ಹುಬ್ಬಳ್ಳಿ (ಏ.14): ಸಂವಿಧಾನ ಮುಟ್ಟಿದರೆ ನೀವು ಸುಟ್ಟು ಭಸ್ಮ ಆಗ್ತೀರಿ ಎಂದು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಎಚ್ಚರಿಕೆ ನೀಡಿದ್ದಾರೆ. ಕೆಲವೊಬ್ಬರು ಮಾತೆತ್ತಿದರೆ ಸಂವಿಧಾನ ಬದಲಾಯಿಸೋ ಮಾತಾಡ್ತಿದ್ದಾರೆ. ಆದರೆ ಸಂವಿಧಾನ ಬದಲಾವಣೆ ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಸಂವಿಧಾನ ಬದಲಾವಣೆಗೆ ಕೈಹಾಕಿದರೆ ಅವರು ಸುಟ್ಟು ಭಸ್ಮ ಆಗ್ತಾರೆ. ಅಂಬೇಡ್ಕರ್ ಶೋಷಿತ ಜನಾಂಗಕ್ಕೆ ಜೀವನ ಮುಡಿಪಿಟ್ಟರು. ಸಂವಿಧಾನ ತಗೆದು ಹಾಕೋದಾಗಿ ಹೇಳೋ ಭೂಪರಿಗೆ ನಾವು ತಕ್ಕ ಉತ್ತರ ಕೊಡಬೇಕು.
ಯಾರು ಯಾರು ಸಂವಿಧಾನ ವಿರೋಧಿ ಹೇಳಿಕೆ ಕೊಡ್ತಾರೋ ಅವರನ್ನು ಲಾಡ್ ನಾಶ ಮಾಡ್ತಾರೆ. ಸಂತೋಷ್ ಲಾಡ್ ಗುಡುಗು ಮಿಂಚಿನ ರೀತಿಯಲ್ಲಿ ಓಡಾಡ್ತಾ ಇದಾರೆ. ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಮತ್ತು ವಾಲ್ಮೀಕಿ ಫೋಟೋ ಹೊರಗೆ ಹಾಕಲಾಗಿದೆ. ಬಿಜೆಪಿ ಮತ್ತು ಆರ್.ಎಸ್.ಎಸ್ ಮನಸ್ಥಿತಿ ಏನು ಅನ್ನೋದು ಇದರಿಂದ ಗೊತ್ತಾಗುತ್ತೆ. ಸಂವಿಧಾನ ಉಳಿಯಬೇಕಾದ್ರೆ ವಿನೋದ್ ಅಸೂಟಿಯಂಥವರು ಗೆಲ್ಲಬೇಕು ಎಂದು ವಿಶ್ವ ಮಾನವರ ದಿನಾಚರಣೆಯಲ್ಲಿ ಅಬ್ಬಯ್ಯ ಹೇಳಿದರು.
ದೇಶದೆಲ್ಲೆಡೆ ಬದಲಾವಣೆಯ ಗಾಳಿ: ದೇಶದಲ್ಲಿಂದು ಬದಲಾವಣೆಯ ಗಾಳಿ ಬೀಸಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ-ಮನೆಗೆ ತಲುಪಿಸಿದರೆ ಸಾಕು, ಗೆಲುವು ನಿಶ್ಚಿತ ಎಂದು ಶಾಸಕ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.ಅವರು ಗುರುವಾರ ಇಲ್ಲಿನ ಪಿ.ಬಿ. ರಸ್ತೆಯ ಬೀಡ್ನಾಳ್ ಕ್ರಾಸ್‌ನಲ್ಲಿರುವ ಕಚ್ಚಿ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಮಕ್ಕಳನ್ನು ದತ್ತು ಪಡೆದು ಬಿಜೆಪಿಗರು ಕಳೆದ ಬಾರಿ ಸರ್ಕಾರ ಮಾಡಿದ್ರು: ಸಚಿವ ಶಿವಾನಂದ ಪಾಟೀಲ
ದೇಶದೆಲ್ಲೆಡೆ ಬಿಜೆಪಿಯ ದುರಾಡಳಿತದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಮತ್ತೆ ಕಾಂಗ್ರೆಸ್ ಆಡಳಿತದ ದಿನಗಳನ್ನು ಬಯಸುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ಯಂತ ಶಿಸ್ತುಬದ್ಧಾಗಿ ಕಾರ್ಯ ನಿರ್ವಹಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಬಿಜೆಪಿ ಒಡೆದು ಆಳುವ ನೀತಿ ಅನುಸರಿಸಿ ನಮ್ಮ ನಮ್ಮಲ್ಲೆ ಗೊಂದಲ ಸೃಷ್ಟಿಸುತ್ತಿದೆ. ಇಂತಹ ಕೋಮುವಾದಿ ಪಕ್ಷದ ಆಡಳಿತವನ್ನು ಜನರು ತಿರಸ್ಕಾರ ಮಾಡುತ್ತಿದ್ದು, ಬಿಜೆಪಿ ಕಿತ್ತೆಸೆಯಲು ತಾವೆಲ್ಲ ನನಗೆ ಆಶೀರ್ವದಿಸುವಂತೆ ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.