Karnataka Politics: 40 ಪರ್ಸೆಂಟೇಜ್ ಪಡೆಯುವುದೇ ಅಚ್ಛೇ ದಿನವಾ?: ಹೆಬ್ಬಾಳಕರ್‌

Kannadaprabha News   | Asianet News
Published : Dec 25, 2021, 11:52 AM IST
Karnataka Politics: 40 ಪರ್ಸೆಂಟೇಜ್ ಪಡೆಯುವುದೇ ಅಚ್ಛೇ ದಿನವಾ?: ಹೆಬ್ಬಾಳಕರ್‌

ಸಾರಾಂಶ

*   ದೇಶದಲ್ಲಿ ಬೆಲೆ ಏರಿಕೆಯಿಂದ ಬಡವರ ಹಾಗೂ ಜನಸಾಮಾನ್ಯರ ಬದುಕು ಅತಂತ್ರ *   ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ *   ತಮ್ಮ ಅಮೂಲ್ಯವಾದ ಮತ ನೀಡಿ ಕಾಂಗ್ರೆಸ್ ಗೆಲ್ಲಿಸಿ 

ಕಾಗವಾಡ(ಡಿ.25): ರಾಜ್ಯದ ಬಿಜೆಪಿ ಸರ್ಕಾರ(BJP Government) 40 ಪರ್ಸೆಂಟೇಜ್ ಸರ್ಕಾರ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿಲ್ಲ. ಬದಲಾಗಿ ಗುತ್ತಿಗೆದಾರರ ಸಂಘದವರೇ ಈ ಕುರಿತು ಎರಡು ತಿಂಗಳ ಹಿಂದೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ದೂರು ನೀಡಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌(Lakshmi Hebbalkar) ಐನಾಪುರದಲ್ಲಿ ಬಿಜೆಪಿಯನ್ನು ಕುಟುಕಿದರು. 

ಗುರುವಾರ ಸಂಜೆ ಕಾಗವಾಡ(Kagwad) ತಾಲೂಕಿನ ಐನಾಪುರ ಪಪಂ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ(Siddaramaiah) ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕಕ್ಕೆ(Karnataka) ಬಂದಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi) ಆ ಸರ್ಕಾರವನ್ನು 10 ಪರ್ಸೆಂಟೇಜ್ ಸರ್ಕಾರ ಎಂದು ಟೀಕೆ ಮಾಡಿದ್ದರು. ಆದರೆ, ಈಗ ಅವರದ್ದೇ ಆದ ಬಿಜೆಪಿ ಸರ್ಕಾರ 40 ಪರ್ಸೆಂಟೇಜ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದರೂ ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ಏನನ್ನೂ ಹೇಳದೇ ಸುಮ್ಮನಿದ್ದಾರೆ. ಈ ಕುರಿತು ಬಿ.ಎಲ್.ಸಂತೋಷ(BL Santosh) ಅವರಿಗೂ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಅವರೂ ಮೌನ ವಹಿಸಿದ್ದಾರೆ. ಹಾಗಾದರೆ, ಯಾರು ನಿಜವಾದ ಭ್ರಷ್ಟರು? ಇದೇನಾ ಮೋದಿಯವರು ಹೇಳಿದ ಅಚ್ಛೇ ದಿನ್? ಬಹುಶಃ 40 ಪರ್ಸೆಂಟೇಜ್ ಪಡೆಯುವುದೇ ಅಚ್ಛೇ ದಿನ(Achche Din)  ಆಗಿರಬೇಕು ಎಂದು ಹೇಳಿದರು.

ಕೈ ಕಾರ್ಯಕರ್ತರಲ್ಲಿ ಭಯ ಸೃಷ್ಟಿಗೆ ಐಟಿ ದಾಳಿ: ಹೆಬ್ಬಾಳಕರ್‌ 

ಈ ವೇಳೆ ಮಾಜಿ ಶಾಸಕರಾದ ರಾಜು ಕಾಗೆ, ವೀರಕುಮಾರ ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ಚಂದ್ರಶೇಖರ ಗಾಣಿಗೇರ, ದಿಗ್ವಿಜಯ ಪವಾರದೇಸಾಯಿ, ವಿಜಯ ಅಕಿವಾಟೆ, ಚಂದ್ರಕಾಂತ ಇಮ್ಮಡಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸುಭಾಷ ಪಾಟೀಲ, ಚಮನರಾವ್ ಪಾಟೀಲ, ಕುಮಾರ ಅಪರಾಜ, ಸಂಜಯ ಕುಚನೂರೆ ಇದ್ದರು.

ಅಥಣಿ ಪುರಸಭೆ ಚುನಾವಣೆ ಅಂಗವಾಗಿ ಶುಕ್ರವಾರ ಕಾಂಗ್ರೆಸ್(Congress) ಅಭ್ಯರ್ಥಿಗಳ ಪರವಾಗಿ ಆಯೋಜಿಸಿದ್ದ ಪ್ರಚಾರಸಭೆಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್‌, ಅಥಣಿ ಶಾಸಕ ಮಹೇಶ ಕುಮಠಳ್ಳಿ(Mahesh Kumatalli) ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ ಸರ್ಕಾರ ಈಗ ಅವರನ್ನು ಮುಳ್ಳಿನ ಹಾಸಿಗೆಯ ಮೇಲೆ ಕೂರಿಸಿದೆ ಎಂದು ಲೇವಡಿ ಮಾಡಿದರು. ಚನ್ನರಾಜ ಹಟ್ಟಿಹೊಳಿ ಅವರು ವಿಧಾನ ಪರಿಷತ್ತ ಚುನಾವಣೆಗೆ ಆಯ್ಕೆ ಆಗಿರುವುದು ರಾಜ್ಯದ ಜನರು ಕಾಂಗೆಸ್ ಪರ ಇದ್ದಾರೆ ಎಂಬುದನ್ನು ಸೂಚಿಸಿದೆ ಎಂದು ಹೇಳಿದರು.

ದೇಶದಲ್ಲಿ ಬೆಲೆ ಏರಿಕೆಯಿಂದ ಬಡವರ ಹಾಗೂ ಜನಸಾಮಾನ್ಯರ ಬದುಕು ಅತಂತ್ರವಾಗಿದೆ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ, ಎಲ್ಲ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು ಎಂದು ಮತಯಾಚನೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ವಿಶ್ವಾಸ ವೈದ್ಯ, ರವೀಂದ್ರ ಯಲಿಗಾರ ಹಾಗೂ ಉಮೇಶ ಬಾಳಿ, ಸೌರಭ ಚೋಪ್ರಾ ಮಾತನಾಡಿದರು. 

'ಚುಕ್ಕಿ, ಚಂದ್ರಮ ತೋರಿಸಿ ಹೆಬ್ಬಾ​ಳ​ಕ​ರ್‌ ರಾಜಕೀಯ'

ದಿನದಿಂದ ದಿನಕ್ಕೆ ಬೆಲೆ ಏರ್ತಿದೆ ಅಚ್ಛೆದಿನ್‌ ಯಾವಾಗ?: ಪಾಟೀಲ

ಜಮಖಂಡಿ:  ಬಿಜೆಪಿ ಸರ್ಕಾರದಲ್ಲಿ ಡೀಸೆಲ್‌, ಪೆಟ್ರೋಲ್‌, ಸಿಮೆಂಟ್‌, ಸ್ಟೀಲ್‌, ತರಕಾರಿ, ದಿನಸಿ ಸಾಮಗ್ರಿಗಳು ಮತ್ತು ಖಾನಾವಳಿ, ಚಹಾದಂಗಡಿಯಲ್ಲಿನ ದರಗಳು ದಿನದಿಂದ ದಿನಕ್ಕೆ ಏರುತ್ತಿದೆ. ಈಗಾದರೇ ಎಲ್ಲಿದೆ ಅಚ್ಛೇದಿನ್‌ ಎಂದು ಶಾಸಕ ಎಂ.ಬಿ. ಪಾಟೀಲ(MB Patil) ಪ್ರಶ್ನಿಸಿದ್ದರು.

ಗ್ರಾಮಗಳು ಅಭಿವೃದ್ಧಿಯಾದರೆ ದೇಶವು ಅಭಿವೃದ್ಧಿಯಾಗುತ್ತವೆ ಎಂದು ಮಹಾತ್ಮ ಗಾಂಧಿ(Mahatma Gandhi) ಕನಸು ಕಂಡಿದ್ದರು. ಆದರೆ ಅವರ ಕನಸು ನನಸಾಗದೆ ಉಳಿದಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಾಯಕರಾದ ದಿ. ರಾಜೀವ ಗಾಂಧಿ, ಡಾ. ಮನಮೋಹನ ಸಿಂಗ್‌ ಅವರು ಪಂಚಾಯತ್‌ ರಾಜ್‌ಗಳ ಅಭಿವೃದ್ಧಿ ಮಾಡಲು ಸಾಕಷ್ಟು ಅನುದಾನ ಜಾರಿಗೆ ತಂದಿದ್ದರು. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ 6 ಸಾವಿರ ಕೆರೆಗಳನ್ನು ಅಭಿವೃದ್ಧಿಯನ್ನು ಮಾಡಿ ತುಂಬಲಾಗಿದೆ. ಮನೆಗಳ ನಿರ್ಮಿಸಲು 50 ಸಾವಿರ ಕೋಟಿ ಅನುದಾನದಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿಸಲಾಗಿದೆ. ಇಂದಿನ ದಿನಮಾನದಲ್ಲಿ ಗ್ರಾಪಂಗಳಿಗೆ ವಿದ್ಯುತ್‌ ಬಿಲ್‌ ಕಟ್ಟಲು ಸಾಧ್ಯವಿಲ್ಲ. ಯಾವ ಗ್ರಾಮಗಳಲ್ಲಿ ಯಾವುದೇ ಒಂದು ಹೊಸ ಮನೆಗಳು ಕಟ್ಟಿಲ್ಲ. ಬಿದ್ದಿರುವ ಮನೆಗಳ ಸುಧಾರಣೆಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!