MLA,MP ಸೇರಿದಂತೆ ಹಲವರ ಸಿ.ಡಿ. ಇವೆ: ಹೊಸ ಬಾಂಬ್ ಸಿಡಿಸಿದ ಮತ್ತೋರ್ವ ಸಾಮಾಜಿಕ ಕಾರ್ಯಕರ್ತ

By Suvarna News  |  First Published Mar 3, 2021, 10:20 PM IST

ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಕಂಟಕ ತಂದ ಸೆಕ್ಸ್ ಸಿಡಿ ಮಾದರಿಯಲ್ಲಿ 19 ಸಿಡಿಗಳು ಇವೆ ಎಂದು ಮತ್ತೋರ್ವ ಸಾಮಾಜಿಕ ಕಾರ್ಯಕರ್ತ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.


ಬಳ್ಳಾರಿ, (ಮಾ.03): ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಸಿ.ಡಿ. ಇದೀಗ ಭಾರೀ ಸಂಚನ ಮೂಡಿಸಿದ್ದು, ಇದರ ನೈತಿಕೆ ಹೊಣೆ ಹೊತ್ತು ಸ್ವತಃ ರಮೇಶ್ ಜಾರಕಿಹೊಳಿ ಅವರೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದರ ಮಧ್ಯೆ ಚ್.ವೈ ಮೇಟಿ ಅವರ ಸೆಕ್ಸ್ ಸಿಡಿ ಬಿಡುಗಡೆ ಮಾಡಿ ಅವರ ಸಚಿವ ಸ್ಥಾನಕ್ಕೆ ಕುತ್ತು ತಂದಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮಲಾಲಿ ಮತ್ತೆ ಬಾಂಬ್ ಸಿಡಿಸಿದ್ದಾರೆ.

Tap to resize

Latest Videos

undefined

'ನನ್ನ ಬಳಿ  ಇನ್ನೂ ಮೂವರು ದೊಡ್ಡವರ ಸಿಡಿಗಳಿವೆ'...ಕ್ಲ್ಯೂ ಕೊಟ್ಟ ದಿನೇಶ್

ಬಳ್ಳಾರಿಯಲ್ಲಿ ಇಂದು (ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಶೇಖರ ಮಲಾಲಿ, ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಕಂಟಕ ತಂದ ಸೆಕ್ಸ್ ಸಿಡಿ ಮಾದರಿಯಲ್ಲಿ 19 ಸಿಡಿಗಳು ಇವೆ. ಸಿಡಿ ಮಾಡುವುದಕ್ಕೆ ಅಂತಲೇ ಒಂದು ತಂಡ ಹಾಗೂ ಟಿವಿ ಚಾನೆಲ್ ಇದೆ ಎಂದು ಹೇಳುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ.

ಎಂಎಲ್‌ಎ, ಎಂಪಿಗಳು ಸೇರಿದಂತೆ ಹಲವರ ಸಿಡಿಗಳಿವೆ. ಈ ರೀತಿಯ ಸಿಡಿ ಮಾಡುವುದಕ್ಕೇ ಅಂತಾನೆ ಒಂದು ಟೀಂ ಇದೆ. ಒಂದು ಟಿವಿ ಚಾನೆಲ್‌ ಕೈವಾಡವಿದೆ. ಅವರವರ ಅನುಕೂಲಕ್ಕೆ ತಕ್ಕಂತೆ ಬಿಡುಗಡೆ ಮಾಡುತ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ಕ್ಲೀನ್'ಚಿಟ್ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಮೇಟಿ

ರಮೇಶ್‌ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಬಿಡುಗಡೆ ಕೇವಲ ಮರ್ಯಾದೆ ತೆಗೆಯುವುದಕ್ಕಷ್ಟೇ ಬಿಡುಗಡೆ ಮಾಡಲಾಗಿದೆ. ಮಾನಮರ್ಯಾದೆ ಹಾಳು ಮಾಡುವ ಉದ್ದೇಶದಿಂದ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ಒಪ್ಪಿತ ಕ್ರಿಯೆಯಂತೆ ಕಾಣುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮರ್ಯಾದೆ ತೆಗೆಯುವುದಕ್ಕಷ್ಟೆ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುತ್ತದೆ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಆದರೆ ಯಾರ ಮೇಲೆ ಹೂಡುತ್ತಾರೋ ಗೊತ್ತಿಲ್ಲ. ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು. ಕ್ಯಾಮೆರಾಗಳನ್ನು ನೋಡಿಕೊಂಡು ಹೋಗಬೇಕು ಎಂದು ಕೂಡ ಸಲಹೆ ನೀಡಿದರು.

click me!