ಹಳೆಯದನ್ನು ಎತ್ತಿ ಕುಮಾರಸ್ವಾಮಿಗೆ ಮುಸ್ಲಿಂ ಮೇಲಿರೋ ಕಾಳಜಿಯನ್ನ ಪ್ರಶ್ನಿಸಿದ ಜಮೀರ್

By Suvarna NewsFirst Published Oct 18, 2021, 5:25 PM IST
Highlights

* ಅಲ್ಪಸಂಖ್ಯಾತರ ವಿಚಾರವಾಗಿ ಜೆಡಿಎಸ್-ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಪ
* ಕುಮಾರಸ್ವಾಮಿ ಆರೋಪಕ್ಕೆ ಜಮಿರ್ ಅಹಮ್ಮದ್ ಖಾನ್ ತಿರುಗೇಟು
* ಜಾಫರ್ ಶರೀಫ್ ಅವರನ್ನ ರಾಜಕೀಯವಾಗಿ ಕೊಲೆ ಮಾಡಿದ್ರು ಎಂದು ಆರೋಪ

ಬೆಂಗಳೂರು, (ಅ.18): ಅಲ್ಪಸಂಖ್ಯಾತರ (Muslim) ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ (Congress-JDS) ನಾಯಕರ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.

ಅಲ್ಪಸಂಖ್ಯಾತರನ್ನ ಸಿದ್ದರಾಮಯ್ಯ ಮುಗಿಸಿದವರು ಎನ್ನುವ ಎಚ್‌ಡಿ ಕುಮಾರಸ್ವಾಮಿ(HD Kumaraswamy) ಆರೋಪಕ್ಕೆ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ತಿರುಗೇಟು ಕೊಟ್ಟಿದ್ದಾರೆ.

ಈ ಹಿಂದೆ ಬಿಎಸ್‌ವೈಗೆ ಎಚ್‌ಡಿಕೆ ಏಕೆ ಸಿಎಂ ಹುದ್ದೆ ಬಿಟ್ಟುಕೊಡ್ಲಿಲ್ಲ? ಬಹಿರಂಗಪಡಿಸಿದ ಜಮೀರ್

ಈ ಬಗ್ಗೆ ಇಂದು (ಅ.18) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮಿರ್,  ರಾಮನಗರ ಮುಸ್ಲಿಂ ಅಭ್ಯರ್ಥಿಗೆ ಬಿಟ್ಟು ಕೊಡಬೇಕಿತ್ತು. ಕುಮಾರಸ್ವಾಮಿ ಎರಡು ಕಡೆ ನಿಲ್ಲುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.

ರಾಮನಗರದಲ್ಲಿ (Ramanagara)  ಉಪಚುನಾವಣೆನಲ್ಲಾದ್ರೂ ಕೊಡಬೇಕಿತ್ತು. ಅಲ್ಲಿ ಈ ಹಿಂದೆ ಮುಸ್ಲಿಂ ಅಭ್ಯರ್ಥಿ ಗೆದ್ದಿದ್ರು. ಅನಿತಾಕ್ಕಗೆ ಕೊಡದೇ ಮುಸ್ಲಿಮರಿಗೆ ಕೊಟ್ಟು ಮುಸ್ಲಿಂ ಕಾಳಜಿ ತೋರಿಸಬೇಕಿತ್ತು ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಇಬ್ರಾಹಿಂ (CM Ibrahim) ಒಳ್ಳೆಯ ಭಾಷಣಕಾರ, ಸಿದ್ದರಾಮಯ್ಯ ಅವರನ್ನ ಬೆಳೆಸಿದ್ರು.  ಟಿಕೆಟ್ ಕೊಟ್ರೆ ಮೂರನೇ ಸ್ಥಾನಕ್ಕೆ ಹೋದ್ರು. ಒಂದು ಕಾಲು ಕಾಂಗ್ರೆಸ್ ಒಂದು ಕಾಲು ಜೆಡಿಎಸ್ ಲ್ಲಿ ಇಟ್ಟಿದ್ದಾರೆ ಎಂದು ಸಿಎಂ ಇಬ್ರಾಹಿಂಗೆ ಟಾಂಗ್ ಕೊಟ್ಟರು.

ಜಾಫರ್ ಶರೀಫ್ (jafar sharif) ಅವರನ್ನ ರಾಜಕೀಯವಾಗಿ ಕೊಲೆ ಮಾಡಿದ್ರು. ಜಾಫರ್  ಶರೀಫ್ ಬಗ್ಗೆ ಕಾಳಜಿ ತೋರಿಸಿದ್ರಾ?ಜಾಫರ್ ಶರೀಫ್  ಅವರನ್ನ ಮುಗಿಸಿದ್ದು ಸಿದ್ದರಾಮಯ್ಯ ಅವರಲ್ಲ ಜೆಡಿಎಸ್. ಜಾಫರ್ ಶರೀಫ್  7 ಬಾರಿ ಗೆದ್ದವರು. ಅವರ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕಿ ಜಾಫರ್ ಶರೀಫ್  ಸೋಲುವಂತೆ ಮಾಡಿದ್ದು ಜೆಡಿಎಸ್ ಎಂದರು.

ಅವರ ಮೊಮ್ಮಗನನ್ನು ಹೆಬ್ಬಾಳದಲ್ಲಿ ಸೋಲಿಸಿದವರು ಜೆಡಿಎಸ್ ಅವರೇ. ಅವನ ವಿರುದ್ಧ ಮುಸ್ಲಿಂ ಅಭ್ಯರ್ಥಿ ಹಾಕಿ ಸೋಲಿಸಿದ್ರು. ಇದು ಮುಸ್ಲಿಂ ಮೇಲಿನ ಇರೋ ಕಾಳಜಿನಾ ಕುಮಾರಸ್ವಾಮಿ ಅವರೇ..? ಎಂದು ಜಮೀರ್ ಪ್ರಶ್ನಿಸಿದರು.

click me!