ರಾಜ್ಯ ಸಭಾ ಸದಸ್ಯ ಲೆಹರ್‌ಸಿಂಗ್ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್ ನಾಯಕರು, ಭಾಗ್ಯಲಕ್ಷ್ಮೀ ಸೀರೆ ಖರೀದಿಯಲ್ಲಿ 23 ಕೋಟಿ ರು. ಅಕ್ರಮ ಎಸಗಿರುವ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಅಕ್ರಮ ಕುರಿತು ಎಸ್ ಐಟಿ ಮೂಲಕ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಬೆಂಗಳೂರು(ಸೆ.06): ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ ವಿರುದ್ಧ ಭೂ ಹಗರಣದ ಆರೋಪ ಮಾಡಿದ್ದ ರಾಜ್ಯ ಸಭಾ ಸದಸ್ಯ ಲೆಹರ್‌ಸಿಂಗ್ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್ ನಾಯಕರು, ಭಾಗ್ಯಲಕ್ಷ್ಮೀ ಸೀರೆ ಖರೀದಿಯಲ್ಲಿ 23 ಕೋಟಿ ರು. ಅಕ್ರಮ ಎಸಗಿರುವ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಅಕ್ರಮ ಕುರಿತು ಎಸ್ ಐಟಿ ಮೂಲಕ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.
2011ರಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಅಡಿ ಫಲಾನುಭವಿಗಳು ಮತ್ತು ಮಹಿಳೆಯರಿಗೆ 10.68 ಸೀರೆಗಳನ್ನು ಹಂಚಲಾಗಿತ್ತು. ಆದರೆ, ಆ ಸೀರೆಗಳನ್ನು ರಾಜ್ಯದ ನೇಕಾರರು ಮತ್ತು ಸೀರೆ ಉತ್ಪಾದನಾ ಸಹಕಾರ ಸಂಘಗಳನ್ನು ನಿರ್ಲಕ್ಷಿಸಿ ಸೂರತ್‌ನಿಂದ ಹೆಚ್ಚಿನ ಹಣ ನೀಡಿ ಖರೀದಿ ಮಾಡಲಾಗಿತ್ತು ಎಂದರು. ಈ ಅಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ ಪಾತ್ರ ಇರುವ ಆರೋಪವಿದೆ. ಅಲ್ಲದೆ, ಈ ಹಗರಣದ ಬಗ್ಗೆ ಈ ಹಿಂದೆ ವಿಧಾನಪರಿಷತ್ ನಲ್ಲೂ ಚರ್ಚೆ ನಡೆದಿತ್ತು. ಹೀಗಾಗಿ ಮುಖ್ಯಮಂತ್ರಿಗಳು ಈ ಅಕ್ರಮದ ತನಿಖೆಗೆ ಎಸ್‌ಐಟಿ ರಚಿಸಬೇಕು. ಅಲ್ಲದೆ, ನ್ಯಾಯದ ಬಗ್ಗೆ ಮಾತನಾಡುವ ಲೆಹರ್ ಸಿಂಗ್ ಅವರು ತಮ್ಮ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಬೇಕು ಎಂದು ಹೇಳಿದರು.
ಖರ್ಗೆಗೆ ಕೆಲಸ ಮಾಡಲು ಬಿಡದ ಗಾಂಧಿ ಕುಟುಂಬ: ಸಂಸದ ಲೇಹರ್ ಟೀಕೆ
ಅಮೆರಿಕ ಅಧ್ಯಕ್ಷರು ದೂರು ನೀಡಬೇಕಿತ್ತೇ?:
ಛಲವಾದಿ ನಾರಾಯಣಸ್ವಾಮಿ ಕೆಎಚ್‌ಬಿಯಿಂದ ನಿಯಮ ಮೀರಿ ನಿವೇಶನ ಪಡೆದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕಾಂಗ್ರೆಸ್‌ನ ಎರಡನೇ ಸಾಲಿನ ನಾಯಕರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಟೀಕೆ ಮಾಡಿದ್ದಾರೆ. ಅವರ ಪ್ರಕಾರ ಅಮೆರಿಕದ ಅಧ್ಯಕ್ಷರು ಬಂದು ನಾರಾಯಣಸ್ವಾಮಿ ವಿರುದ್ಧ ದೂರು ನೀಡಬೇಕಿತ್ತೇ? ವಿಜಯೇಂದ್ರ, ಹೇಳಿಕೆ ಬಾಲಿಶವಾದದ್ದು. ನಾವೆಲ್ಲ 2ನೇ ಸಾಲಿನ ನಾಯಕರಾದರೆ, ವಿಜಯೇಂದ್ರ ಬಾಲಭವನದ ನಾಯಕರಿ ದ್ದಂತೆ ಎಂದು ಭಂಗ್ಯವಾ ಡಿದರು. ವಿಜಯೇಂದ್ರ ತಮ್ಮ ತಂದೆಯ ಸಹಿ ನಕಲಿ ಮಾಡಿ ಆಕ್ರಮ ಎಸಗಿರುವ ಆರೋಪ ಹೊತ್ತಿದ್ದಾರೆ. ಬಿಜೆಪಿ ನಾಯಕರೇ ಆರೋಪಗಳನ್ನು ಮಾಡಿ ದ್ದಾರೆ. ಆ ಆರೋಪಗಳ ಬಗ್ಗೆ ತನಿಖೆ ನಡೆಸಿ ಎಂದು ಸಿಎಂಗೆ ಅವರು ಪತ್ರ ಬರೆಯಲಿ ಎಂದರು.
ಸಿಎಂ ವಿರುದ್ಧ ದೂರು:
44 ಕೇಸ್ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮಾತನಾಡಿ, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿದ ಮೂವರ ಹಿನ್ನೆಲೆ ತಿಳಿದಿದೆ. ಅದರಲ್ಲಿ ಸ್ನೇಹಮಯಿ ಕೃಷ್ಣಮೇಲೆ ಮೈಸೂರು ನಗರ, ಗ್ರಾಮಾಂತರದ ವಿವಿಧ ಪೊಲೀಸ್ ಠಾಣೆಗಳಲ್ಲಿ 44 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಆತನ ವಿರುದ್ಧ ಚಾರ್ಜ್ಹೀಟ್ ಸಲ್ಲಿಸಿದ್ದಾರೆ. ಸ್ನೇಹಮಯಿ ಕೃಷ್ಣಭೂ ಹಗರಣಗಳನ್ನು ಸೃಷ್ಟಿ ಮಾಡಿ ಅದಕ್ಕೆ ಸಂಬಂಧಿಸಿದವರಿಗೆ ಕಿರುಕುಳ ನೀಡುವ ವ್ಯಕ್ತಿ, ಅಮಾಯಕ ಭೂ ಮಾಲೀಕರನ್ನು ಹೆದರಿಸಿ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಆರ್‌ಟಿಐ ದಾಖಲೆ ಪಡೆದು. ಅದಕ್ಕೆ ವೈಟ್ಟರ್ ಹಚ್ಚಿನಕಲಿ ಸೀಲುಗಳನ್ನು ಹಾಕಿ ದಾಖಲೆ ಸೃಷ್ಟಿ ಮಾಡುವುದು ಆತನ ಕೆಲಸ. ಮುಡಾ ಪ್ರಕರಣದಲ್ಲೂ ಒಂದಷ್ಟು ನಕಲಿ ದಾಖಲೆ ಸೃಷ್ಟಿಸಿದ್ದು, ಆ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ವಿವರಿಸಿದರು.