ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಬೇಕು: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Oct 1, 2023, 3:20 AM IST

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಉತ್ತಮ ಆಡಳಿತ ನೀಡುತ್ತಿದೆ, ರಾಜ್ಯದಲ್ಲಿ ನಿಗದಿತ ವಾಡಿಕೆ ಮಳೆಯಾಗದೆ ಸಮರ್ಪಕವಾಗಿ ಬಿತ್ತನೆ ಕೆಲಸಗಳು ಆಗದೆ ಬರ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ವೀಕ್ಷಿಸಲು ಕೋಲಾರಕ್ಕೆ ಭೇಟಿ ನೀಡಿದ್ದೇನೆ ಎಂದು ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು. 


ಕೋಲಾರ (ಅ.01): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಉತ್ತಮ ಆಡಳಿತ ನೀಡುತ್ತಿದೆ, ರಾಜ್ಯದಲ್ಲಿ ನಿಗದಿತ ವಾಡಿಕೆ ಮಳೆಯಾಗದೆ ಸಮರ್ಪಕವಾಗಿ ಬಿತ್ತನೆ ಕೆಲಸಗಳು ಆಗದೆ ಬರ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ವೀಕ್ಷಿಸಲು ಕೋಲಾರಕ್ಕೆ ಭೇಟಿ ನೀಡಿದ್ದೇನೆ ಎಂದು ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು. 

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಂದೆ ಪಂಚಾಯಿತಿ ಮತ್ತು ಲೋಕಸಭಾ ಚುನಾವಣೆಗಳು ಬರಲಿವೆ. ಲೋಕಸಭಾ ಚುನಾವಣೆ ಡಿಸೆಂಬರ್ ಒಳಗೆ ಬಂದರೂ ಬರಬಹುದು, ಕೇಂದ್ರದಲ್ಲಿ ಈಗಿನ ಸರ್ಕಾರ ಬದಲಾವಣೆ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದರು. ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಮುರಳಿ ಇದ್ದರು.

Latest Videos

undefined

ಮೋಡ ಬಿತ್ತನೆ ಕನಸು ಈಡೇರಿಕೆ: ಸಚಿವ ಸತೀಶ ಜಾರಕಿಹೊಳಿ ಹರ್ಷ

ಅಧಿಕಾರಿಗಳಿಗೆ ಸಲಾಂ ಹೊಡೆಯುವುದು ಬೇಡ: ಸರ್ಕಾರಿ ಕಚೇರಿಗಳಲ್ಲಿ ಆಗಬೇಕಿರುವ ಕೆಲಸಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಸಾರ್ವಜನಿಕರು ಅವರಿಗೆ ಸಲಾಂ ಹೊಡೆಯಬೇಡಿ. ಕೈಮುಗಿಯಲೂ ಬೇಡಿ. ನಾನಿರುತ್ತೇನೆ. ಶಾಸಕರಿರುತ್ತಾರೆ. ಜಿಲ್ಲಾಧಿಕಾರಿಗಳೂ ಇರುತ್ತಾರೆ. ನಮ್ಮ ಬಳಿಗೆ ಬನ್ನಿ. ನಾವು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತೇವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ  ನಡೆದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನೂ ಸೇರಿದಂತೆ ಶಾಸಕರು, ಸರ್ಕಾರಿ ಅಧಿಕಾರಿಗಳೆಲ್ಲರೂ ಜನರ ಸೇವಕರು. ಸಮಸ್ಯೆಗಳನ್ನು ಹೊತ್ತು ತರುವ ಜನರಿಗೆ ಪರಿಹಾರ ಸೂಚಿಸುವುದು ನಮ್ಮ ಕರ್ತವ್ಯ. ವಿನಾಕಾರಣ ಅವರನ್ನು ಕಚೇರಿಗಳಿಗೆ ಅಲೆಸಬೇಡಿ. ಕಾನೂನಾತ್ಮಕ ಅಡಚಣೆಗಳಿದ್ದರೆ ಅವರಿಗೆ ಮನವರಿಕೆ ಮಾಡಿಕೊಡಿ. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕೋರಿ ಬಂದಾಗ‌ ಇದು ಬೇರೆ ಇಲಾಖೆ ಅರ್ಜಿ ಎಂದು ಹಿಂದಿರುಗಿಸುವಂತಿಲ್ಲ. ಸಂಬಂಧಿಸಿದ ‌ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅರ್ಜಿಯನ್ನು ವರ್ಗಾಯಿಸಿ‌ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹತ್ತಾರು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಆ ಇಲಾಖೆಯೂ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೂನ್ಯಕ್ಕಿಳಿಸುವುದು ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ಶಾಸಕರು ಪಂಚಾಯ್ತಿ, ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆಗಳನ್ನು ನಡೆಸಲಿದ್ದಾರೆ. ಜಿಲ್ಲಾಧಿಕಾರಿಗಳು ಜನಸಂಪರ್ಕ ಸಭೆಗಳನ್ನು ನಡೆಸಿ ಪರಿಹಾರ ಸೂಚಿಸಲಿದ್ದಾರೆ. ಲಂಚ ಪಡೆಯುವುದು ತಪ್ಪು ಎನ್ನುವ ರೀತಿ ನೀಡುವುದೂ ಸಹ ತಪ್ಪು‌. ಸಾರ್ವಜನಿಕರು ತಮ್ಮ ಕೆಲಸ ಸಿಬ್ಬಂದಿ ಬಳಿ ಆಗದಿದ್ದಾಗ ಅದನ್ನು ತಹಸೀಲ್ದಾರ್ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ‌ತನ್ನಿ. ಅಲ್ಲೂ ಆಗದಿದ್ದರೆ ಶಾಸಕರ ಗಮನಕ್ಕೆ ‌ತಂದು ಬಗೆಹರಿಸಿಕೊಳ್ಳಿ. ಆದರೆ, ಭ್ರಷ್ಟಾಚಾರವನ್ನು ‌ಬೆಳಸಬೇಡಿ ಎಂದರು.

ಇಂಡಿಯಾ ಒಕ್ಕೂಟಕ್ಕಾಗಿ ತಮಿಳುನಾಡಿಗೆ ಕಾವೇರಿ ನೀರು: ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನಿರಂತರ ಪ್ರಕ್ರಿಯೆ. ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಿವಾರಿಸಲು ಸಾಧ್ಯವಾಗದಿದ್ದರೆ ಅದನ್ನು ಏನು ಮಾಡಬಹುದು, ಎಲ್ಲಿ ಪರಿಹಾರ ಪಡೆಯಬಹುದು ಎಂಬ ಬಗ್ಗೆ ಜನರಿಗೆ ಸಲಹೆ ನೀಡಿ. ಹಣ ಕೊಟ್ಟು ಅಕ್ರಮ ಮಾರ್ಗದಲ್ಲಿ ಪರಿಹಾರ ಸೂಚಿಸುವಂತೆ ಜನರೂ ಅಧಿಕಾರಿಗಳ ಮೇಲೆ ಒತ್ತಡ ಹಾಕಬಾರದು ಎಂದೂ ತಿಳಿಸಿದರು.

click me!