ಪಕ್ಷದ ನಾಯಕರ ನಡೆಗೆ ಬೇಸತ್ತು ಈಗಾಗಲೇ ಕಾಂಗ್ರೆಸ್‌ನಿಂದ ಒಂದು ಕಾಲು ಆಚೆ ಇಟ್ಟಿದ್ದ ಹಿರಿಯ ನಾಯಕ ಸಿ.ಎಂ ಇಬ್ರಾಹಿಂ ಒಂದು ಡಿಮ್ಯಾಂಡ್ ಇಟ್ಟಿದ್ದಾರೆ.
ಮೈಸೂರು, ಮಾ.03): ಜೆಡಿಎಸ್ ಸೇರಲು ಮುಂದಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಅವರ ನಿವಾಸಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ತೊರೆಯಲು ಮುಂದಾಗಿರುವ ಇಬ್ರಾಹಿಂ ಅವರನ್ನ ಸಿದ್ದರಾಮಯ್ಯ ಅವರು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯನವರ ಸಂಧಾನ ವರ್ಕೌಟ್ ಆದಂತಿದೆ.
undefined
ಹೌದು....ಇದಕ್ಕೆ ಸ್ವತಃ ಇಬ್ರಾಹಿಂ ಕೊಟ್ಟಿರುವ ಹೇಳಿಕೆ ಗಮನಿಸಿದ್ರೆ, ಜೆಡಿಎಸ್‌ನತ್ತ ಮುಖ ಮಾಡಿದ್ದ ಅವರು ಕಾಂಗ್ರೆಸ್‌ನಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್ಸಲ್ಲೇ ಉಳೀತಾರಾ ಈ ಮುಖಂಡ? ಯಶಸ್ವಿಯಾಯ್ತಾ ಸಂಧಾನ
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದಲ್ಲಿ ಉಳಿಯಲು ಒಂದೇ ಡಿಮ್ಯಾಂಡ್. ಕಾಂಗ್ರೆಸ್ ಪಕ್ಷದಲ್ಲಿ ಸಜ್ಜನರಿಗೆ ಅವಕಾಶ ನೀಡುವಂತೆ ಆಗ್ರಹಿಸುತ್ತೇನೆ. ಪಕ್ಷದಲ್ಲಿ ತೀರ್ಮಾನ ಕೈಗೊಳ್ಳಲು ಸಜ್ಜನರಿಗೆ ಅಧಿಕಾರ ಕೊಡಬೇಕು ಎಂದು ಸ್ಪಷ್ಟಪಡಿಸಿದರು,
ಒಂದು ವರ್ಷದ ನಂತರ ಸಿದ್ಧರಾಮಯ್ಯ, ನಾನು ಭೇಟಿಯಾಗಿದ್ದೆವು. ದೆಹಲಿಗೆ ತೆರಳಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ನಂತರ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು.
ಕೈ ತೊರೆದು ಜೆಡಿಎಸ್‌ನತ್ತ ಹೊರಟ ನಾಯಕ: ಮನವೊಲಿಕೆಗೆ ಉಸ್ತುವಾರಿ ಅಖಾಡಕ್ಕೆ
ಸಿದ್ದರಾಮಯ್ಯನವರ ಜೊತೆಗೆ ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದೇನೆ. ನಮ್ಮಿಬ್ಬರ ನಡುವೆ ಯಾವುದೇ ವ್ಯಾಪಾರ ಇಲ್ಲ. ದೇವೇಗೌಡರನ್ನು ಭೇಟಿಯಾಗಿದ್ದೆ. ಅಡ್ವಾಣಿಯವರ ಮನೆಗೆ ಹೋಗಿದ್ದೆ. ಆರ್‌ಎಸ್‌ಎಸ್ ನಲ್ಲಿಯೂ ನನಗೆ ಸ್ನೇಹಿತರಿದ್ದಾರೆ. ಆದರೆ, ಅವರ ವಿಚಾರಧಾರೆ ಬೇರೆ. ನಮ್ಮ ವಿಚಾರವೇ ಬೇರೆ ಇರುತ್ತದೆ. ದೇಶಕ್ಕೆ ಒಳ್ಳೆಯದಾಗಬೇಕು ಎನ್ನುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವುದನ್ನು ಕಾಲವೇ ನಿರ್ಧರಿಸಲಿದೆ. ನನ್ನ ಮತ್ತು ಸಿದ್ದರಾಮಯ್ಯನವರ ನಡುವೆ ಸ್ನೇಹ ಸಂಬಂಧ ಇದ್ದೇ ಇರುತ್ತದೆ. ಸದ್ಯಕ್ಕೆ ಮೂರು ಪಕ್ಷಗಳ ಕತೆ ಒಂದೇ ರೀತಿ ಆಗಿದೆ. ಚಿತ್ರಮಂದಿರದಲ್ಲಿ ಕರೆಂಟ್ ಹೋದಾಗ ಪ್ರೇಕ್ಷಕರ ಸ್ಥಿತಿ ಇರುವ ರೀತಿಯಲ್ಲಿ ಇದೆ. ನಾನು ಪದೇಪದೇ ದೆಹಲಿಗೆ ಹೋಗುವುದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್‌ನಿಂದ ದೂರ ಉಳಿದಿದ್ಯಾಕೆ: ಬಹಿರಂಗವಾಗಿಯೇ ಕಾರಣ ಬಿಚ್ಚಿಟ್ಟ ಹಿರಿಯ ನಾಯಕ
ಕುದುರೆ ಚೆನ್ನಾಗಿದ್ದರೆ ಖರೀದಿಸಲು ಮನೆ ಮುಂದೆ ಬರುತ್ತಾರೆ. ಹಾಗಾಗಿ ಅವರು ಯಾವಾಗ ಕರಿತಾರೆಯೋ ಅವಾಗ ಹೋಗುತ್ತೇನೆ. ರಾಜಕಾರಣದಲ್ಲಿ ಮರ್ಯಾದಸ್ಥರು ಇರುವುದು ವಿರಳವಾಗಿದೆ. ವೀರೇಂದ್ರ ಪಾಟೀಲರು, ದೇವೇಗೌಡರು, ಜೆ.ಹೆಚ್. ಪಟೇಲರಂತಹ ನಾಯಕರು, ತಳಿಗಳು ರಾಜಕಾರಣದಲ್ಲಿ ಉಳಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಬ್ರಾಹಿಂ ಅವರ ಈ ಮಾತುಗಳನ್ನ ಸೂಕ್ಷ್ಮವಾಗಿ ಗಮನಿಸಿದರೆ ಸಿದ್ದರಾಮಯ್ಯನವರ ಮನವೊಲಿಕೆಗೆ ಕರಗಿದ್ದು, ಕಾಂಗ್ರೆಸ್ ತೊರೆಯುವ ಸಾಧ್ಯತೆಗಳು ಕಮ್ಮಿ. ಒಂದು ವೇಳೆ ಇಬ್ರಾಹಿಂ ಕಾಂಗ್ರೆಸ್‌ನಲ್ಲೇ ಉಳಿದುಕೊಂಡರೇ ದಳಪತಿಗಳ ಪ್ಲಾನ್ ತಲೆಕೆಳಗಾಗಲಿವೆ.