
ಸುರಪುರ(ಜ.22): ವಿಜಯಪುರ ಸೇರಿದಂತೆ ಕೆಲವು ಭಾಗಗಳಲ್ಲಿ ಮೈನಾರಿಟಿಯವರ ಮತವೇ ಬೇಡ ಎನ್ನುತ್ತಿದ್ದಾರೆ. ಅಲ್ಪ ಸಂಖ್ಯಾತರ ಸಭೆಯಂತ ರಾಜಕೀಯ ಜೀವಮಾನದಲ್ಲಿ ಮಾಡಿಲ್ಲ. ಅವರೆಲ್ಲರನ್ನು ಬೇರೆಯವರೆಂದು ಎಂದಿಗೂ ತಿಳಿದಿಲ್ಲ. ಬಿಜೆಪಿ ಮೈನಾರಿಟಿಯವರನ್ನು ಕಾಲಂತಕ ಮಾಡುವ ಅಪಾಯವಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್‌ನಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸುರಪುರ ಮತ್ತು ಹುಣಸಗಿ ವತಿಯಿಂದ ಅಲ್ಪ ಸಂಖ್ಯಾತ ಘಟಕದ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಮುಸ್ಲಿಮರ ಶಾಸಕರೊಬ್ಬರು ಇಲ್ಲ. ಅಲ್ಪ ಸಂಖ್ಯಾತರ ಮತವನ್ನು ರದ್ದು ಪಡಿಸುವ ತಂತ್ರ ನಡೆಯುತ್ತಿದೆ. ಇಂತಹ ಕುತಂತ್ರಗಳನ್ನು ಮಾಡದಿದ್ದರೆ ಕಳೆದ ಬಾರಿ ಸೋಲುತ್ತಿರಲಿಲ್ಲ.
Raichur: ಮೋದಿ ಕಾರ್ಯಕ್ರಮಕ್ಕೆ ನನ್ನ ಕರೆದಿಲ್ಲ; ಅದಕ್ಕೆ ನಾನು ಹೋಗಿಲ್ಲ: ಶ್ರೀರಾಮುಲು
ಕಾಂಗ್ರೆಸ್ ಸರಕಾರ ಕೊಟ್ಟಂತಹ ಯೋಜನೆ ಮತ್ತು ಭಾಗ್ಯಗಳನ್ನು ಸಂಪೂರ್ಣವಾಗಿ ನಿಲುಗಡೆ ಮಾಡಿದೆ. ಕಾಂಗ್ರೆಸ್ ಮೈನಾರಿಟಿ ಅಭಿವೃದ್ಧಿಗಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆದರೆ, ಬಿಜೆಪಿ ಮಸೀದಿ, ದೇವಾಸ್ಥಾನ, ಜನರ ಮಧ್ಯೆ ಗಲಾಟೆ ಮಾಡಿಸಿತು. ಬಿಜೆಪಿಗೆ ನಡುಕ ಶುರುವಾಗಿದೆ. ತಾಲೂಕಿನಲ್ಲಿ ಮಾಡಿರುವ ಬೋಗಸ್ ಬಿಲ್‌ಗಳ ಹಣವನ್ನೇ ಜನರಿಗೆ ನೀಡಲಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ. ಕೆ.ಜಬ್ಬಾರ್ ಮಾತನಾಡಿ, ಕಾಂಗ್ರೆಸ್ ದೇಶದ ಜನತೆಯ ಅಭಿವೃದ್ಧಿಗಾಗಿ 2300ಕ್ಕೂ ಹೆಚ್ಚು ಕಿ.ಮೀ. ಪಾದಯಾತ್ರೆ ನಡೆಸುವ ಮೂಲಕ ಬಿಜೆಪಿ ಜನರಿಗೆ ಮಾಡುತ್ತಿರುವ ಮೋಸಗಳನ್ನು ಮನದಟ್ಟು ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರಲಿದೆ. ಅದಕ್ಕೆ ಶೇ.100ರಷ್ಟುಅಲ್ಪ ಸಂಖ್ಯಾತರು ಕಾಂಗ್ರೆಸ್‌ಗೆ ಮತ ಚಲಾಯಿಸಬೇಕು ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಲಾಲ್ ಅಹ್ಮದ್, ಕಾರ್ಯದರ್ಶಿ ಮೊಹ್ಮದ್ ಸಿರಾಜ್, ವಕ್ ಜಿಲ್ಲಾಧ್ಯಕ್ಷ ಝಹೀರುದ್ದೀನ್ ಸಬೇರಾ, ಬ್ಲಾಕ್ ಕಾಂಗ್ರೆಸ್ ಸುರಪುರ ತಾಲೂಕಾಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಬ್ಲಾಕ್ ಕಾಂಗ್ರೆಸ್ ಹುಣಸಗಿ ತಾಲೂಕಾಧ್ಯಕ್ಷ ಮುದಿಗೌಡ ಕುಪ್ಪಿ, ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲ್ಲಾಪುರ, ಮಲ್ಲಣ್ಣ ಸಾಹು ಮುಧೋಳ, ವಿಠ್ಠಲ್ ಯಾದವ್, ವೆಂಕೋಬ್ ಸಾಹುಕಾರ, ಸಿರಾಜ್ ವಜಿ, ಅಬ್ದುಲ್ ಗಫೂರ್ ನಗುನೂರಿ, ಮೈಬೂಬ್ ಸಾಬ್ ಒಂಟಿ, ಅಬ್ದುಲ್ ಮಾಜಿದ್ ಸಾಬ್, ಅಬ್ದುಲ್ ಅಲಿಂ ಗೋಗಿ, ಅಹ್ಮದ್, ಪಟಾನ್, ನಾಸಿರ್ ಕುಂಡಾಲೆ, ಕಮ್ರದ್ದೀನ್, ಖಲೀದ್ ಅಹ್ಮದ್ ತಾಳಿಕೋಟಿ ಇತರರಿದ್ದರು. ಅಬ್ದುಲ್ ಅಲೀಂ ಗೋಗಿ ಮತ್ತು ದಾವೂದ್ ಪಠಾಣ್ ನಿರೂಪಿಸಿ, ವಂದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.