ಕಾಂಗ್ರೆಸ್ ಪಕ್ಷ ದೇವಾಲಯದಂತಿದ್ದು, ಹಿಂದು, ಮುಸ್ಲಿಂ, ಕ್ರೈಸ್ತರನ್ನು ಸಮಾನವಾಗಿ ನೋಡುವುದನ್ನು ಧ್ಯೇಯವಾಗಿಸಿಕೊಂಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕೊರಟಗರೆ (ಮಾ.06): ಕಾಂಗ್ರೆಸ್ ಪಕ್ಷ ದೇವಾಲಯದಂತಿದ್ದು, ಹಿಂದು, ಮುಸ್ಲಿಂ, ಕ್ರೈಸ್ತರನ್ನು ಸಮಾನವಾಗಿ ನೋಡುವುದನ್ನು ಧ್ಯೇಯವಾಗಿಸಿಕೊಂಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಅವರು ಕೊರಟಗೆರೆಯಲ್ಲಿ ರಾಜೀವ್‌ಗಾಂಧಿ ಭವನ ಉದ್ಘಾಟನೆಯ ನಂತರ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಾಟಾಗಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ಇದು ಕಾಂಗ್ರೆಸ್ ಪಕ್ಷ ದೇವಾಲಯವಿದ್ದಂತೆ. ಅನೇಕ ಜನ ದೇವಾಲಯ ಕಟ್ಟುತ್ತಾರೆ. ಹರಕೆ ಹೊರುತ್ತಾರೆ. ಆದರೆ ಈ ಗುಡಿ ಎಲ್ಲರನ್ನೂ ಸರಿ ಸಮಾನವಾಗಿ ನೋಡುವ ಗುಡಿಯಾಗಿದೆ. ನಮ್ಮ ಹೋರಾಟಗಳು ಬಹಳ ಇವೆ. ಆ ಕಡೆ ಲಕ್ಷ್ಯ ಕೊಡಬೇಕಿದೆ. ಬಿಜೆಪಿಯವರು ಕೇಂದ್ರ ಹಾಗೂ ರಾಜ್ಯದಲ್ಲಿ ಯಾವ ರೀತಿ ಪ್ರಜಾಪ್ರಭುತ್ವ ನಡೆಸುತ್ತಿದ್ದಾರೆ. ಸಂವಿಧಾನವನ್ನು ಯಾವ ರೀತಿ ದುರುಪಯೋಗ ಮಾಡುತ್ತಿದ್ದಾರೆ ಎಂಬ ಕುರಿತು ನೀವು ಯೋಚನೆ ಮಾಡಬೇಕಿದೆ ಎಂದು ಖರ್ಗೆ ಹೇಳಿದರು.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮೋದಿ ಏನು ಹೇಳುತ್ತಾರೆ: ಎಲ್ಲವನ್ನೂ ನೀವು ಯೋಚನೆ ಮಾಡಬೇಕಿದೆ. ಪ್ರಧಾನಿ ನರೇಂದ್ರಮೋದಿಯವರು ನನ್ನ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ನಮ್ಮನ್ನು ಟೀಕೆ ಟಿಪ್ಪಣಿ ಮಾಡೋಕೆ ಅವರಿಗೆ ಅಧಿಕಾರ ಇದೆಯೇ. ಸರ್ಕಾರಿ ಕಾರು, ಸರ್ಕಾರಿ ವಿಮಾನ ಬಳಸಿಕೊಂಡು ನಮ್ಮನ್ನು ಟೀಕೆ ಮಾಡ್ತಾರೆ. ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಭ್ರಷ್ಠಾಚಾರದ ಬಗ್ಗೆ ಮೋದಿ,ಅಮಿತ್ ಷಾ ಶಾ ಏನು ಹೇಳುತ್ತಾರೆ. ನಿನ್ನ ಕೆಳಗಡೆ ಭ್ರಷ್ಠಾಚಾರ ಇದೆ. ಅದನ್ನೇ ನೀವು ನೋಡುತ್ತಿಲ್ಲ. 40% ನೀವು ಹೊಡೆಯಿರಿ, ಮಿಕ್ಕಿದ್ದು ಪಾರ್ಟಿಗೆ ಕಳಿಸಿ ಅಂತಾರೆ. ಅಲ್ಲಿಗೆ 100% ಅವರಿಗೆ ಸರಿಹೋಯ್ತು. ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ಪ್ರಧಾನಿಯನ್ನು ನೋಡಿಲ್ಲಾ. ಎಲ್ಲಿ ಹೋದ್ರು ಕಾಂಗ್ರೆಸ್ ಮುಖಂಡರನ್ನು ಬಯ್ಯೋದು ಪ್ರಧಾನಿ ನರೇಂದ್ರ ಮೋದಿಯವರಿಗೆ ಚಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಧೂಳಿಪಟ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
ಎಚ್‌ಎಎಲ್ ಯುನಿಟ್ ತಂದವರಾರು: ತುಮಕೂರಿನಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ಡಿವಿಷನ್ ಶುರು ಮಾಡಿದರು. ಎಚ್‌ಎಎಲ್ ಯುನಿಟ್ ತಂದವರು ಯಾರು. ನಮ್ಮ ಕಾಂಗ್ರೆಸ್ ಪಕ್ಷದ ಎ.ಕೆ. ಆ್ಯಂಟನಿಯವರು ಅಪೂ›ವ್ ಮಾಡಿಕೊಟ್ಟದನ್ನು ತಂದು ನಾನು ಮಾಡಿದೆ ಎನ್ನುತ್ತಾರೆ. ಮೋದಿ ಅವರು ಒಂದಾದ್ರೂ ಡ್ಯಾಂ ಕಟ್ಟಿದ್ದಾರಾ, ನೀರಾವರಿ ಯೋಜನೆ ಮಾಡಿದ್ದಾರಾ. ಹೇಮಾವತಿ ನೀರು ಬಂತು. ಅದು ಏನ್ ಮೋದಿ ಅವರು ತಂದು ಕೊಟ್ಟಿದ್ದಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಖರ್ಗೆ, ಪ್ರತಿಯೊಂದು ಕಡೆ ಮೋದಿ, ಶಾ ಹೋಗಿ ನಾನ್ ಮಾಡಿದೆ ಎಂದು ಹೇಳುತ್ತಾರೆ ಎಂದು ಲೇವಡಿ ಮಾಡಿದರು.
2014 ರಲ್ಲಿ ಸ್ವಾತಂತ್ರ್ಯ ಬಂದಿದೆ ಎಂದು ತಿಳಿದಿದ್ದಾರೆ: ದೇಶಕ್ಕೆ ಸ್ವಾತಂತ್ರ್ಯ 2014ರಲ್ಲಿ ಬಂದಿದೆ ಅಂತಾ ತಿಳಿದುಕೊಂಡಿದ್ದಾರೆ. 1947 ರಿಂದ 2014ರವರೆಗೂ ಸಾವಿರಾರು ಕೆಲಸವನ್ನು ನಾವು ಕಾಂಗ್ರೆಸ್ ಪಕ್ಷದಿಂದ ಮಾಡಿದ್ದೇವೆ. ಹಸಿರು ಕ್ರಾಂತಿ ಮಾಡಿ ಜನರ ಹೊಟ್ಟೆತುಂಬಿಸೋಕೆ ಪ್ರಯತ್ನ ಮಾಡಿದ್ದೇವೆ. ಮೋದಿ ಬರೋಕೆ ಮುಂಚೆ ನಾವೇನು ಉಪವಾಸ ಇರಲಿಲ್ಲ. ಊಟನೇ ಮಾಡುತ್ತಿರಲಿಲ್ಲವೇ, ವಿದ್ಯುತ್ ಇರಲಿಲ್ಲವೇ, ಮೋದಿ ಬಂದ ಮೇಲೆನೇ ಎಲ್ಲಾ ಆಗಿದ್ದು ಎಂಬಂತೆ ಆಡುತ್ತಿರುವುದು ಬೌದ್ಧಿಕ ದಿವಾಳಿಕೋರತನತದ ಪರಮಾವಧಿ ಎಂದು ಖರ್ಗೆ ಲೇವಡಿ ಮಾಡಿದರು.
ದೇಶದಲ್ಲಿ ಸೂಜಿನೂ ತಯಾರಾಗುತ್ತಿರಲಿಲ್ಲ: ಸ್ವತಂತ್ರ ಬಂದ ಹೊಸದರಲ್ಲಿ ಭಾರತದಲ್ಲಿ ಒಂದು ಗುಂಡು ಸೂಜೀನೂ ತಯಾರು ಆಗುತ್ತಿರಲಿಲ್ಲ. ಅಂತದ್ರಲ್ಲಿ ಆಕಾಶಕ್ಕೆ ಹೋಗೋ ರಾಕೆಟ್ ತಯಾರು ಮಾಡಿದೆವು. ಆಗ 16% ಸಾಕ್ಷರತೆಯಿತ್ತು. ಇಂದು 73% ಸಾಕ್ಷರತೆಯಿದೆ. ಇದೇನು ಮೋದಿ ಮಾಡಿದ್ದಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಬ್ರಿಟೀಷರಿಗೆ ಹೆದರಲಿಲ್ಲಾ, ನಿಮಗೆ ಹೆದರುತ್ತೇವಾ: ಕಾಂಗ್ರೆಸ್ ಪಾರ್ಟಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಪಕ್ಷ. ಬ್ರಿಟಿಷರಿಗೆ ಹೆದರಲಿಲ್ಲಾ. ನಿಮಗೇನ್ ಹೆದರುತ್ತೀವಾ ಎಂದು ಪ್ರಶ್ನಿಸಿದ ಖರ್ಗೆ, ಪ್ರಜಾಪ್ರಭುತ್ವ ಉಳಿಸೋಕೆ ನೀವೆಲ್ಲಾ ಒಗ್ಗಟ್ಟಾಗಬೇಕು. ಬೂತ್ ಮಟ್ಟದಲ್ಲಿ ಮನೆಮನೆಗೆ ಹೋಗಿ ಇವರ ಕೆಟ್ಟಕೆಲಸ ಹೇಳಬೇಕು. ಪಂಚಾಯ್ತಿ ಎಲಕ್ಷನ್‌ಗೂ ಮೋದಿ, ಜಿಲ್ಲಾ ಪಂಚಾಯ್ತಿ ಎಲೆಕ್ಷನ್‌ಗೂ ಮೋದಿ, ಎಂಎಲ್‌ಎ, ಎಂಪಿ ಎಲೆಕ್ಷನ್‌ಗೂ ಮೋದಿ.. ಏನ್ ಮೋದಿ ಬಂದು ಇಲ್ಲಿ ಆಳ್ತಾರಾ ಎಂದು ಆಕ್ರೋಶವ್ಯಕಪಡಿಸಿದರು.
ಅಭಿವೃದ್ಧಿ ವಿರೋಧಿ ಸಿದ್ದರಾಮಯ್ಯ: ಸಂಸದ ಪ್ರತಾಪ್ ಸಿಂಹ ಕಿಡಿ
60.3% ಜನರು ಮೋದಿಗೆ ವಿರುದ್ಧ ಇದ್ದಾರೆ: ಮೋದಿ ಏನ್ 51% ವೋಟ್ ತೆಗೆದುಕೊಂಡು ಅಧಿಕಾರಕ್ಕೆ ಬಂದಿಲ್ಲಾ. 60.3 % ಜನರು ಅವರಿಗೆ ವಿರುದ್ಧ ಇದ್ದಾರೆ. ಕೇಂದ್ರ ಸರ್ಕಾರದಲ್ಲಿ 30 ಲಕ್ಷ ನೌಕರಿ ಖಾಲಿ ಇದೆ. ಕರ್ನಾಟಕದಲ್ಲೇ 3 ಲಕ್ಷ ಹುದ್ದೆಗಳು ಖಾಲಿಯಿವೆ. ಇದು ತುಂಬಿ ಮೊದಲು. ನಮ್ಮ ಕಾಲದಲ್ಲಿ ಪೆಟ್ರೋಲ್ 50, 60 ರು. ಇದ್ದಾಗ ಊರು ತುಂಬ ಅರುಚಿಕೊಂಡು ತಿರುಗಾಡುತ್ತಿದ್ದರು. ಈಗ ಇವರ ಕಾಲದಲ್ಲಿ ಎಷ್ಟಿದೆ. ಈಗ ಬರೋ ಚುನಾವಣೆಯಲ್ಲಿ ಪ್ರಜಾಧ್ವನಿ ಯಶಸ್ವಿ, ವಿಜಯ ಆಗಬೇಕು. ಆಗ ರಾಜ್ಯದಲ್ಲಿ ಸುಖ,ಶಾಂತಿ,ಅಭಿವೃದ್ದಿ ಅನುಷ್ಠಾನ ಆಗುತ್ತೆ. ಬಿಜೆಪಿಗೆ ರಾಜ್ಯ ಉದ್ದಾರ, ಕಲ್ಯಾಣ ಬೇಕಾಗಿಲ್ಲಾ. ಶಾಲೆಯಲ್ಲಿ ಯಾವ ಡ್ರೆಸ್ ಹಾಕಬೇಕು ಅದು ಏನ್ ಮಾಡ್ಬೇಕು ಅನ್ನುವ ಬಿಜೆಪಿಯನ್ನು ಕಿತ್ತೊಗೆಯಲು ಎಲ್ಲರೂ ಪಣ ತೊಡಬೇಕು ಎಂದರು.