ಕಾಂಗ್ರೆಸ್ ಇಷ್ಟು ವರ್ಷ ಕತ್ತೆ ಕಾಯ್ತಾ ಇತ್ತಾ? ಎಂದು ಹೇಳಿಕೆ ಕೊಟ್ಟಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಧಾರವಾಡದ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ (ಫೆ.26) : ಕಾಂಗ್ರೆಸ್ ಇಷ್ಟು ವರ್ಷ ಕತ್ತೆ ಕಾಯ್ತಾ ಇತ್ತಾ? ಎಂದು ಹೇಳಿಕೆ ಕೊಟ್ಟಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಧಾರವಾಡದ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿ ನಡೆಸಿರುವ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಪಿ.ಎಚ್.ನೀರಲಕೇರಿ, ನಾಗರಾಜ ಗೌರಿ, ಅಲ್ತಾಫ್ ಹಳ್ಳೂರ ಅವರು, ಸಚಿವ ಜೋಶಿ ಅವರು ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.
undefined
ಇದು ಪ್ರಹ್ಲಾದ ಜೋಶಿ(Pralhad joshi) ಅವರ ಉದ್ಧಟತನದ ಹೇಳಿಕೆ. ನಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅವರ ಅಹಂಕಾರ ಮಿತಿಮೀರಿದೆ. ಈ ಅಹಂಕಾರಕ್ಕೆ ಜನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಜೋಶಿ ಅವರಿಗೆ ಅಧಿಕಾರದಿಂದ ನೆಲ ಕಾಣುತ್ತಿಲ್ಲ. ಅವರು ಮೊದಲು ನೆಲ ನೋಡಿ ಮಾತನಾಡಲಿ. ಯಾವ ಅಧಿಕಾರವೂ ಶಾಶ್ವತವಲ್ಲ. ಎಂಥೆಂತವರದ್ದೋ ಅಹಂಕಾರ ಇಲ್ಲಿ ಮುಗಿದು ಹೋಗಿದೆ. ಜೋಶಿ ಅವರ ರಾಜಕೀಯ ಇತಿಶ್ರೀ ಕೂಡ ಸಮೀಪ ಬಂದಿದೆ. ಅದು ಅವರ ಮಾತಿನಲ್ಲಿ ಕಂಡು ಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಉಚಿತ ಯೋಜನೆ ಘೋಷಿಸುವ ಕಾಂಗ್ರೆಸ್ ಇಷ್ಟುವರ್ಷ ಕತ್ತೆ ಕಾಯುತ್ತಿತ್ತಾ? : ಪ್ರಲ್ಹಾದ್ ಜೋಶಿ
ಮಾ.3ಕ್ಕೆ ಯಾತ್ರೆ:
ಕಾಂಗ್ರೆಸ್ ಪಕ್ಷ(Congress party)ದ ವತಿಯಿಂದ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಯು ಮಾ.3ರಂದು ಧಾರವಾಡಕ್ಕೆ ಆಗಮಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ತಿಳಿಸಿದರು.
ಅಂದು ನಗರದ ಕಡಪಾ ಮೈದಾನದಲ್ಲಿ ಸಂಜೆ ಐದು ಗಂಟೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ನೇತೃತ್ವದಲ್ಲಿ ನಡೆಯಲಿದೆ. ಪಕ್ಷದ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಕೈಕೊಂಡಿದ್ದಾರೆ. ಇದೀಗ ಪ್ರಜಾಧ್ವನಿ ಯಾತ್ರೆ ಮೂಲಕ ಪ್ರಚಾರ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಅತಿ ಉತ್ಸಾಹದಿಂದ ಭಾಗವಹಿಸಲಿದ್ದಾರೆ. ಹು-ಧಾ ಅವಳಿನಗರದ ಜನರು ಕೂಡ ಅಪಾರ ಪ್ರಮಾಣದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
\ರಾಜ್ಯ ರಾಜಕಾರಣಕ್ಕೆ ಬರ್ತಾರಾ ಕೇಂದ್ರ ಸಚಿವ ಪ್ರಹ್ಲಾದ ಜೋಶಿ?
ಪಶ್ಚಿಮ ಕ್ಷೇತ್ರದಲ್ಲಿ ಹಾಲಿ ಶಾಸಕ ಅರವಿಂದ ಬೆಲ್ಲದ ಅವರು ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆ. ಜನರ ಕಲ್ಯಾಣ ಕೆಲಸಗಳನ್ನು ಕೈಕೊಳ್ಳದೆ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ. ಟಿಕೆಟ್ ಬಯಸಿ 11 ಜನರು ಅರ್ಜಿ ಸಲ್ಲಿಸಿದ್ದೇವೆ. ನಮ್ಮಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದೇವೆ.
ಪಿ.ಎಚ್.ನೀರಲಕೇರಿ, ಕೆಪಿಸಿಸಿ ವಕ್ತಾರ