ರೈತರು 60 ವರ್ಷಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ, ಇಂಥವರನ್ನು ಮಾಜಿ ಶಾಸಕ ಹರತಾಳು ಹಾಲಪ್ಪನವರು ರಕ್ಷಣೆ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರಿಗೆ ಕಿರುಕುಳ ನೀಡುವುದರೊಂದಿಗೆ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ರತ್ನಾಕರ್ ಹೊನಗೋಡ
ಆನಂದಪುರ(ಜೂ.10): ಗೌತಮಪುರ ಸಮೀಪದ ಸಂಪಳ್ಳಿ ಗ್ರಾಮದ ರೈತರ ಜಮೀನು ಕಬಳಿಸಲು ಕೆಲವು ಕಾಂಗ್ರೆಸ್‌ನ ಮುಖಂಡರು ಯತ್ನಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಜಿಪಂ ಮಾಜಿ ಸದಸ್ಯ ರತ್ನಾಕರ್ ಹೊನಗೋಡ ವಾಗ್ದಾಳಿ ನಡೆಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಲವು ಕಾಂಗ್ರೆಸ್ ಮುಖಂಡರು ತಮ್ಮ ಆದಾಯಕ್ಕೆಯಲ್ಲಿ ಕಡಿವಾಣ ಬೀಳುತ್ತೋ ಎನ್ನುವ ಹತಾಶೆ ಮಾತುಗಳನ್ನು ಆಡುತ್ತಿದ್ದಾರೆ ಎಂದು ಸೋಮಶೇಖರ್ ಲಾವಗೆರೆ ವಿರುದ್ಧ ವಾಗ್ವಾದ ನಡೆಸಿದರು.
ದೇಶ ಕಟ್ಟುವಲ್ಲಿ ಯುವಜನತೆ ಜವಾಬ್ದಾರಿ ದೊಡ್ಡದು: ಸಂಸದ ಬಿ.ವೈ.ರಾಘವೇಂದ್ರ
ರೈತರು 60 ವರ್ಷಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ, ಇಂಥವರನ್ನು ಮಾಜಿ ಶಾಸಕ ಹರತಾಳು ಹಾಲಪ್ಪನವರು ರಕ್ಷಣೆ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರಿಗೆ ಕಿರುಕುಳ ನೀಡುವುದರೊಂದಿಗೆ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ನ್ಯಾಯ ದೊರಕಿಸಲು ಹೊರಾಟ ಮಾಡುತ್ತಿರುವಂತಹ ಮಾಜಿ ಶಾಸಕರಾದ ಹರತಾಳು ಹಾಲಪ್ಪನವರ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ. ಮಾಜಿ ಶಾಸಕರಿಗೆ ಗೌರವ ಕೊಟ್ಟು ಮಾತನಾಡುವುದನ್ನು ಮೊದಲು ಕಲಿಯಬೇಕು. ರೈತರಿಗೆ ನ್ಯಾಯ ಕೊಡಿಸುವ ಅದೃಷ್ಟಿಯಲ್ಲಿ ಕಾಗೋಡು ತಿಮ್ಮಪ್ಪನವರ ಹಾದಿಯಲ್ಲಿ ಹರತಾಳು ಹಾಲಪ್ಪನವರು ರೈತರ ಪರ ಹೋರಾಡುವಂತಹ ವ್ಯಕ್ತಿಯಾಗಿದ್ದಾರೆ. ಸಂಪಳ್ಳಿ ಪ್ರಕರಣ ಕೂಡ ರೈತರಿಗೆ ಅನ್ಯಾಯವಾಗುತ್ತಿದೆ, ಇಂತಹ ಸಂದರ್ಭದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ನ್ಯಾಯದ ಪರ ವಹಿಸಬೇಕಾಗುತ್ತದೆ. ರೈತರನ್ನು ಒಕ್ಕಲಿಬ್ಬಿಸುವ ಪ್ರಯತ್ನ ಯಾರೇ ಮಾಡಿದರೂ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಭರ್ಮಪ್ಪ, ರೇವಪ್ಪ ಹೊಸಕೊಪ್ಪ ಉಪಸ್ಥಿತರಿದ್ದರು.