ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್‌, ಕೋಲಾರದಿಂದ ಸಿದ್ಧರಾಮಯ್ಯಗೆ ಟಿಕೆಟ್‌ ಇಲ್ಲ!

Published : Apr 15, 2023, 02:16 PM ISTUpdated : Apr 15, 2023, 06:37 PM IST
ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್‌, ಕೋಲಾರದಿಂದ ಸಿದ್ಧರಾಮಯ್ಯಗೆ ಟಿಕೆಟ್‌ ಇಲ್ಲ!

ಸಾರಾಂಶ

ಮುಂದಿನ ವಿಧಾನಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರನೇ ಪಟ್ಟಿಯಲ್ಲಿ ಒಟ್ಟು 43 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ.  

ಬೆಂಗಳೂರು (ಏ.15): ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ತನ್ನ ಮೂರನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್ 58 ಕ್ಷೇತ್ರಗಳಲ್ಲಿ ಟಿಕೆಟ್‌ ಬಾಕಿ ಇರಿಸಿಕೊಂಡಿತ್ತು. ಇದರಲ್ಲಿ 43 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದ. ಕೋಲಾರದಿಂದ ಸಿದ್ಧರಾಮಯ್ಯಗೆ ಟಿಕೆಟ್‌ ನಿರಾಕರಿಸಲಾಗಿದೆ. ತೇರದಾಳ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷೆ ಇಟ್ಟಿದ್ದ ನಟಿ ಉಮಾಶ್ರೀಗೆ ನಿರಾಸೆಯಾಗಿದ್ದು, ಅಲ್ಲಿಂದ ಸಿದ್ಧಪ್ಪ ರಾಮಪ್ಪ ಕೊಣ್ಣೂರುಗೆ ಟಿಕೆಟ್‌ ನೀಡಲಾಗಿದೆ. ಮದ್ದೂರಿನಲ್ಲಿ ರಮ್ಯಾಗೆ ಟಿಕೆಟ್‌ ನೀಡುತ್ತಾರೆ ಎನ್ನುವ ನಿರೀಕ್ಷೆ ಇದ್ದರೂ, ಅಲ್ಲಿಂದ ಕೆಎಂ ಉದಯ್‌ ಅವರಿಗೆ ನೀಡಲಾಗಿದೆ. ತರಿಕೇರೆಯಲ್ಲಿ ಜಿಎಚ್‌ ಶ್ರೀನಿವಾಸ್‌ಗೆ ಟಿಕೆಟ್‌ ನೀಡಲಾಗಿದೆ. ಭಾರೀ ಬಂಡಾಯದ ನಡುವೆಯೂ ಮಾಜಿ ರಾಜ್ಯಪಾಲೆ ಮಾರ್ಗೆರೇಟ್‌ ಆಳ್ವಾ ಅವರ ಪುತ್ರ ನಿವೇದಿತಾ ಆಳ್ವಾಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಿಂದ ಜಾನ್‌ ರಿಚರ್ಡ್‌ ಲೋಬೋ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ.

ಬಾಕಿ ಇರಿಸಿಕೊಂಡಿದ್ದ 58 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ ಮೂರನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆಯಾಗಿದ್ದು, ಇನ್ನೂ 15 ಕ್ಷೇತ್ರಗಳಲ್ಲಿ ಟಿಕೆಟ್‌ ಬಾಕಿ ಇರಿಸಿಕೊಳ್ಳಲಾಗಿದೆ. ಅಖಂಡ ಶ್ರೀನಿವಾಸ್‌ ಮೂರ್ತಿಗೆ ಇನ್ನೂ ಟಿಕೆಟ್‌ ಘೋಷಣೆಯಾಗಿಲ್ಲ. ಹರಿಹರದಲ್ಲಿ ರಾಮಪ್ಪ ಅವರಿಗೂ ಮೂರನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆ ಮಾಡಿಲ್ಲ. ಕೋಲಾರ ಕ್ಷೇತ್ರದಿಂದ ಭಾರೀ ನಿರೀಕಷೆ ಹುಟ್ಟಿಸಿದ್ದ ಸಿದ್ಧರಾಮಯ್ಯ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿಲ್ಲ. ಕೋಲಾರದಿಂದ ಕೊತ್ತೂರು ಜಿ ಮಂಜುನಾಥ್‌ಗೆ ಟಿಕೆಟ್‌ ನೀಡಲಾಗಿದೆ.

Breaking : ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಭವಾನಿಗಿಲ್ಲ ಹಾಸನ, ಸ್ವರೂಪ್‌ಗೆ ಸಿಂಹಾಸನ!

ಕಾಂಗ್ರೆಸ್‌ ಹಿರಿಯ ನಾಯಕಿ ಮೋಟಮ್ಮ ಅವರ ಪುತ್ರಿ ನಯನ ಮೋಟಮ್ಮ ಅವರಿಗೆ ಮೂಡಿಗೆರೆ ಮೀಸಲು ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ. ಶಿಕಾರಿಪುರದಿಂದ ಕುರುಬ ಸಮುದಾಯದಿಂದ ಜಿಬಿ ಮಾಲತೇಶ್‌ ಅವರಿಗೆ ಟಿಕೆಟ್‌ ನೀಡಲಾಗಿದ್ದರೆ, ಶಿವಮೊಗ್ಗ ನಗರದಿಂದ ಎಸ್‌ಸಿ ಯೋಗೇಶ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಇನ್ನು ನಿರೀಕ್ಷೆಯಂತೆ ಅರಸೀಕೆರೆ ಟಿಕೆಟ್‌ಅನ್ನು ಶಿವಲಿಂಗೇಗೌಡರಿಗೆ ನೀಡಲಾಗಿದೆ. ದೇವರ ಹಿಪ್ಪರಿಗೆಯಲ್ಲಿ ಎಸ್‌ಆರ್‌ ಪಾಟೀಲ್‌ಗೆ ಟಿಕೆಟ್‌ ಘೋಷಣೆ ಮಾಡಲಾಗಿಲ್ಲ. ಹಾಲಿ ಶಾಸಕಿ ಕುಸುಮಾ ಶಿವಳ್ಳಿಗೆ ಕುಂದಗೋಳದಿಂದ ಟಿಕೆಟ್‌ ನೀಡಲಾಗಿದೆ. ಪುತ್ತೂರಿನಲ್ಲಿ ಶಕುಂತಲಾ ಶೆಟ್ಟಿಗೆ ಟಿಕೆಟ್‌ ಮಿಸ್‌ ಆಗಿದ್ದು, ಅಶೋಕ್‌ ರೈಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಬೊಮ್ಮನಹಳ್ಳಿ ಕ್ಷೇತ್ರದಿಂದ ನಿರೀಕ್ಷೆಯಂತೆ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡಗೆ ಟಿಕೆಟ್‌ ನೀಡಲಾಗಿದೆ.

JDS 3ನೇ ಪಟ್ಟಿ ಶೀಘ್ರದಲ್ಲೇ ಘೋಷಣೆ: ಸಂಭಾವ್ಯ ಪಟ್ಟಿ ರೆಡಿ

ಕಾಂಗ್ರೆಸ್‌ ಮೂರನೇ ಪಟ್ಟಿಯಲ್ಲೂ ಮಂಗಳೂರು ಉತ್ತರ ಕ್ಷೇತ್ರ ಕಗ್ಗಂಟಾಗಿಯೇ ಉಳಿದಿದೆ. ಇಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ಅಭ್ಯರ್ಥಿಗಳ ಮಧ್ಯೆ ಬಿಗ್ ಫೈಟ್ ಸಿದ್ದು ಬಣದ ಮೊಯಿದ್ದೀನ್ ಬಾವಾ, ಡಿಕೆಶಿ ಬಣದ ಇನಾಯತ್ ಆಲಿ ಇಲ್ಲಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಇಬ್ಬರು ಅಭ್ಯರ್ಥಿಗಳ ಮಧ್ಯೆ ಟಿಕೆಟ್ ಹಂಚಿಕೆ ಗೊಂದಲವಿದೆ. ಮಾಜಿ ಶಾಸಕನಿಗೆ ನೀಡಬೇಕಾ? ಅಥವಾ ಹೊಸ ಅಭ್ಯರ್ಥಿಗೆ ನೀಡಬೇಕಾ ಅನ್ನೋ ಗೊಂದಲ ಇನ್ನೂ ಮುಂದುವರಿದಿದದೆ. ಹೈಕಮಾಂಡ್ ಮಟ್ಟದಲ್ಲೂ ಈ ಕ್ಷೇತ್ರದ ಟಿಕೆಟ್ ಹಂಚಿಕೆ ಭಾರೀ ಕಗ್ಗಂಟಾಗಿದೆ. ಟಿಕೆಟ್ ಹಂಚಿಕೆಯಾದ್ರೆ ಅಸಮಾಧಾನ ಸ್ಪೋಟ ಸಾಧ್ಯತೆ ಇದೆ. ಹೀಗಾಗಿ ಮೂರನೇ ಪಟ್ಟಿಯಲ್ಲೂ ಉತ್ತರ ಕ್ಷೇತ್ರದ ಟಿಕೆಟ್ ಹಂಚಿಕೆ ಮಾಡಲಾಗಿಲ್ಲ.

ಕಾಂಗ್ರೆಸ್‌ ಮೂರನೇ ಪಟ್ಟಿಯಲ್ಲಿ ಟಿಕೆಟ್‌ ಪಡೆದವರ ಲಿಸ್ಟ್‌:

1. ಅಥಣಿ - ಲಕ್ಷ್ಮಣ್ ಸವದಿ
2. ಮೂಡಿಗೆರೆ - ನಯನ ಮೋಟಮ್ಮ
3. ಅರಸೀಕೆರೆ - ಶಿವಲಿಂಗೇಗೌಡ 
4. ರಾಯಭಾಗ - ಮಹಾವೀರ್ ಮೋಹಿತ್
5. ಅರಬಾವಿ - ಅರವಿಂದ ದಳವಾಯಿ 
6. ಬೆಳಗಾವಿ ಉತ್ತರ - ಆಸೀಫ್‌ ಸೇಠ್
7. ಬೆಳಗಾವಿ ದಕ್ಷಿಣ - ಪ್ರಭಾವತಿ ಮಾಸ್ತಿಮರಡಿ
8. ತೇರದಾಳ - ಸಿದ್ದಪ್ಪ‌ ಕೊಣ್ಣೂರು
9. ದೇವರ ಹಿಬ್ಬರಗಿ - ಶರಣಪ್ಪ ಸುಣಗಾರ್
10. ಸಿಂಧಗಿ - ಅಶೋಕ್ ‌ಮನಗೊಳಿ 
11. ಕಲಬುರಗಿ ಗ್ರಾಮೀಣ - ರೇವೂನಾಯಕ್ ಬೆಳಮಗಿ 
12. ಔರಾದ್ - ಭೀಮ್ ಸೇನ್ ರಾವ್ ಶಿಂಧೆ
13. ಮಾನ್ವಿ - ಹಂಪಯ್ಯ ನಾಯಕ್
14. ದೇವದುರ್ಗ - ಶ್ರೀದೇವಿ ನಾಯಕ್ 
15. ಸಿಂಧನೂರು - ಹಂಪನಗೌಡ ಬಾದರ್ಲಿ
16. ಶಿರಹಟ್ಟಿ - ಸುಜಾತ ದೊಡ್ಡಮನಿ
17. ನವಲಗುಂದ - ಕೋನರೆಡ್ಡಿ
18. ಕುಂದಗೋಳ‌ - ಕುಸುಮಾ ಶಿವಳ್ಳಿ
19. ಕುಮಟಾ - ನಿವೇದಿತ್ ಆಳ್ವಾ
20. ಸಿರಗುಪ್ಪ - ಬಿಎಂ ನಾಗರಾಜ್
21. ಬಳ್ಳಾರಿ ನಗರ - ನಾ.ರ ಭರತ್ ರೆಡ್ಡಿ
22. ಜಗಳೂರು - ದೇವೇಂದ್ರಪ್ಪ
23. ಹರಪನಹಳ್ಳಿ - ಎನ್.‌ ಕೊಟ್ರೇಶ್
24. ಹೊನ್ನಾಳಿ - ಶಾಂತನಗೌಡ 
25. ಶಿವಮೊಗ್ಗ ಗ್ರಾಮೀಣ - ಶ್ರೀನಿವಾಸ್ ಕರಿಯಣ್ಣ
26. ಶಿವಮೊಗ್ಗ - ಎಚ್.ಸಿ ಯೋಗೇಶ್ 
27. ಶಿಕಾರಿಪುರ - ಜಿಬಿ ಮಾಲತೇಶ್
28. ಕಾರ್ಕಳ - ಉದಯ್ ಶೆಟ್ಟಿ
29.‌ ತರೀಕೆರೆ - ಶ್ರೀನಿವಾಸ್
30. ತುಮಕೂರು ಗ್ರಾಮೀಣ - ಷಣ್ಮುಗಪ್ಪ ಯಾದವ್
31. ಚಿಕ್ಕಬಳ್ಳಾಪುರ - ಪ್ರದೀಪ್ ಈಶ್ವರ್ 
32. ಕೋಲಾರ - ಕೊತ್ತೂರು ಮಂಜುನಾಥ್
33. ದಾಸರಹಳ್ಳಿ - ಧನಂಜಯ್ ಗೌಡ
34. ಚಿಕ್ಕಪೇಟೆ - ಆರ್.ವಿ ದೇವರಾಜ್ 
35. ಬೊಮ್ಮನಹಳ್ಳಿ - ಉಮಾಪತಿ ಶ್ರೀನಿವಾಸ್ ಗೌಡ
36. ಬೆಂಗಳೂರು ದಕ್ಷಿಣ - ಆರ್.ಕೆ ರಮೇಶ್ 
37. ಚನ್ನಪಟ್ಟಣ - ಗಂಗಾಧರ್ 
38. ಮದ್ದೂರು ‌- ಉದಯ್ ಗೌಡ
39. ಹಾಸನ - ಬನವಾಸಿ ರಂಗಸ್ವಾಮಿ
40. ಮಂಗಳೂರು ದಕ್ಷಿಣ - ಜೆ.ಆರ್ ಲೋಬೋ
41. ಪುತ್ತೂರು - ಅಶೋಕ್‌ ರೈ
42. ಕೃಷ್ಣರಾಜ - ಎಂ.ಕೆ ಸೋಮಶೇಖರ್
43. ಚಾಮರಾಜ - ಹರೀಶ್ ಗೌಡ


PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!