನರೇಂದ್ರ ಮೋದಿ ಅವಧಿಯಲ್ಲಿ ಅವೆಲ್ಲವಕ್ಕೂ ಕಡಿವಾಣ ಬಿದ್ದಿದೆ, ಇನ್ನೂ ಎಲ್ಲೇ ಉಗ್ರ ಚಟುವಟಿಕೆಗಳು ನಡೆದರೂ ಆ ಘಟನೆಗಳನ್ನ ಮತ ಬ್ಯಾಂಕಗಳಿಗೆ ಬಳಸಿಕೊಳ್ಳುತ್ತದೆಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು. ಇವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಳೇಕಹಳ್ಳಿ ಬಳಿ ದಿವಂಗತ ಮಾಜಿ ಕೇಂದ್ರ ಸಚಿವ, ಅನಂತಕುಮಾರ್ ಕ್ರೀಡಾಂಗಣ ಉದ್ಘಾಟಸಿ ಮಾಧ್ಯಮಗಳೊಂದಿಗೆ ಮಾತಾನಾಡತ್ತಾ  ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರವರ ಉಗ್ರ ಪರ ಹೇಳಿಕೆಯನ್ನ ಖಂಡಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಜನತೆಯ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಎನ್ ಐ ಎ ಕಛೇರಿಗಳನ್ನ ಆರಂಬಿಸಲು ಬಿಜೆಪಿ ಸಂಸದರ ಸತತ ಪ್ರಯತ್ನದಿಂದ ಸಾಧ್ಯವಾಗಿದೆ.

ಇನ್ನೂ ಯಾವುದೇ ಸ್ಪೋಟಗಳು ನಡೆದಾಗ ಎನ್ ಐ ಎ ತನಿಖೆ ಆರಂಬಿಸುವ ಮುನ್ನವೇ ಕಾಂಗ್ರೆಸ್ ತಮ್ಮ ಸಹೋದರರನ್ನ ಉಳಿಸಿಕೊಳ್ಳಲು ಕ್ಲೀನ್ ಚಿಟ್ ನೀಡಲು ಮುಂದಾಗುತ್ತಾರೆಂದು ವ್ಯಂಗ್ಯವಾಡಿದರು,‌ ಇದೇ ಸಂದರ್ಭದಲ್ಲಿ ಮಾತಾನಾಡಿದ ಬೊಮ್ಮನಹಳ್ಳಿ ಶಾಸಕ.ಸತೀಶ್ ರೆಡ್ಡಿ ಅನಂತಕುಮಾರರವರಿಗೆ ಅತ್ಯಂತ ಇಷ್ಟವಾದ  ಹಾಗಾಗಿಯೇ ಅನಂತಕುಮಾರರವರ ಕ್ರೀಡಾಂಗಣವೆಂದು ನಾಮಕರಣ ಮಾಡಲಾಯಿತೆಂದು ತಿಳಿಸಿದರು.

ಡಿಕೆಶಿ ಹೇಳಿಕೆ ತಿರುಚಿ ತಪ್ಪು ಮಾಹಿತಿ ನೀಡಲು ಬಿಜೆಪಿ ಪ್ರಯತ್ನ: ಸಿದ್ದು
ಮಂಗಳೂರು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡಿದ್ದಾರೆ ಅಷ್ಟೆ. ಉಗ್ರವಾದವನ್ನು ಬೆಂಬಲಿಸುತ್ತೇನೆ ಎಂದು ಅವರು ಹೇಳಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾರೆ. ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಪಕ್ಷದವರು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಹೇಳಿಕೆಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಇಂಥ ಹೇಳಿಕೆಗಳೇ ಬೇಕಾಗಿರೋದು. ಕುಕ್ಕರ್‌ ಸ್ಫೋಟ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬಿಜೆಪಿಯವರು ಅವರ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ಜನರ ಮುಂದೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗೃಹ ಸಚಿವ ಆರಗ ವಿರುದ್ಧ ಕಾಂಗ್ರೆಸ್‌ ಆಡಿಯೋ ಬಾಂಬ್‌..!

ಬಿಜೆಪಿಗೆ ಅಧಿಕಾರವಿದೆ, ಡಬಲ್‌ ಎಂಜಿನ್‌ ಸರ್ಕಾರವಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂಬತ್ತು ವರ್ಷ ಆಗಿದೆ. ಅವರೇ ಭಯೋತ್ಪಾದನೆಯನ್ನು ಹತ್ತಿಕ್ಕಲಿ. ದೇಶದಲ್ಲಿ ಎಲ್ಲೆಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆಯೋ ಅದನ್ನು ನಿಯಂತ್ರಿಸಲಿ. ಅವರಿಗೆ ಅಧಿಕಾರ ಅಧಿಕಾರ ಕೊಟ್ಟಿದ್ದು ಕೇವಲ ಜನರನ್ನು ಪ್ರಚೋದಿಸಿ, ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡಲು ಅಲ್ಲ ಎಂದರು.

Madikeri: ಎಚ್ ವಿಶ್ವನಾಥ್ ಗೆ ತಲೆಕೆಟ್ಟಿರಬೇಕು, ಶಾಸಕ ಕೆ ಜಿ ಬೋಪಯ್ಯ ಆಕ್ರೋಶ

ಅನೈತಿಕ ಪೊಲೀಸ್‌ಗಿರಿ ವಿರುದ್ಧ ಕ್ರಮ: ಅನೈತಿಕ ಪೊಲೀಸ್‌ಗಿರಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ.ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇದಕ್ಕೆ ಪೋ›ತ್ಸಾಹ ನೀಡುವ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ಸುಮಾರು ಏಳೆಂಟು ಪ್ರಕಣಗಳಾಗಿದ್ದು, ಇದನ್ನು ನಾನು ಖಂಡಿಸುತ್ತೇನೆ ಎಂದರು.

click me!