ಕೋವಿಡ್ ಮಾತ್ರ ಯಾಕೆ? ಕೆಂಪಣ್ಣ ವರದಿ ಬಗ್ಗೆಯೂ ಚರ್ಚೆಯಾಗಲಿ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸವಾಲು!

By Kannadaprabha News  |  First Published Sep 6, 2024, 8:23 AM IST

ಕೋವಿಡ್ ಅವಧಿಯ ವರದಿಯಲ್ಲಿ ಏನಿದೆ ಗೊತ್ತಿಲ್ಲ. ಸಚಿವ ಸಂಪುಟದಲ್ಲಿ ಚರ್ಚೆ ಆಗಿದೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಅದೇ ರೀತಿ ಕೆಂಪಣ್ಣ ಆಯೋಗದ ವರದಿಯನ್ನೂ ಸಚಿವ ಸಂಪುಟದಲ್ಲಿಟ್ಟು ಚರ್ಚೆ ಮಾಡಲಿ. ಅದನ್ನು ಏಕೆ ಸಂಪುಟದ ಮುಂದೆ ತಾರದೆ ಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.


ಶಿವಮೊಗ್ಗ (ಸೆ.6):  ಕೋವಿಡ್ ಅವಧಿಯ ವರದಿಯಲ್ಲಿ ಏನಿದೆ ಗೊತ್ತಿಲ್ಲ. ಸಚಿವ ಸಂಪುಟದಲ್ಲಿ ಚರ್ಚೆ ಆಗಿದೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಅದೇ ರೀತಿ ಕೆಂಪಣ್ಣ ಆಯೋಗದ ವರದಿಯನ್ನೂ ಸಚಿವ ಸಂಪುಟದಲ್ಲಿಟ್ಟು ಚರ್ಚೆ ಮಾಡಲಿ. ಅದನ್ನು ಏಕೆ ಸಂಪುಟದ ಮುಂದೆ ತಾರದೆ ಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣದ ಹಿನ್ನೆಲೆಯಲ್ಲಿ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮದವರೇ ಹೇ‍ಳುತ್ತಿದ್ದಾರೆ. ಈಗಾಗಲೇ ಹೈಕೋರ್ಟ್‌ನಲ್ಲಿ ಈ ವಿಷಯಕ್ಕೆ ಸಂಬಂಧಿಸಿ ವಾದ-ಪ್ರತಿವಾದ ಆಗಿದೆ. ಸಿದ್ದರಾಮಯ್ಯ ಅವರ ಪರ ವಕೀಲರು ವಾದ ಮಾಡಲು ಇನ್ನೂ ಸಮಯ ಕೇಳುತ್ತಿದ್ದಾರೆ ಎಂದರು.

Latest Videos

undefined

ಸುನಾಮಿ ವಿರುದ್ಧ ಈಜುವ ಪರಿಸ್ಥಿತಿ ನನ್ನದು: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ

60 ಪರ್ಸೆಂಟ್‌:

ಸರ್ಕಾರದ ಯೋಜನೆ ಜಾರಿಯಲ್ಲೂ ಹಲವು ಲೋಪ-ದೋಷಗಳಾಗುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಸರ್ಕಾರದ ಬಗ್ಗೆ ಟೀಕೆ‌ ಟಿಪ್ಪಣೆಗಳು ಶುರುವಾಗಿವೆ. ರಾಜ್ಯದಲ್ಲಿ ಬದಲಾವಣೆ ಬಯಸಿ ಜನ ಕಾಂಗ್ರೆಸ್‌ಗೆ ಅವಕಾಶ‌ ಮಾಡಿಕೊಟ್ಟಿದ್ದಾರೆ. ಆದರೆ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್‌ ಆರೋಪ ಮಾಡುತ್ತಿದ್ದರು. ಆದರೀಗ ಶೇ.60 ಅಥವಾ ಅದಕ್ಕೂ ಹೆಚ್ಚಿನ ಕಮಿಷನ್‌ ವ್ಯವಸ್ಥೆ ಹುಟ್ಟಿಕೊಂಡಿದೆ. ಭ್ರಷ್ಟಾಚಾರ, ಅಧಿಕಾರಿಗಳ ವರ್ಗಾವಣೆ. ನಿಗಮಗಳ ಹಗರಣಗಳೇ ಮುನ್ನಲೆಗೆ ಬಂದಿವೆ. ಜನರ ಹೆಸರಿನಲ್ಲಿ ಸರ್ಕಾರ ಹಣ ಲೂಟಿ ಹೊಡೆಯುತ್ತಿದೆ‌ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಸಾಚಾ ಆಗಿದ್ದರೆ ಕೆಂಪಣ್ಣ ವರದಿ ಬಿಡುಗಡೆ ಮಾಡಲಿ: ಜಗದೀಶ ಶೆಟ್ಟರ್

ಲಘುವಾಗಿ ಮಾತನಾಡಲ್ಲ:

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಗ್ಯಾರಂಟಿ ಬಗ್ಗೆ ವಿರೋಧವೂ ಇಲ್ಲ. ಆದರೆ ಅಭಿವೃದ್ಧಿ ಕೂಡ ಆಗಬೇಕು. ನೀರಾವರಿ ಯೋಜನೆ, ರಸ್ತೆ ಕಾಮಗಾರಿಗಳು ಸೇರಿ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಹಿಂದುಳಿದ ವರ್ಗದ ಜನಾಂಗದಿಂದ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೆ ಹೇಳುತ್ತಿರುತ್ತಾರೆ. ಆದರೆ ಹಿಂದುಳಿದವರ ಕಲ್ಯಾಣಕ್ಕೆ ಕೊಡುಗೆ ಏನು ಎಂದು ಪ್ರಶ್ನಿಸಿದರು.

click me!