* ಮುಳುಗುತ್ತಿದ್ದ ಸಕ್ಕರೆ ಕಾರ್ಖಾನೆಯನ್ನು ರೈತರಿಗಾಗಿ ಉಳಿಸಿದ ಸಿ.ಎಂ. ಉದಾಸಿ
* ಕುಣಿಯಲಾಗದೆ ನೆಲ ಸೊಟ್ಟು ಎಂದು ಹೇಳುತ್ತಿರುವ ಕಾಂಗ್ರೆಸ್ಸಿಗರು
* ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಕಾಂಗ್ರೆಸ್
ಹಾನಗಲ್(ಅ.18): ಸುಳ್ಳು ಬಿತ್ತುವ ಸಿದ್ದರಾಮಯ್ಯನ(Siddaramaiah) ಮನೆ ದೇವ್ರು ಹಸಿ ಸುಳ್ಳು ಆಗಿದ್ದು, ಅದು ಕಾಂಗ್ರೆಸ್ಸಂಸ್ಕೃತಿ ಕೂಡ ಆಗಿದೆ. ಕೇಂದ್ರ ಸರ್ಕಾರದ ಅಕ್ಕಿಯನ್ನು ತಮ್ಮ ಸಹಾಯ ಎಂದು ಬಿಂಬಿಸಿಕೊಳ್ಳುವ ಹುಚ್ಚು ಸಾಹಸ ಅವರದು ಎಂದು ಕಾಂಗ್ರೆಸ್ವಿರುದ್ಧ ಸಂಸದ ಶಿವಕುಮಾರ ಉದಾಸಿ(Shivkumar Udasi) ಕಿಡಿಕಾರಿದ್ದಾರೆ.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಬಿಜೆಪಿ(BJP) ಆಯೋಜಿಸಿದ ಪ್ರಚಾರ(Campaign) ಸಭೆಯಲ್ಲಿ ಅವರು ಮಾತನಾಡಿದರು. ಸಂಗೂರು ಸಕ್ಕರೆ ಕಾರ್ಖಾನೆ(Sugar Factory) ವಿಷಯ ಪ್ರಸ್ತಾವಿಸುವಾಗ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಇರಬೇಕಾಗಿತ್ತು. ಮುಳುಗುತ್ತಿದ್ದ ಸಕ್ಕರೆ ಕಾರ್ಖಾನೆಯನ್ನು ರೈತರಿಗಾಗಿ(Farmers) ಉಳಿಸಿದ ಸಿ.ಎಂ. ಉದಾಸಿ(CM Udasi) ಅವರ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದು ನನಗೆ ನೋವಾಗಿದೆ. ಸಂಗೂರ ಕಾರ್ಖಾನೆ ವ್ಯವಹಾರದಲ್ಲಿ ತಪ್ಪು ಎಸಗಿದ್ದರೆ ಅವರೇ ಮುಖ್ಯಮಂತ್ರಿಯಾಗಿದ್ದ(Chief Minister) ಸಂದರ್ಭದಲ್ಲಿ ಶಿಕ್ಷೆ ನೀಡಬಹುದಿತ್ತು. ಯಾಕೆ ಮಾಡಲಿಲ್ಲ? ಪ್ರತಿ ಚುನಾವಣೆ(Election) ಸಂದರ್ಭದಲ್ಲಿ ಸಂಗೂರು ಸಕ್ಕರೆ ಕಾರ್ಖಾನೆ ವಿಷಯ ತೆಗೆಯುವ ಮೂಲಕ ಕಾಂಗ್ರೆಸ್(Congress) ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದ್ದು, ಸತ್ಯ ಜನರಿಗೆ ತಿಳಿಯುತ್ತದೆ ಎಂದರು.
ಈ ದೇಶಕ್ಕೆ ಫುಡ್ಸೆಕ್ಯುರೆಟಿಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಎಲ್ಲ ರಾಜ್ಯಗಳಿಗೂ ಪ್ರತಿ ಕೆಜಿಗೆ 29ರಂತೆ ಅಕ್ಕಿ ಖರೀದಿಸಿ ನೀಡಿದೆ. ಎರಡು ರು. ಪ್ರತಿ ಕೆಜಿಗೆ ಕೊಟ್ಟ ಅಕ್ಕಿ ಚೀಲದ ಮೇಲೆ ಸಿದ್ದರಾಮಯ್ಯ ದೊಡ್ಡ ಫೋಟೋ ಹಾಕಿಕೊಂಡರು. ಇದೇ ಅವರ ಸಾಧನೆ. ಇಂತಹ ಸಿದ್ದರಾಮಯ್ಯ ಸಿ.ಎಂ. ಉದಾಸಿ ಅವರಂಥ ಅಭಿವೃದ್ಧಿ ನಾಯಕನ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ ಎಂದರು.
ಮೋದಿ ಬಗ್ಗೆ ಮಾತನಾಡುವಾಗ ನಾಲಿಗೆ ಹದ್ದುಬಸ್ತಿನಲ್ಲಿರಲಿ: ಸಿದ್ದುಗೆ ಪ್ರಹ್ಲಾದ ಜೋಶಿ ಎಚ್ಚರಿಕೆ
ಅಭ್ಯರ್ಥಿ ಶಿವರಾಜ ಸಜ್ಜನ ಹಾನಗಲ್ಲ ಕ್ಷೇತ್ರದೊಂದಿಗೆ ನಿಕಟ ಸಂಪರ್ಕ ಹೊಂದಿ ಸಿ.ಎಂ. ಉದಾಸಿ ಅವರ ಗರಡಿಯಲ್ಲಿ ಬೆಳೆದವರು. ಅವರನ್ನು ಆಯ್ಕೆ ಮಾಡುವ ಮೂಲಕ ಹಾನಗಲ್ತಾಲೂಕಿನ ಜನತೆ ತಾಲೂಕಿನ ಅಭಿವೃದ್ಧಿಗೆ ಮುಂದಾಗಬೇಕು. ಸಜ್ಜನರ ಅವರ ಗೆಲುವು ಉದಾಸಿ ಅವರ ಆತ್ಮಕ್ಕೆ ಶಾಂತಿ ನೀಡುತ್ತದೆ. ಬೊಮ್ಮಾಯಿ(Basavaraj Bommai) ಅವರ ಆಡಳಿತಕ್ಕೆ ಶಕ್ತಿ ನೀಡುತ್ತದೆ ಎಂದರು.
ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಅಲ್ಪಸಂಖ್ಯಾತರ ಹಿತೈಷಿಗಳು ಎನ್ನುವ ಕಾಂಗ್ರೆಸ್ಡಿ.ಕೆ. ಶಿವಕುಮಾರ ಅವರ ಬಗ್ಗೆ ಲೇವಡಿ ಮಾಡಿದ ಸಲೀಂ ಅವರನ್ನು ಅಮಾನತು ಮಾಡಿದೆ. ಸಿದ್ದರಾಮಯ್ಯ ಅವರ ಆಪ್ತ ಉಗ್ರಪ್ಪ ಅವರನ್ನು ಏಕೆ ಅಮಾನತು ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ಇದೆಲ್ಲ ಕಾಂಗ್ರೆಸ್ನ ನಾಟಕ. ಇವರ ದುರಾಡಳಿತಕ್ಕೆ ಬೇಸತ್ತು ನಾವು ಹೊರಬಂದೆವು. ಬಿಜೆಪಿ ಸೇರಿದ್ದರಿಂದ ಇಲ್ಲಿ ಸರ್ಕಾರ ಬಂತು. ರಾಜ್ಯಕ್ಕೂ ಒಳ್ಳೆಯದಾಗಿದೆ. ಹಾನಗಲ್ಕ್ಷೇತ್ರದ ಚುನಾವಣೆಯಲ್ಲಿ 7 ಜನ ಸಚಿವರು ಇಲ್ಲೇ ಇದ್ದು ಚುನಾವಣೆ ಮಾಡುತ್ತೇವೆ. ಹಾನಗಲ್ಲ, ಸಿಂದಗಿಯಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.
ಸಚಿವ ಬಿ. ಶ್ರೀರಾಮುಲು ಮಾತನಾಡಿ, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಸರಿಯಾದ ಸಂದೇಶ ನೀಡಿದ್ದೇವೆ. ಹಿಂದುಳಿದವರೆಲ್ಲ ಬಿಜೆಪಿ ಪರವಾಗಿದ್ದಾರೆ. ಕೊಟ್ಟ ಮಾತಿನಂತೆ ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆ. ಕಾಂಗ್ರೆಸಿನವರು ಕುಣಿಯಲಾಗದೆ ನೆಲ ಸೊಟ್ಟು ಎಂದು ಹೇಳುತ್ತಿದ್ದಾರೆ. ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಜೋಡೆತ್ತಲ್ಲ, ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ. ಇಬ್ಬರು ಸುಳ್ಳಿನ ಫ್ಯಾಕ್ಟರಿ ಮಾಲೀಕರು ಎಂದು ಲೇವಡಿ ಮಾಡಿ, ಬಿಜೆಪಿಯ ಒಳ್ಳೆಯ ಪಯಣಕ್ಕೆ ಹಾನಗಲ್ಲ ಚುನಾವಣೆಯಲ್ಲಿ ಶಿವರಾಜ ಸಜ್ಜನ ಅವರ ಗೆಲುವಿನ ಮೂಲಕ ಬಿಜೆಪಿಗೆ ಶಕ್ತಿ ತುಂಬೋಣ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಸಚಿವರಾದ ಶಿವರಾಮ್ಹೆಬ್ಬಾರ, ಮುನಿರತ್ನ, ಸುನೀಲಕುಮಾರ ಕಾರ್ಕಳ, ಜೆ.ಸಿ. ಮಾಧುಸ್ವಾಮಿ, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ರಾಜೂಗೌಡ, ಕಳಕಪ್ಪ ಬಂಡಿ, ಅರುಣಕುಮಾರ ಪೂಜಾರ, ಎನ್. ರವಿಕುಮಾರ, ಎಸ್.ವಿ. ಸಂಕನೂರ, ಯು.ಬಿ. ಬಣಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಬಿಜೆಪಿ ಮಂಡಲ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ಮಾಲತೇಶ ಸೊಪ್ಪಿನ ಇತರರು ಇದ್ದರು.