ರಾಹುಲ್ ಗಾಂಧಿ ಅವರ ಜನಪ್ರಿಯತೆ ಹಾಗೂ ಜನಪರ ಕಾಳಜಿಯನ್ನು ಕಂಡು ಕೇಂದ್ರ ಬಿಜೆಪಿ ಸರ್ಕಾರ ನಿದ್ದೆಗೆಡಿಸಿಕೊಂಡಿದೆ. ರಾಹುಲ್ ಗಾಂಧಿ ಅವರ ಮೇಲೆ ಮಾನಹಾನಿ ಮೊಕದ್ದಮೆ ದಾಖಲಿಸಿ ಸರ್ಕಾರದ ಪ್ರಭಾವ ಬೀರಿ ನ್ಯಾಯಾಂಗವನ್ನು ತಮ್ಮ ಕೈಗೊಂಬೆಯಾಗಿ ಮಾಡಿದ್ದು ಖಂಡನಾರ್ಹಗಿದೆ: ರಾಜು ಆಲಗೂರ
ವಿಜಯಪುರ(ಜು.13): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಹೊರಗೆ ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರಜಾಪ್ರಭುತ್ವ ಉಳಿವಿಗಾಗಿ ದೇಶದ ಹಿತಾಸಕ್ತಿ ಕಾಪಾಡುವ ದೃಷ್ಟಿಕೋನ ಹೊಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಕೇಂದ್ರ ಬಿಜೆಪಿ ಸರ್ಕಾರ ಸಲ್ಲದ ಆರೋಪಗಳನ್ನು ಮಾಡಿ ದ್ವೇಷ ಸಾಧಿಸಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ನೀಡುವ ದೃಷ್ಟಿಯಿಂದ ಇಂದು ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮೌನ ಪ್ರತಿಭಟನೆ ಮಾಡಿ ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಯಿತು.
ವಿಜಯಪುರ: ಕೈಗೂಡುತ್ತಾ ಜನರ ದೋಣಿ ವಿಹಾರದ ನಿರೀಕ್ಷೆ?
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ ಮಾತನಾಡಿ, ರಾಹುಲ್ ಗಾಂಧಿ ಅವರ ಜನಪ್ರಿಯತೆ ಹಾಗೂ ಜನಪರ ಕಾಳಜಿಯನ್ನು ಕಂಡು ಕೇಂದ್ರ ಬಿಜೆಪಿ ಸರ್ಕಾರ ನಿದ್ದೆಗೆಡಿಸಿಕೊಂಡಿದೆ. ರಾಹುಲ್ ಗಾಂಧಿ ಅವರ ಮೇಲೆ ಮಾನಹಾನಿ ಮೊಕದ್ದಮೆ ದಾಖಲಿಸಿ ಸರ್ಕಾರದ ಪ್ರಭಾವ ಬೀರಿ ನ್ಯಾಯಾಂಗವನ್ನು ತಮ್ಮ ಕೈಗೊಂಬೆಯಾಗಿ ಮಾಡಿದ್ದು ಖಂಡನಾರ್ಹಗಿದೆ. ಸತ್ಯವನ್ನು ಅಂಜದೇ ಅಳುಕದೇ ಮಾತನಾಡಿದ್ದು ತಪ್ಪಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಮಾತನಾಡಬಾರದೆ? ರಾಜಕೀಯವಾಗಿ ಟೀಕೆ ಸಹಿಸದವರು ಇಂದು ಅಧಿಕಾರದಲ್ಲಿದ್ದು, ರಾಹುಲ್ ಗಾಂಧಿ ಅವರ ಏಳ್ಗೆ ಸಹಿಸಲಾರದೇ ತಾಳ್ಮೆ ಕಳೆದುಕೊಂಡವರಂತೆ ವರ್ತಿಸುತ್ತಿದ್ದು, ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದರು.
ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿ ಮುಖಂಡರು ಯಾವ ರೀತಿ ತಮ್ಮ ಭಾಷೆಗಳನ್ನು ಬಳಸಿದ್ದಾರೆ ಎಂಬುದನ್ನು ಮನಗಾಣಬೇಕು. ಆದರೆ, ಇಂಥ ಟೀಕೆಗಳಿಗೆ ನಾವು ತಲೆಕೆಡಿಸಿಕೊಂಡಿಲ್ಲ. ಆ ಟೀಕೆಗಳನ್ನು ರಾಜಕೀಯವಾಗಿ ತೆಗೆದುಕೊಂಡ ರಾಹುಲ್ ಸರಳತೆ ಮೆರೆದಿದ್ದಾರೆ. ನ್ಯಾಯಾಲಯ ತೀರ್ಪುಕೊಟ್ಟಗಳಿಗೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ದ್ವೇಷ ಸಾಧಿಸಿರುವುದು ದೇಶದ ಜನರಿಗೆ ಅರ್ಥವಾಗಿದೆ. ಇಂಥ ಕೀಳು ರಾಜಕಾರಣವನ್ನು ಬಿಜೆಪಿ ಮಾಡುತ್ತಿದ್ದರೂ ರಾಹುಲ್ ಗಾಂಧಿ ಅವರು ಜನತಾ ನ್ಯಾಯಾಲಯಕ್ಕೆ ತಮಗೆ ಆದ ಅನ್ಯಾಯವನ್ನು ಜನರ ಮುಂದಿಡುತ್ತಿದ್ದು, ಅಪಾರ ಪ್ರಮಾಣದಲ್ಲಿ ಜನಬೆಂಬಲ ವ್ಯಕ್ತವಾಗುತ್ತಿದೆ. ರಾಹುಲ್ ಆಪ್ ಆಗೇ ಬಢೋ, ಹಮ್ ಆಪಕೆ ಸಾಥ ಹೈ ಘೋಷವಾಕ್ಯದೊಂದಿಗೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶ ಕಾಂಗ್ರೆಸ್ ಪರವಾಗಿ ಹಾಗೂ ರಾಹುಲ್ ಗಾಂಧಿ ಪರವಾಗಿ ನಿಲ್ಲಲಿದ್ದು, ದುರಹಂಕಾರಿ ಬಿಜೆಪಿಯನ್ನು ಮನೆಗೆ ಕಳುಹಿಸುವ ದಿನ ದೂರವಿಲ್ಲ ಎಂದು ಹೇಳಿದರು.
ಈ ಮೌನ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ್ ಗಡಗಲಾವ, ವೈಜನಾಥ ಕರ್ಪೂರಮಠ, ಆಜಾದ್ ಪಟೇಲ, ಡಾ.ಗಂಗಾಧರ ಸಂಬಣ್ಣಿ, ಮಹಾದೇವಿ ಗೋಕಾಕ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಕೆ.ಎಫ್.ಅಂಕಲಗಿ, ವಿದ್ಯಾವತಿ ಅಂಕಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಮೀರ್‌ಅಹ್ಮದ್ ಭಕ್ಷಿ, ಆರತಿ ಶಹಾಪೂರ, ಸುರೇಶ ಹಾರಿವಾಳ, ಜಿಲ್ಲಾ ಅಂಗ ಘಟಕಗಳ ಅಧ್ಯಕ್ಷರಾದ ಶಬ್ಬೀರ್ ಜಾಗೀರದಾರ, ವಿದ್ಯಾರಾಣಿ ತುಂಗಳ, ನಿಂಗಪ್ಪ ಸಂಗಾಪೂರ, ವಿಜಯಕುಮಾರ ಘಾಟಗೆ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ಖಾದಿರ್ ಖಾದೀಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಹೊನಮಲ್ಲ ಸಾರವಾಡ, ಹಾಜಿಲಾಲ ದಳವಾಯಿ, ಚನಬಸಪ್ಪ ನಂದರಗಿ, ಸಮದ ಸುತಾರ, ಶರಣಪ್ಪ ಯಕ್ಕುಂಡಿ, ಅಷ್ಪಾಕ್ ಮನಗೂಳಿ, ಕನ್ನಾನ್ ಮುಶ್ರೀಫ್, ಫಯಾಜ್ ಕಲಾದಗಿ, ಪಾಲಿಕೆ ಸದಸ್ಯರಾದ ಜಮೀರ್‌ಅಹ್ಮದ್ ಬಾಂಗಿ, ಮೈನುದ್ದೀನ್ ಬೀಳಗಿ, ಸಂತೋಷ ದೊಡಮನಿ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಗಂಗೂಬಾಯಿ ಧುಮಾಳೆ, ಹಮೀದಾ ಪಟೇಲ, ಭಾರತಿ ಹೊಸಮನಿ, ಸರಿತಾ ನಾಯಕ, ಲಲಿತಾ ದೊಡಮನಿ, ಜಯಶ್ರೀ ಹದನೂರ, ಲಕ್ಷ್ಮೇ ಕ್ಷೀರಸಾಗರ, ಸಮೀಮಾ ಅಕ್ಕಲಕೋಟ, ರಮಿಜಾ ನದಾಫ, ಕಾಶಿಬಾಯಿ ಹಡಪದ, ವರ್ಷಾ ಭೋವಿ, ಮುಸ್ಕಾನ, ಅಕ್ಬರ್ ನಾಯಕ, ಸಂತೋಷ ಬಾಲಗಾಂವಿ, ಪರಶುರಾಮ ಹೊಸಮನಿ, ತಾಜುದ್ದೀನ್ ಖಲೀಫಾ, ಬಾಬು ಯಾಳವಾರ, ಮಹಾದೇವ ರಾವಜಿ, ಲಾಲಸಾಬ್ ಕೊರಬು, ವಾಸೀಂ ತಾವರಗೇರಿ, ಕೃಷ್ಣಾ ಲಮಾಣಿ, ಪಿರೋಜ ಬಳಬಟ್ಟಿ, ವಾಸೀಂ ಇನಾಮದಾರ, ಅಶೋಕ ಪಾಟೀಲ, ಅನಿಲಕುಮಾರ ಯರನಾಳ, ಜೆ.ಎಂ. ಮೋಮಿನ್, ಸರ್ಪರಾಜ ಇನಾಮದಾರ, ಸಿದ್ದು ಹಡಪದ, ಲಕ್ಷ್ಮಣ ಚಲವಾದಿ, ಇಮ್ರಾನ್ ಮಕಾನದಾರ, ನಜೀರಸಾಬ್ ಬೀಳಗಿ, ಅಬ್ದುಲ್‌ಸತ್ತಾರ ಬಾಗವಾನ, ಕೆ.ಎ.ಮುಶ್ರೀಫ್, ಮೈಬೂಬ್ ಚೌಧರಿ, ಕೃಷ್ಣಾ ಲಮಾಣಿ, ಚಂದ್ರಕಾಂತ ತೊರವಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.