ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ಮೂರು ಕ್ಷೇತ್ರಗಳ ಪೈಕಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಇಕ್ಬಾಲ್ ಅಹ್ಮದ್ಹೆ ಸರು ಅಂತಿಮಗೊಳಿಸಲಾಗಿದೆ. ಈ ಮೂಲಕ ಪರಮೇಶ್ವರ್ ಮೈಲುಗೈ ಸಾಧಿಸಿದ್ದಾರೆ.
ತುಮಕೂರು (ಏ.6) : ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ತುಮಕೂರು ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ಮೂರು ಕ್ಷೇತ್ರಗಳ ಪೈಕಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ(Congress Candidates)ಗಳ ಹೆಸರು ಘೋಷಣೆಯಾಗಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರ(Tumakur assembly constituency)ಕ್ಕೆ ಇಕ್ಬಾಲ್ ಅಹ್ಮದ್(ikbal ahmed) ಹೆಸರು ಅಂತಿಮಗೊಳಿಸಲಾಗಿದೆ. ಈ ಮೂಲಕ ಪರಮೇಶ್ವರ್ ಮೈಲುಗೈ ಸಾಧಿಸಿದ್ದಾರೆ.
ಕಳೆದ 40 ವರ್ಷದಿಂದ ಶಫೀ ಅಹಮದ್ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್(Congress ticket) ನೀಡಲಾಗುತ್ತಿತ್ತು. ಆದ್ರೆ ಭಾರಿ ಅಚ್ಚರಿಯ ನಿರ್ಧಾರ ಕೈಗೊಂಡ ಕಾಂಗ್ರೆಸ್, ಇಕ್ಬಾಲ್ ಅಹಮದ್ ಎಂಬ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ. ಸದ್ಯ ಹೆಸರು ಘೋಷಣೆಗೊಂಡಿರುವ ಇಕ್ಬಾಲ್ ಅಹಮದ್ ಜಿ.ಪರಮೇಶ್ವರ್(Dr G Parameshwar) ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದು, ತುಮಕೂರು ನಗರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು, ಜೊತೆಗೆ ಕಾಂಗ್ರೆಸ್ ಟಿಕೆಟ್ ಗಾಗಿ ಪರಮೇಶ್ವರ್ ಆಶ್ರಯ ಪಡೆದುಕೊಂಡಿದ್ದರು, ಹೀಗಾಗಿ ಹಠಕ್ಕೆ ಬಿದ್ದ ಪರಮೇಶ್ವರ್ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಜಿಲ್ಲಾ ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.
ತತ್ವ ಸಿದ್ಧಾಂತವಿಲ್ಲದ ಬಿಎಸ್‌ವೈ ಶಿಷ್ಯಗೆ ಕಾಂಗ್ರೆಸ್ ಟಿಕೆಟ್: ಮಾಜಿ ಶಾಸಕ ಬಿ.ಎಚ್ ಬನ್ನಿಕೋಡ ಆಕ್ರೋಶ
ತುಮಕೂರು ನಗರದ ಟಿಕೆಟ್ ನೀಡುವಂತೆ ಮಾಜಿ ಶಾಸಕ ಶಫೀ ಅಹಮದ್ ಹಾಗೂ ರಫೀಕ್ ಅಹಮದ್ ಇಬ್ಬರು ಪಟ್ಟು ಹಿಡಿದಿದ್ದರು, ಮಾವ-ಭಾಮೈದರಾಗಿರುವ ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ, ಇಬ್ಬರು ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಿದ್ದರು. ಒಂದೇ ಕುಟುಂಬಕ್ಕೆ 40 ವರ್ಷದಿಂದ ತುಮಕೂರು ನಗರ ಕಾಂಗ್ರೆಸ್ ಟಿಕೆಟ್ ನೀಡುತ್ತಾ ಬಂದಿರುವುದು ಸ್ಥಳೀಯ ಮುಖಂಡರು ಹಾಗೂ ಕ್ಷೇತ್ರದ ಮತದಾರರಲ್ಲಿ ಅಸಮಧಾನ ಮೂಡಿಸಿತ್ತು. ಕಾಂಗ್ರೆಸ್ ನಲ್ಲಿ ಹೊಸಬರಿಗೆ ಟಿಕೆಟ್ ನೀಡುವ ಒತ್ತಡವೂ ಮೂಡಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ ಹೊಸ ಮುಖ ಇಕ್ಬಾಲ್ ಅಹಮದ್ ಗೆ ತುಮಕೂರು ನಗರದ ವಿಧಾನಸಭಾ ಕ್ಷೇತ್ರ(Tumakuru assembly constituency)ದ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಲಾಗಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪ ಏನೂ ಮಾಡುವ ಸ್ಥಿತಿಯಲ್ಲಿಲ್ಲ, ಬಣಕಾರ ಬಂಡಾಯಕ್ಕೆ ಬಿಜೆಪಿ ಥಂಡಾ!
ನಿರೀಕ್ಷೆಯಂತೆ ಗುಬ್ಬಿಯಲ್ಲಿ ಎಸ್.ಆರ ಶ್ರೀನಿವಾಸ್ ಗೆ ಕಾಂಗ್ರೆಸ್ ಟಿಕೆಟ್
ಜೆಡಿಎಸ್ ನಿಂದ ಉಚ್ಛಾಟನೆಗೊಂಡಿದ್ದ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಎಸ್.ಆರ್ ಶ್ರೀನಿವಾಸ್(SR Shrinivas)ಗೆ ನಿರೀಕ್ಷೆಯಂತೆ ಟಿಕೆಟ್ ಲಭಿಸಿದೆ. ಎಸ್.ಆರ್ ಶ್ರೀನಿವಾಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದ ಪ್ರಸನ್ನಕುಮಾರ್ ಅವರನ್ನು ನಿನ್ನೆಯಷ್ಟೇ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಈ ಮೂಲಕ ಎಸ್.ಆರ್ ಶ್ರೀನಿವಾಸ್‌ಗೆ ಟಿಕೆಟ್ ಅನ್ನೋ ಸಂದೇಶವನ್ನು ಪರೋಕ್ಷವಾಗಿ ಪಕ್ಷದ ಸ್ಥಳೀಯ ಮುಖಂಡರಿಗೆ ಮುಟ್ಟಿಸಲಾಗಿತ್ತು. ಇದೀಗ ಪಕ್ಷದ ಹೈಕಮಾಂಡ ಅಧಿಕೃತವಾಗಿ ಎಸ್.ಆರ್ ಶ್ರೀನಿವಾಸ್ ಗೆ ಟಿಕೆಟ್ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರ ಹೊರತು ಪಡಿಸಿ 10 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಘೋಷಣೆಗೊಂಡಂತಾಗಿದೆ.