Assembly election: ಮದ್ದೂರಿನಿಂದ ಸ್ಪರ್ಧಿಸಲು ಬೇಡಿಕೆ ಬಂದಿದೆ: ಗುಟ್ಟು ಬಿಚ್ಚಿಟ್ಟ ಡಿಕೆ.ಶಿವಕುಮಾರ್

By Sathish Kumar KH  |  First Published Jan 22, 2023, 8:12 PM IST

ಬಿಜೆಪಿ ಧರ್ಮ ಮತ್ತು ಭಾವನೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಆದರೆ ನಮ್ಮದು ಹೊಟ್ಟೆಪಾಡಿನ ರಾಜಕಾರಣವಾಗಿದೆ. ನನಗೆ ಮದ್ದೂರಿನಿಂದಲೂ ಸ್ಪರ್ಧೆ ಮಾಡುವುದಕ್ಕೆ ಬೇಡಿಕೆ ಬಂದಿದ್ದು, ನಾನು ಆಗುವುದಿಲ್ಲವೆಂದು ಹೇಳಿಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. 


ಉಡುಪಿ (ಜ.22):  ಬಿಜೆಪಿ ಧರ್ಮ ಮತ್ತು ಭಾವನೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಆದರೆ ನಮ್ಮದು ಹೊಟ್ಟೆಪಾಡಿನ ರಾಜಕಾರಣವಾಗಿದೆ. ನನಗೆ ಮದ್ದೂರಿನಿಂದಲೂ ಸ್ಪರ್ಧೆ ಮಾಡುವುದಕ್ಕೆ ಬೇಡಿಕೆ ಬಂದಿದ್ದು, ನಾನು ಆಗುವುದಿಲ್ಲವೆಂದು ಹೇಳಿಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. 

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಕಷ್ಟದಲ್ಲಿದ್ದಾಗ, ರಾಜ್ಯಕ್ಕೆ ಕಳಂಕ ಬರುವ ಆರೋಪಗಳು ಬಂದಾಗ ನಿವಾರಣೆ ಮಾಡಲು ಮೋದಿ ಬರಲಿಲ್ಲ.ರಾಜ್ಯದಲ್ಲಿ ನಿರಂತರ ಮಳೆ ಸುರಿದು, ಅಪಾರ  ಹಾನಿಯಾದಾಗ ರಾಜ್ಯಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ, 25 ಜನ ಸಂಸದರನ್ನು, ಕರೆಸಿ ಒಂದು ದಿನವು ಸಭೆಯನ್ನು ಮಾಡಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರುವುದಿಲ್ಲ ಎಂದು ಖಾತರಿಗೊಂಡಿರುವುದರಿಂದ ರಾಜ್ಯಕ್ಕೆ ಪುನರಪಿ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

Latest Videos

undefined

News hour: ಜೆಡಿಎಸ್‌ ಭದ್ರಕೋಟೆಯಲ್ಲಿ ಕಾಂಗ್ರೆಸ್‌ ದಾಳ: ಕುಮಾರಸ್ವಾಮಿಗೆ ಚೆಕ್‌ ಇಟ್ಟ ಡಿಕೆಶಿವಕುಮಾರ್

ಮದ್ದೂರಿನಿಂದ ಸ್ಪರ್ಧಿಸಲು ಬೇಡಿಕೆ ಬಂದಿದೆ: ನನಗೆ ಮದ್ದೂರಿನಿಂದ ಸ್ಪರ್ಧಿಸುವಂತೆ ಅಲ್ಲಿನ ಕಾರ್ಯಕರ್ತರು ಕೇಳಿದ್ದಾರೆ. ಇದಕ್ಕೆ ನಾನು ಆಗುವುದಿಲ್ಲ ಎಂದು ಹೇಳಲ್ಲ. ಮಂಡ್ಯ, ಮದ್ದೂರಿನ ಕಾಂಗ್ರೆಸ್‌ ಮುಖಂಡರು ಬಂದು ನನ್ನ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಸದ್ಯ ನಾನು ಚರ್ಚೆಗೆ ಅವಕಾಶ ನೀಡಲ್ಲ. ಮಗಳು ಅಥವಾ ಅಳಿಯನ ಸ್ಪರ್ಧೆ ಬಗ್ಗೆ ಮಾತನಾಡಲು ನಿರಾಕರಿಸಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರ ಟಾರ್ಗೆಟ್ ಹಳೆ ಮೈಸೂರರು ಆಗಿದೆ. ಆದರೆ, ಬಿಜೆಪಿ ಮೊದಲು ಟಾರ್ಗೆಟ್ ಕನಕಪುರ ಮಾಡಲಿ ಎಂದು ತಾಕೀತು ಮಾಡಿದರು.

ಬಿಜೆಪಿ ಸರ್ಕಾರ ಬರುವುದಿಲ್ಲ ಎಂದು ವರದಿ: ಎಲ್ಲಾ ವರದಿಗಳು ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದಿಲ್ಲ ಅಂತ ಹೇಳಿವೆ, ನಮ್ಮ ಪಕ್ಷದ, ಆಂತರಿಕ, ಮಾಧ್ಯಮ ವರದಿಗಳು ಹೇಳಿವೆ. ಹೀಗಾಗಿ 65 ಸ್ಥಾನಕ್ಕಿಂತ ಹೆಚ್ಚು ಬಿಜೆಪಿ ಬರೋದಿಲ್ಲ. ಇದನ್ನು ಏನಾದರೂ ಪ್ಯಾಚ್ ಅಪ್ ಮಾಡೋದಕ್ಕೆ ಆಗುತ್ತದೆಯಾ ಎಂದು ನೋಡಲು ಬರುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಮೊದಲು ಅಮಿತ್ ಶಾ ಘೋಷಿಸಿದ್ದರು. ಈಗ ಬೊಮ್ಮಾಯಿ ಕೈ ಬಿಟ್ಟು ಮೋದಿ ಅವರ ಮುಖ ತೋರಿಸಲು ಹೊರಟಿದ್ದಾರೆ. ನಮ್ಮ ಕರ್ನಾಟಕಕ್ಕೆ ಮೋದಿ ಅವರ ಮುಖ ಯಾಕೆ ಬೇಕು. ಇಲ್ಲಿ ಆಡಳಿತ ಮಾಡುವವರ ಮುಖ ಮುಂದಿಟ್ಟು ಚುನಾವಣೆ ಎದುರಿಸಿ ಎಂದರು. 

ನಾನು ನಿಮ್ಮವನೆ ನನಗೂ ಒಂದು ಚಾನ್ಸ್ ಕೊಡಿ: ಡಿ.ಕೆ. ಶಿವಕುಮಾರ್

60 ದಿನವಷ್ಟೇ ಸರ್ಕಾರದ ಅಧಿಕಾರ: ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ. ಇನ್ನು 60 ದಿನ ಈ ಸರ್ಕಾರ ಇರುತ್ತೆ ಅಷ್ಟೇ. ಬಿಜೆಪಿ ಸರ್ಕಾರದ ಕೊನೆಯ ದಿನಗಳು ಬಂದಿವೆ. ಕೌಂಟ್ ಡೌನ್ ಶುರುವಾಗಿದೆ. ಫೆಬ್ರವರಿ 28ಕ್ಕೆ ಇವರದು ಕ್ಲೋಸ್ ಆಗುತ್ತದೆ. ಬಳಿಕ ಚುನಾವಣಾ ನೀತಿ ಸಂಹಿತೆ ಬರುತ್ತದೆ. 40 ದಿನದಲ್ಲಿ ಇವರು ಪ್ಯಾಕ್ ಮಾಡಿಕೊಂಡು ಹೋಗುತ್ತಾರೆ ಎಂದರು.

ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭಯೋತ್ಪಾದಕಿ: ಉಡುಪಿಯಲ್ಲಿ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭಯೋತ್ಪಾದಕಿ. ಆಕೆ ಶಿವಮೊಗ್ಗಕ್ಕೆ ಭೇಟಿಕೊಟ್ಟು ಹಿಂದೂಗಳು ತಮ್ಮ ಮನೆಗಳಲ್ಲಿ ತಲ್ವಾರ್ ಚಾಕು ಚೂರಿ ಆಯುಧ ಶಾರ್ಪ್ ಮಾಡಿಟ್ಟುಕೊಳ್ಳಲು ಹೇಳಿ, ಮಕ್ಕಳ ದಾರಿ ತಪ್ಪಿಸಿದ್ದಾಳೆ. ನಾನು ಆಕೆಯನ್ನು ಭಯೋತ್ಪಾದಕಿ ಎಂದು ಕರೆಯುತ್ತೇನೆ. ರಾಜ್ಯದಲ್ಲಿ ಅನೈತಿಕ ಸರ್ಕಾರ ಅಧಿಕಾರದಲ್ಲಿದೆ. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉಡುಪಿ, ದಕ್ಷಿಣ ಕನ್ನಡ 18 ನೇ ಸ್ಥಾನಕ್ಕೆ ಹೋಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಧೂಷಕನ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಇದಕ್ಕೆ ಉತ್ತರ ಕೊಡಬೇಕು. ಮುಖ್ಯಮಂತ್ರಿ ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿದ್ದು, ಪ್ರಧಾನಿ ಮೋದಿ ಪೊಲಿಟಿಕಲ್ ಟೂರಿಸಂ ಶುರು ಮಾಡಿದ್ದಾರೆ ಎಂದರು.

click me!