ಕಾಂಗ್ರೆಸ್ ಮುಳುಗುವ ಹಡಗು, ಯಾರೂ ಹತ್ತಲು ಬಯಸೋದಿಲ್ಲ: ಸಚಿವ ಕಾರಜೋಳ ವ್ಯಂಗ್ಯ

By Suvarna NewsFirst Published Sep 24, 2022, 8:41 PM IST
Highlights

ಕಾಂಗ್ರೆಸ್ ಮುಳುಗುವ ಹಡಗು ಅದನ್ನು ಯಾರೂ ಹತ್ತಲು ಬಯಸೋದಿಲ್ಲ ನೂರು ಸಿದ್ದರಾಮಯ್ಯನವರು ಬಂದರೂ ಬಿಜೆಪಿಗೆ ಭಯವಿಲ್ಲ. ನನ್ನ ಕೊನೆಯುಸಿರು ಇರೋವರೆಗೂ ಮುಧೋಳದಲ್ಲೇ ಸ್ಫರ್ಧೆ ಬೇರೆಡೆ ಸ್ಪರ್ಧೆ ಇಲ್ಲ ಎಂದು  ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ಸೆ.24) : ಕಾಂಗ್ರೆಸ್ ಪಕ್ಷ ಒಂದು ಮುಳುಗುವ ಹಡಗು, ಮುಳುಗುವ ಹಡಗಿನಲ್ಲಿ ಯಾರು ಕೂರ್ತಾರೆ,ಮುಂದಿನ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷವು ದೀಪಕ್ಕೆ ದಿಕ್ಕು ಇಲ್ಲದ ಮನೆಯಂತಾಗುತ್ತದೆ ಎಂದು ಜಲ ಸಂಪನ್ಮೂಲಗಳ ಸಚಿವರಾದ ಗೋವಿಂದ ಕಾರಜೋಳ ವ್ಯಂಗ್ಯ ಮಾಡಿದ್ದಾರೆ.  ಅವರು ಬಾಗಲಕೋಟೆ ನಗರದಲ್ಲಿ ಮಾತನಾಡುತ್ತಾ, ಗಾಂಧಿಯೇತರರು ಈ ಸಾರಿ ಎಐಸಿಸಿ ಅಧ್ಯಕ್ಷ ಹುದ್ದೇಗೇರ್ತಾರಾ ಎಂಬ ಪ್ರಶ್ನೆ ವಿಚಾರ‌ವಾಗಿ ಮಾತನಾಡಿ,ಯಾರೂ ಆಗಲಾರದೇ ಎಷ್ಟು ವರ್ಷ ಆಯಿತು,ಇಲ್ಲಿಯವರೆಗೂ,ಯಾರೂ ಆಗಲಿಕ್ಕೂ ತಯಾರಿಲ್ಲ. ಮುಳುಗುವ ಹಡಗಿನಲ್ಲಿ ಕೂರಲು ಯಾರು ತಯಾರಿರ್ತಾರೆ ಎಂದು ಹೇಳಿ, 2024ರ ಲೋಕಸಭಾ ಚುನಾವಣಾ ಮುಗಿದ ನಂತರ, ಕಾಂಗ್ರೆಸ್ ದೀಪಕ್ಕೆ ದಿಕ್ಕಿಲ್ಲದ ಮನೆಯಂತಾಗುತ್ತದೆ ಎಂದು ವ್ಯಂಗ್ಯವಾಡಿದರು. ಇಡೀ ದೇಶ ಅಷ್ಟೇ ಅಲ್ಲ, ಇಡೀ ಪ್ರಪಂಚ ಮೆಚ್ಚುವಂತಹ ಆಡಳಿತವನ್ನು ಮೋದಿ ಕೊಟ್ಟಿದ್ದಾರೆ. ಮೋದಿ ಇಲ್ಲದೇ ವಿಶ್ವದಲ್ಲಿ ಯಾವುದೇ ಸಮಸ್ಯೆ ಬಗೆಹರಿಯಲ್ಲ. ಗಾಂಧಿ ಕುಟುಂಬ 2024ರ ನಂತರ ನಿವೃತ್ತ ನೌಕರರಂತೆ ಮನೆಯೊಳಗೆ ಇರುತ್ತಾರೆ ಎಂದು ಭವಿಷ್ಯ ನುಡಿದರು.ಇದೇ ಸಮಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮನ್ನು ಕಂಡರೆ ಬಿಜೆಪಿಗೆ ಎಂಬ ಮಾತಿಗೆ ತಿರುಗೇಟು ನೀಡಿ ಮಾತನಾಡಿದ ಕಾರಜೋಳ ಅವರು, ಇಂತಹ ನೂರು ಸಿದ್ದರಾಮಯ್ಯನವರು ಬಂದ್ರೂ ಬಿಜೆಪಿ ಭಯಪಡುವ ಪ್ರಶ್ನೆಯೇ ಇಲ್ಲ ,ನಾವು ಒಬ್ಬರೇ ಶಾಸಕರಿದ್ದಾಗಲೂ ಭಯಪಟ್ಟಿಲ್ಲ, ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಹೋರಾಟ ಮಾಡಿ ಗೆದ್ದಿದ್ದೇವೆ ಎಂದರು.

ಬಿಜೆಪಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿದೆ. ಕಾಂಗ್ರೆಸ್ಸಿಗಿಂತ ಹೆಚ್ಚು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದದ್ದು ಬಿಜೆಪಿ ಪಕ್ಷ. ನನ್ನನ್ನೇ ಟಾರ್ಗೆಟ್  ಮಾಡ್ತಾರೆ ಅಂತ ಸಿದ್ದರಾಮಯ್ಯ ಹೇಳಿದ್ರೆ ನಾನೇನು ಮಾಡಲಿಕ್ಕಾಗುತ್ತೆ ಎಂದ ಕಾರಜೋಳ ಅವರು, ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ. ಮೈಸೂರಿನವರು ಸಿದ್ದು 30 ವರ್ಷದ ರಾಜಕಾರಣ ಮಾಡಿದ್ದನ್ನ ನೋಡಿ ಸೋಲಿಸಿದ್ದು ನೋಡಿದ್ದೀವಿ. ಜನ ಬಹಳ ಬುದ್ದಿವಂತರಿದ್ದಾರೆ. ಪ್ರತಿಯೊಬ್ಬರ ಮತ್ತು ಪಕ್ಷಗಳ ಕಾರ್ಯಶೈಲಿ ತೂಗಿ ಅಳೆದು ನೋಡಿ ಜನ ಓಟ್ ಹಾಕುತ್ತಾರೆ ಎಂದರು.

 ಸಿದ್ದರಾಮೋತ್ಸವ ಮೂಲಕ ಸಿದ್ದರಾಮಯ್ಯ ಮುಂದಿನ ಸಿಎಂ ತಾವೇ ಎಂದು  ಬಿಲ್ಡಪ್ ತಗೋತಿದಾರಾ ಎಂಬ ಪ್ರಶ್ನೆ ಗೆ ಕಾರಜೋಳ ಅವರು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳಾಗಿವೆ. ಸಿದ್ದರಾಮಯ್ಯ ಅವ್ರ ಒಂದು ಗುಂಪಿದೆ. ಡಿಕೆ ಶಿವಕುಮಾರ್ ಒಂದು ಗುಂಪಿದೆ. ವೀರಶೈವರನ್ನು ಕಾಂಗ್ರೆಸ್ ಕಡೆಗಣಿಸಿದ್ದಾರೆ ಅಂತೇಳಿ, ಶಾಮನೂರು ಶಿವಶಂಕರಪ್ಪನವರು ಹಿಡಿದುಕೊಂಡು ಕೆಲವರು ಓಡಾಡ್ತಿದಾರೆ. ರಾಜಕಾರಣದಲ್ಲಿ ಮತದಾರರೇ ಮಾಲೀಕರು, ಯಾರು ಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ ಎಂದರು. 

ಕೆಂಪಣ್ಣನನ್ನ ಟೂಲ್ ಉಪಯೋಗಿಸುತ್ತಿರೋ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ: 
ಇದೇ ಸಮಯದಲ್ಲಿ,ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನ ವಿರುದ್ಧ ಸಚಿವ ಕಾರಜೋಳ ಅವರು ಹರಿಹಾಯ್ದು,೪೦% ಕಮಿಷನ್ ವಿಚಾರವಾಗಿ ಮಾತನಾಡಿ, ರಾಜಕೀಯ ಆರೋಪಗಳನ್ನ ಮಾಡಿ ಗಾಳಿಯಲ್ಲಿ ಗುಂಡು ಹೊಡಿತಾರೆ ಅದು ಬೇರೆ,ಈ ರೀತಿ ವ್ಯಕ್ತಿಗತ ಆರೋಪ ಮಾಡಿದ್ದು ಸರಿಯಲ್ಲ. ಕೆಂಪಣ್ಣ ಕಾಂಟ್ರ್ಯಾಕ್ಟರೇ ಅಲ್ಲ. 20 ವರ್ಷದಿಂದ ಆತ ಯಾವುದಾದ್ರೂ ಕೆಲಸ ತಗೊಂಡಿದ್ರೆ ತೋರಿಸಿ.ಇಂತಹ ಕೆಲಸ‌ ಮಾಡಿದೆ, ಇಂತಹ ವ್ಯಕ್ತಿಗೆ ಕಮೀಷನ್ ಕೊಟ್ಟೆ ಅಂತ ಕೆಂಪಣ್ಣ ಹೇಳಲಿ ಎಂದು ಕಾರಜೋಳ ಅವರು ಸವಾಲು ಹಾಕಿದರು.ಅವನ ಹತ್ರ ಏನೂ ಇಲ್ಲ. ತನಿಖಾ ಸಂಸ್ಥೆ ನೋಟಿಸ್ ಕೊಟ್ರೂ ಬಂದು ಯಾವುದೇ ಹೇಳಿಕೆ ಕೊಡಲಿಲ್ಲ.ದೆಹಲಿಯಿಂದಲೂ ತನಿಖೆಗೆ ಕರೆದರೆ ಕೆಂಪಣ್ಣ ಬರಲಿಲ್ಲ. ಏನೂ ಹೇಳೋದಿಲ್ಲ, ಸುಮ್ನೆ ಸುಳ್ಳು ಆರೋಪ ಮಾಡಿ ಹೋಗುತ್ತಾನೆ. ಇದು,ರಾಜಕೀಯ ಪ್ರೇರಿತ ಆರೋಪ,ಕಾಂಗ್ರೆಸ್ ನಾಯಕರು ಕೆಂಪಣ್ಣನ ಟೂಲ್ ಆಗಿ ಉಪಯೋಗ ಮಾಡಿಕೊಂಡಿದ್ದಾರೆ. ಅದರ ಪರಿಣಾಮ ಅವನ ಮುಪ್ಪಿನ ಕಾಲದಲ್ಲಿ ಕೆಟ್ಟದ್ದನ್ನು ಎದುರಿಸಬೇಕಾಗುತ್ತದೆ ಎಂದರು‌.

ಕಬಿನಿ ಜಲಾಶಯಕ್ಕೆ ಸಚಿವ ಗೋವಿಂದ ಕಾರಜೋಳ ಭೇಟಿ: ಪರಿಶೀಲನೆ

ಸಿಎಂ ವಿರುದ್ಧ ಮಾಡುತ್ತಿರುವ ಸಿಎಂ ಪೇ ಅಭಿಯಾನದಿಂದ ಕಾಂಗ್ರೆಸ್ ಗೆ ಗೌರವ ಬರೋದಿಲ್ಲ:
ಇದೇ ಸಮಯದಲ್ಲಿ, ಸಿಎಂ ಪೇ ಅಭಿಯಾನ ವಿಚಾರ‌‌‌ವಾಗಿ ಪ್ರತಿಕ್ರಿಯೆ ನೀಡಿ,ಕಾಂಗ್ರೆಸ್ ಸುಳ್ಳು ಆರೋಪ ಸತ್ಯ ಮಾಡಲು ಹೊರಟಿದೆ.ಸಿಎಂ ವಿರುದ್ಧ ಪೇ ಸಿಎಂ ಅಂತ ಆರೋಪ ಮಾಡಿದ್ರೆ ಗೌರವ ಬರುತ್ತಾ ಎಂದು ಪ್ರಶ್ನೆ ಮಾಡಿ,ಕಾಂಗ್ರೆಸ್ ಆರೋಪಕ್ಕೆ ಕವಡೆಕಾಸಿನ  ಕಿಮ್ಮತ್ತಿಲ್ಲ. ಜನ ಇನ್ನೂ ಬುದ್ದಿ ಕಲಿಸ್ತಾರೆ, ಕಾಂಗ್ರೆಸ್ ಇನ್ನೂ ಹೀನಾಯ ಸ್ಥಿತಿ ತಲುಪುತ್ತೆ, ಕಾಂಗ್ರೆಸ್ ಪಕ್ಷ ಅಷ್ಟೇ ಅಲ್ಲ ಬಿಜೆಪಿ ಸೇರಿದಂತೆ ಯಾರೇ ಆದ್ರೂ ಈ ಮಟ್ಟಕ್ಕೆ ಇಳಿಯಬಾರದು.ಇದರಿಂದ ನೈತಿಕತೆಯ ಅಧಃಪತನ ಆಗುತ್ತೆ. ಆಡಳಿತ ಮಾಡುವವರ ವಿರುದ್ಧ ಸುಳ್ಳು ಆರೋಪ ಮಾಡಬಾರದು. ಒಂದು ಬಾಣ ಹೊಡೆದರೆ ಅದನ್ನ ಕರೆಕ್ಟ್ ಆಗಿ ಹೊಡೆಯಬೇಕು. ಏನಾದ್ರೂ ಹೇಳೋದಿದ್ರೆ ದಾಖಲೆ ಸಮೇತ ಆರೋಪ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿ ಕಾರಿದರು.

ಬೆಳ್ತಂಗಡಿ ಏತ ನೀರಾವರಿ ಮಾರ್ಚ್‌ಗೆ ಲೋಕಾರ್ಪಣೆ: ಸಚಿವ ಗೋವಿಂದ ಕಾರಜೋಳ

ನನ್ನ ಕೊನೆ ಉಸಿರಿರೋವರೆಗೂ ಮುಧೋಳದಲ್ಲೇ ನನ್ನ ಸ್ಫರ್ಧೆ: 
ಇದೇ ಸಂದರ್ಭದಲ್ಲಿ, ಮುಂಬರುವ ಚುನಾವಣೆ ಕ್ಷೇತ್ರದ ಬದಲಾವಣೆ ಮಾಡಿಕೊಳ್ಳುತ್ತಾರೆ ಎಂಬ ಚರ್ಚೆ ಹಿನ್ನಲೆ,ಜಲ ಸಂಪನ್ಮೂಲಗಳ ಸಚಿವರಾದ ಕಾರಜೋಳ ಅವರು ಸ್ಪಷ್ಟನೆ ನೀಡಿ,ಮುಧೋಳ ಮತಕ್ಷೇತ್ರ ಬದಲಾವಣೆ ಪ್ರಶ್ನೆಯೇ ಇಲ್ಲ.ಯಾರೂ ಊಹಾಪೋಹ ಹುಟ್ಟಿಸ್ತಾರೋ ನನಗೆ ಗೊತ್ತಿಲ್ಲ. ನನ್ನ ರಾಜಕೀಯ ತೀರ್ಮಾಣವನ್ನ ನಮ್ಮ ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷ ನನ್ನನ್ನ ಎಲ್ಲಿ ಕೆಲಸಕ್ಕೆ ಹಚ್ಚಬೇಕು ಅನ್ನೋ ತೀರ್ಮಾನ ಮಾಡುತ್ತೇ,ನಾನು ಮುಧೋಳ ಬಿಟ್ಟು ಬೇರೆ ಎಲ್ಲೂ ಚುನಾವಣೆ ಎದುರಿಸೋದಿಲ್ಲ.ಪಕ್ಷಕ್ಕೆ ಕೆಲಸ ಮಾಡಿ ಅಂತ ಪಾರ್ಟಿ ಹೇಳಿದ್ರೂ ಅದಕ್ಕೆ ನಾನು ಸಿದ್ಧವಾಗಿದ್ದೇನೆ. ನನ್ನ ಕೊನೆಯ ಉಸಿರು ಇರೋವರೆಗೂ ಮುಧೋಳ ನಂಟು ಇರುತ್ತೆ, ನಾನೆಲ್ಲೂ ಹೋಗೋದಿಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬಸವರಾಜ್ ಯಂಕಂಚಿ ಉಪಸ್ಥಿತರಿದ್ದರು.

click me!