ಅಘಾಡಿ ಜೊತೆ ಬಂದರೆ ಸಿಎಂ ಹುದ್ದೆ : ಶಿಂಧೆ, ಅಜಿತ್‌ ಪವಾರ್‌ಗೆ ಕಾಂಗ್ರೆಸ್ ಆಫರ್‌

Published : Mar 17, 2025, 09:01 AM ISTUpdated : Mar 17, 2025, 09:02 AM IST
ಅಘಾಡಿ ಜೊತೆ ಬಂದರೆ ಸಿಎಂ ಹುದ್ದೆ :  ಶಿಂಧೆ, ಅಜಿತ್‌ ಪವಾರ್‌ಗೆ ಕಾಂಗ್ರೆಸ್ ಆಫರ್‌

ಸಾರಾಂಶ

ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರದಲ್ಲಿನ ಭಿನ್ನಮತದ ಲಾಭ ಪಡೆಯಲು ಪ್ರತಿಪಕ್ಷಗಳು ಮುಂದಾಗಿವೆ. ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರು ಏಕನಾಥ್ ಶಿಂಧೆ ಮತ್ತು ಅಜಿತ್‌ ಪವಾರ್‌ಗೆ ಸಿಎಂ ಹುದ್ದೆಯ ಆಫರ್ ನೀಡಿದ್ದಾರೆ, ಆದರೆ ಅವರಿಬ್ಬರೂ ಈ ಆಫರ್ ತಿರಸ್ಕರಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಸರ್ಕಾರದಲ್ಲಿನ ಭಿನ್ನಮತದ ಲಾಭ ಪಡೆಯಲು ಇದೀಗ ಪ್ರತಿಪಕ್ಷಗಳು ಮುಂದಾಗಿವೆ. ಬಿಜೆಪಿ ಜೊತೆ ಮುನಿಸಿಕೊಂಡಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಅವರಿಗೆ ಕಾಂಗ್ರೆಸ್‌ ಮುಖಂಡ ನಾನಾ ಪಟೋಲೆ ಮುಖ್ಯಮಂತ್ರಿ ಹುದ್ದೆಯ ಆಫರ್‌ ನೀಡಿದ್ದಾರೆ.

ನಾನಾ ಪಟೋಲೆ ಅವರ ಈ ಆಫರ್‌ ಮಹಾ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಆದರೆ ಅಜಿತ್‌ ಪವಾರ್ ಮತ್ತು ಶಿಂಧೆ ಮಾತ್ರ ಈ ಆಫರ್‌ ತಿರಸ್ಕರಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ನ ಇತರೆ ಮುಖಂಡರು ಮತ್ತು ಶಿವಸೇನೆಯ ಉದ್ಧವ್‌ ಬಣದ ಸಂಜಯ್‌ ರಾವುತ್‌ ಮಾತ್ರ ರಾಜಕೀಯದಲ್ಲಿ ಏನುಬೇಕಾದರೂ ಆಗಬಹುದು ಎಂದು ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರ ಕದನ: ರಾಹುಲ್ ಮಾಡಿದ ಪ್ರಮಾದಕ್ಕೆ ಲಗಾಡಿ ಹೊಡೆಯಿತಾ ಅಘಾಡಿ..?

ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಶಿಂಧೆ ಮತ್ತು ಅಜಿತ್‌ ಪವಾರ್ ಅವರ ಸ್ಥಿತಿ ಉಸಿರುಗಟ್ಟಿಸುವಂತಿದೆ. ಒಂದು ವೇಳೆ ಅವರು ಪ್ರತಿಪಕ್ಷಗಳ ಜತೆಗೆ ಕೈಜೋಡಿಸಿದರೆ ಸರದಿ ಪ್ರಕಾರ ಸಿಎಂ ಹುದ್ದೆಗೇರಬಹುದು. ಜತೆಗೆ, ಬಿಜೆಪಿ ಯಾವತ್ತಿಗೂ ಇವರಿಬ್ಬರಿಗೂ ಸಿಎಂ ಹುದ್ದೆ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ನ ಮಾಜ ಅಧ್ಯಕ್ಷರೂ ಆಗಿರುವ ಪಟೋಲೆ ತಿಳಿಸಿದ್ದಾರೆ.

ಈ ಹಿಂದೆ ಶಿಂದೆ ಸರ್ಕಾರ ಜಾರಿಗೆ ತಂದಿದ್ದ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಫಡ್ನವೀಸ್‌ ಸರ್ಕಾರ ಕೈಬಿಟ್ಟ ಬಳಿಕ ಇಬ್ಬರ ನಡುವಿನ ಭಿನ್ನಮತ ಹೆಚ್ಚಾಗಿದೆ ಎನ್ನಲಾಗಿದೆ.

ಮತ್ತೆ ಬ್ಯಾಲೆಟ್ ಪೇಪರ್‌ ಪದ್ಧತಿಯನ್ನೇ ಜಾರಿಗೊಳಿಸಿ: ಇವಿಎಂ ವಿರುದ್ಧ ಆಘಾಡಿ 3 ಹಂತದ ಮಹಾಸಮರ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ