Assembly election: ಕಾಂಗ್ರೆಸ್‌ ಸುಳ್ಳುರಾಮಯ್ಯನ ರೀಡೂ ಹಗರಣ ಮರೆತೋಯ್ತಾ.?: ಸಿ.ಟಿ. ರವಿ ವಾಗ್ದಾಳಿ

By Sathish Kumar KH  |  First Published Jan 22, 2023, 9:34 PM IST

ನಿಮಗೇ ನೀವೆ ಸತ್ಯಹರಿಶ್ಚಂದ್ರ ಅಂತ ಸರ್ಟಿಫಿಕೇಟ್ ಕೊಟ್ಟುಕೊಳ್ಳಲು ಆಗಲ್ಲ 
ರಿಡ್ಯೂ , ಹಾಸಿಗೆ ದಿಂಬು ವಿಷಯದಲ್ಲಿ ನಡೆದ ಹಗರಣ ಬಗ್ಗೆ ಮರೆತೋಯ್ತಾ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸಿ.ಟಿ ರವಿ ವಾಗ್ದಾಳಿ


ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.22): ತಮ್ಮ ಅಧಿಕಾರವಧಿಯಲ್ಲಿ ಒಂದೇ ಒಂದು ಅವ್ಯವಹಾರ ನಡೆದಿಲ್ಲ ಎಂದು ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರೀಡೂ ಎಂದರೆ ಏನೆಂಬುದನ್ನು ಸ್ವಲ್ಪ ಬಿಡಿಸಿ ಹೇಳಬೇಕು. ಅದನ್ನು ಬಿಟ್ಟು ತಮಗೆ ತಾವೇ ಸತ್ಯಹರಿಶ್ಚಂದ್ರ ಎಂದು ಹೇಳಿಕೊಳ್ಳಲು ಆಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದರು.

ನಿನ್ನೆ ನಗರದಲ್ಲಿ ನಡೆದ ಕಾಂಗ್ರೆಸ್ ಜನಧ್ವನಿ ಸಮಾವೇಶದಲ್ಲಿ ತಮ್ಮ ಅವಧಿಯಲ್ಲಿ ಒಂದೂ ಭ್ರಷ್ಟಾಚಾರ ನಡೆದಿರಲಿಲ್ಲ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಇಂದು ಚಿಕ್ಕಮಗಳೂರು ನಗರದಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ ರೀಡೂ ಸಾವಿರಾರು ಕೊಟಿ ರೂ.ನ ಹಗರಣ ಅಲ್ಲವೇ? ಬಿಡಿಎ ಸ್ವಾಧೀನ ಪಡಿಸಿಕೊಂಡ ಕೋಟ್ಯಾಂತರ ರೂ. ಬೆಲೆ ಬಾಳುವ ಭೂಮಿಯನ್ನು ಡಿ ನೋಟಿಫೈ ಮಾಡಿ ಖಾಸಿಗಿಯವರಿಗೆ ಹಂಚಿದ್ದನ್ನು ಹಗರಣ ಎನ್ನದೆ ಇನ್ನೇನು ಹೇಳಬೇಕು ಎಂದು ಪ್ರಶ್ನಿಸಿದರು.ನಿಮ್ಮದೇ ಓರ್ವ ಮಂತ್ರಿ ಹಾಸಿಗೆ, ದಿಂಬಿನಲ್ಲಿ ಹಣದತಿಂದು ಕೇಸು ದಾಖಲಾಗಿದ್ದು ನಿಮಗೆ ಮರೆತು ಹೋಯಿತೇ? ಮರಳು ಹಗರಣದಲ್ಲಿ ಯಾರು ಭಾಗಿಯಾಗಿದ್ದರು ಎನ್ನುವುದನ್ನು ನಾವು ಬಿಡಿಸಿ ಹೇಳಬೇಕೆ ಎಂದು ಪ್ರಶ್ನಿಸಿದರು.

Latest Videos

undefined

Assembly election: ಕಾಂಗ್ರೆಸ್‌ನದ್ದು ಸೌಂಡ್ ಜಾಸ್ತಿ, ಆದರೆ ಗ್ರೌಂಡ್‌ನಲ್ಲಿ ಬಿಜೆಪಿ ಅಲೆಯಿದೆ: ಸಿ.ಟಿ. ರವಿ

ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ:  ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಉಚಿತ ವಿದ್ಯುತ್, ಮನೆ ಯಜಮಾನಿಗೆ 2000 ರೂ. ಕೊಡಲಾಗದವರು ಇಲ್ಲಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾವು ಸುಳ್ಳು ರಾಮಯ್ಯ ಎಂದು ಹೇಳುವುದು ಎಂದು ರವಿ ಕುಟುಕಿದರು.ರಾಜಸ್ಥಾನ. ಚತ್ತೀಸ್‌ಘಡ, ಹಿಮಾಚಲದಲ್ಲಿ ಅಧಿಕಾರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಈ ಕೊಡುಗೆಗಳನ್ನು ಕೊಡುತ್ತಿದ್ದಾರೆ? ನಾಳೆ ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎಂದು ಜೆಸಿಬಿ ಹಿಡಿದು ಲೂಟಿ ಹೊಡೆಯಲು ಕುಳಿತಿದ್ದಾರೆ ಅದಕ್ಕಾಗಿ ಹೀಗೆಲ್ಲ ಸುಳ್ಳು ಹೇಳುತ್ತಿದ್ದಾರೆ ಟೀಕಿಸಿದರು.

ಏನೂ ಕೊಡದೇ ಮಾತನಾಡುವ ಕಾಂಗ್ರೆಸ್: ಮೋದಿ ಕೊಟ್ಟು ತೋರಿಸಿದರು ನಿಜವಾಗಲೂ ಇದು ಕಾಂಗ್ರೆಸ್ ನೀತಿ ಆಗಿದ್ದರೆ ಅಧಿಕಾರದಲ್ಲಿರುವ ರಾಜ್ಯದಲ್ಲಿ ಯಾಕೆ ಕೊಡುತ್ತಿಲ್ಲ. ಆದರೆ ನಮ್ಮ ಮೋದಿ ಅವರು ಹೇಳುವುದಿಲ್ಲ. ಮಾಡಿದ್ದನ್ನು ಹೇಳುತ್ತಾರೆ. ಚುನಾವಣೆಗೆ ಮುಂಚೆ ಜನ್‌ಧನ್, ಸ್ವಚ್ಛ ಭಾರತ್, ಶೌಚಾಲಯ, ಗ್ಯಾಸ್ ಸಂಪರ್ಕ, ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ಯೋಜನೆಗಳಾವುದನ್ನೂ ಕೊಡುತ್ತೇವೆ ಎಂದು ಹೇಳಿರಲಿಲ್ಲ ಅದರೆ ಕೊಟ್ಟು ತೋರಿಸಿದರು. ಇವರು ಕೊಡದಲೇ ಮಾತನಾಡುತ್ತಿದ್ದಾರೆ. ಬಿಜೆಪಿಗೂ ಕಾಂಗ್ರೆಸ್‌ಗೂ ಇರುವ ವ್ಯತ್ಯಾಸ ಇಷ್ಟೇ ಎಂದು ವ್ಯಂಗ್ಯವಾಡಿದರು.

ನ್ಯಾಯ ಕೇಳುವವರಿಗೆ ನೈತಿಕತೆ ಇರಬೇಕು: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿ.ಟಿ. ರವಿ

ಕಾಂಗ್ರೇಸ್ ಪಕ್ಷವನ್ನು ಅರಬ್ಬಿ ಸಮುದ್ರಕ್ಕೆ ಹಾಕಿ:  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊಳೆದು ಅರಬ್ಬಿ ಸಮುದ್ರಕ್ಕೆ ಹಾಕಿ. ಮೋದಿ ಅವರಿಗೆ ಕೊಡುವ ರೀತಿ ಕರ್ನಾಟಕದಲ್ಲೂ ಬಿಜೆಪಿಗೆ ಬಹುಮತ ಕೊಡಿ. ಒಂದೇ ಒಂದು ಕ್ಷೇತ್ರದಲ್ಲೂ ಕಾಂಗ್ರೆಸನ್ನು ಗೆಲ್ಲಿಸಬೇಡಿ ಎಂದು ಜನತೆಯಲ್ಲಿ ಮನವಿ ಮಾಡುತ್ತೇನೆ. ಇದರಿಂದ ರಾಜಕಾರಣ ಸ್ವಚ್ಛವಾಗುತ್ತದೆ. ರಾಷ್ಟ್ರಭಕ್ತಿ ರಾಜಕಾರಣ ಬರುತ್ತದೆ ಎಂದರು. 2008ರಲ್ಲಿ ಚುನಾವಣೆ ಸಂದರ್ಭದಲ್ಲಿ ಜನತಾದಳ ಬಿಜೆಪಿಯ 'ಬಿ' ಟೀಂ ಎಂದು ಕರೆದ ಕಾಂಗ್ರೆಸ್ ಚುನಾವಣೆ ನಂತರ ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಿತು. ಈ ಕಾರಣಕ್ಕೆ ಮೋದಿ ರೀತಿ ಬಹುಮತ ನೀಡಿದರೆ ಸಣ್ಣ ಪುಟ್ಟ ದೋಷಗಳು ದೂರವಾಗುತ್ತದೆ ಎಂದರು.

2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಬೇಕು ಎನ್ನುವುದು ಎಸ್‌ಡಿಪಿಐ ಅಜೆಂಡಾ ಅದಕ್ಕಾಗಿ ಭಯೋತ್ಪಾದನೆ, ತರಬೇತಿ ನಡೆಯುತ್ತಿದೆ. ಅವರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್‌ನಿಂದ ನೆಮ್ಮದಿ ಉಳಿಯಲು ಸಾಧ್ಯವಿಲ್ಲ. ಇನ್ನೆಷ್ಟು ಜನ ರಾಜು, ರುದ್ರೇಶ್, ಪ್ರಶಾಂತ್ ಪೂಜಾರಿ ಅಂತವರು ಹತ್ಯೆ ಆಗಬೇಕು ಎಂದು ಪ್ರಶ್ನಿಸಿದರು.

click me!