ಐದೂ ಬೆರಳು ಒಂದೇ ಸಮ ಇರುವುದಿಲ್ಲ. ಎಲ್ಲಾ ಸಚಿವರು ಒಂದೇ ರೀತಿ ಇರುವುದಿಲ್ಲ. ಸಚಿವರಲ್ಲಿ ಕೆಲವರು ಶಾಸಕರ ಕರೆ ಸ್ವೀಕರಿಸದವರೂ ಇದ್ದಾರೆ. ಅಂಥವರು ಇನ್ನಾದರೂ ಸುಧಾರಿಸಬೇಕು. ಒಬ್ಬ ಸಚಿವರಿಗೆ ಪಕ್ಷದ 135 ಕ್ಷೇತ್ರದ ಶಾಸಕರ ಮೊಬೈಲ್ ನಂಬರ್ ಸೇವ್ ಮಾಡಿಕೊಳ್ಳುವಷ್ಟು ಮೊಬೈಲ್‌ನಲ್ಲಿ ಮೆಮೋರಿ ಇರುವುದಿಲ್ಲವೇ ಎಂದು ಕಿಡಿಕಾರಿದ ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ
ದಾವಣಗೆರೆ(ಆ.30): ರಾಜ್ಯ ಕಾಂಗ್ರೆಸ್ ಸಚಿವರ ವರ್ತನೆ ಕುರಿತು ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಸಚಿವರು ಕರೆಗಳನ್ನು ಸ್ವೀಕರಿಸುತ್ತಿಲ್ಲ, ಸ್ಪಂದಿಸುತ್ತಿಲ್ಲವೆಂಬ ಕಾರಣಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈ ಹಿಂದೆ ಸಚಿವರ ಸಭೆ ಮಾಡಿದ್ದರೂ ಕೆಲ ಸಚಿವರು ಇನ್ನೂ ಸುಧಾರಿಸಿಲ್ಲ. ಆ ಸಚಿವರ ಆಪ್ತ ಸಹಾಯಕರೂ ಅದೇ ದಾರಿ ಹಿಡಿದಿದ್ದಾರೆ ಎಂದು ಬೇಸರ ತೋಡಿಕೊಂಡಿದ್ದಾರೆ.
ಚನ್ನಗಿರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದೂ ಬೆರಳು ಒಂದೇ ಸಮ ಇರುವುದಿಲ್ಲ. ಎಲ್ಲಾ ಸಚಿವರು ಒಂದೇ ರೀತಿ ಇರುವುದಿಲ್ಲ. ಸಚಿವರಲ್ಲಿ ಕೆಲವರು ಶಾಸಕರ ಕರೆ ಸ್ವೀಕರಿಸದವರೂ ಇದ್ದಾರೆ. ಅಂಥವರು ಇನ್ನಾದರೂ ಸುಧಾರಿಸಬೇಕು. ಒಬ್ಬ ಸಚಿವರಿಗೆ ಪಕ್ಷದ 135 ಕ್ಷೇತ್ರದ ಶಾಸಕರ ಮೊಬೈಲ್ ನಂಬರ್ ಸೇವ್ ಮಾಡಿಕೊಳ್ಳುವಷ್ಟು ಮೊಬೈಲ್‌ನಲ್ಲಿ ಮೆಮೋರಿ ಇರುವುದಿಲ್ಲವೇ ಎಂದು ಕಿಡಿಕಾರಿದರು.
undefined
ಬಿಜೆಪಿ ಆಫೀಸಿಂದಲೇ ನನ್ನ ಬಗ್ಗೆ ಅಪಪ್ರಚಾರ: ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದ ರೇಣುಕಾಚಾರ್ಯ
ಸಚಿವರಿಂದ ಈ ರೀತಿಯ ವರ್ತನೆ ಮರುಕಳಿಸಬಾರದು ಎಂಬುದಾಗಿ ಹಿಂದೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದೆ. ಆದರೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಮ್ಮ ಅಣ್ಣ ಇದ್ದಂತೆ. ಅವರ ಮೇಲೆ ಯಾವುದೇ ಬೇಸರ ಇಲ್ಲ. ಅವರು ಕರೆ ಸ್ವೀಕರಿಸುತ್ತಾರೆ, ಸ್ಪಂದಿಸುತ್ತಾರೆ. ಆದರೆ ಬೇರೆ ಸಚಿವರು ಕರೆ ಸ್ವೀಕರಿಸದೆ ನಿರ್ಲಕ್ಷ್ಯ ಮಾಡುತ್ತಾರೆ. ಇನ್ನು ಸ್ವಲ್ಪ ದಿನ ಕಾದು ನೋಡುತ್ತೇನೆ. ಆ ಮೇಲೆ ಮತ್ತೆ ಮಾಧ್ಯಮಗಳ ಮುಂದೆ ಹೋಗುತ್ತೇನೆ. ಸಚಿವರು ಕರೆ ಸ್ವೀಕರಿಸಿದರೆ, ಜನ ನಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಇನ್ನಾದರೂ ಅಂಥ ಸಚಿವರು ಕರೆ ಸ್ವೀಕರಿಸುವ ಕೆಲಸ ಮಾಡಲಿ ಎಂದು ಸೂಚ್ಯವಾಗಿ ಎಚ್ಚರಿಸಿದರು.