ಬಿಜೆಪಿ-ಜೆಡಿಎಸ್‌ ಪಕ್ಷಗಳದ್ದು ‘ಶೋಕಿ ಯಾತ್ರೆ’: ಸಲೀಂ ಕಿಡಿ

By Kannadaprabha News  |  First Published Aug 7, 2024, 6:30 AM IST

ಜೆಡಿಎಸ್-ಬಿಜೆಪಿ ನಾಯಕರ ಮಕ್ಕಳ ನಾಯಕತ್ವದ ನಡುವಿನ ಪೈಪೋಟಿಯ ಈ ಪಾದಯಾತ್ರೆಗೆ ಯಾವುದೇ ಅರ್ಥವಿಲ್ಲ. ಮೂಡ ಹಗರಣ, ವಾಲ್ಮೀಕಿ ಹಗರಣಗಳ ಮೂಲಕ ಸರ್ಕಾರವನ್ನು ಅಭದ್ರಗೊಳಿಸುವ ಬಿಜೆಪಿ-ಜೆಡಿಎಸ್ ಹಾಗೂ ಕೇಂದ್ರ ಸರ್ಕಾರದ ಷಡ್ಯಂತ್ರ ಫಲ ನೀಡುವುದಿಲ್ಲ: ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್‌ 


ಬೆಂಗಳೂರು(ಆ.07):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಾ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ನಾಯಕರು ನಡೆಸುತ್ತಿರುವುದು ಪಾದಯಾತ್ರೆಯಲ್ಲ, ‘ಶೋಕಿ ಯಾತ್ರೆ’ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಟೀಕಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೆಡಿಎಸ್-ಬಿಜೆಪಿ ನಾಯಕರ ಮಕ್ಕಳ ನಾಯಕತ್ವದ ನಡುವಿನ ಪೈಪೋಟಿಯ ಈ ಪಾದಯಾತ್ರೆಗೆ ಯಾವುದೇ ಅರ್ಥವಿಲ್ಲ. ಮೂಡ ಹಗರಣ, ವಾಲ್ಮೀಕಿ ಹಗರಣಗಳ ಮೂಲಕ ಸರ್ಕಾರವನ್ನು ಅಭದ್ರಗೊಳಿಸುವ ಬಿಜೆಪಿ-ಜೆಡಿಎಸ್ ಹಾಗೂ ಕೇಂದ್ರ ಸರ್ಕಾರದ ಷಡ್ಯಂತ್ರ ಫಲ ನೀಡುವುದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರಂತಹ ನಾಯಕರಿಗೆ ಮಸಿ ಮಳೆಯುವ ಕೆಲಸಕ್ಕೆ ಕೈಹಾಕಿದರೆ ನಾವು ಕೈಕಟ್ಟಿ ಕೂರುವುದಲ್ಲ ಎಂದು ಅವರು ಎಚ್ಚರಿಸಿದ್ದಾರೆ.

Latest Videos

undefined

ಬಿಜೆಪಿ-ಜೆಡಿಎಸ್‌ ಕ್ಷಮಾಯಾತ್ರೆ ಮಾಡಲಿ: ಸಲೀಂ ಅಹಮದ್‌

ರಾಜ್ಯದ ಜನ 135 ಸ್ಥಾನಗಳಲ್ಲಿ ಗೆಲ್ಲಿಸಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಶಾಸಕರುಗಳಿಂದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಉತ್ತಮ ರೀತಿಯಲ್ಲಿ ನಡೆಸುತ್ತಿದ್ದಾರೆ. ಪಂಚ ಗ್ಯಾರಂಟಿಗಳೂ ಸೇರಿದಂತೆ ಬಡವರು, ಮಧ್ಯಮವರ್ಗ, ಪರಿಶಿಷ್ಟರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರು 40 ವರ್ಷದ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದ ಬದ್ಧತೆಯ ರಾಜಕಾರಣಿ. ಇದನ್ನು ಸಹಿಸಲಾಗದ ಬಿಜೆಪಿ, ಜೆಡಿಎಸ್‌ನವರು ಜನಮತದ ಸರ್ಕಾರವನ್ನು ಅಸ್ಥಿರಗೊಳಿಸುವ ಕುತಂತ್ರದಿಂದ ಬಿಜೆಪಿ ಅವಧಿಯಲ್ಲೇ ಮಾಡಿರುವ ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿದ್ದಾರೆ.

click me!