ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ವಿಜಯೇಂದ್ರ-ಡಿಕೆಶಿ ಗುಪ್ತ ಮಾತುಕತೆ..!

By Suvarna News  |  First Published Oct 15, 2021, 9:21 AM IST

*   ಬಿಜೆಪಿ ರಾಜಕೀಯ ಬೆಳವಣಿಗೆಗಳ ಮಧ್ಯೆ ಉಭಯ ನಾಯಕರ ಮಾತುಕತೆ 
*   ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್
*   ಕರ್ನಾಟಕದಲ್ಲೂ ಕಾಂಗ್ರೆಸ್ ಒಡೆದು ಮೂರು ಮನೆ ಆಗಲಿದೆ 


ಚಿತ್ರದುರ್ಗ(ಅ.15): ನಗರದ ಮುರುಘಾ ಮಠದಲ್ಲಿ(Murugha Matha) ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಅವರು ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಗುಪ್ತ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರ ಗುಪ್ತ ಮಾತುಕತೆ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.

ಮುರುಘಾ ಮಠದ ಅನುಭವ ಮಂಟಪದಲ್ಲಿ ಯುವಮೇಳ ಕಾರ್ಯಕ್ರಮದ ವೇದಿಕೆಯಲ್ಲಿ ಡಿಕೆಶಿ ಹಾಗೂ ವಿಜಯೇಂದ್ರ ಗಹನವಾದ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್(Congress) ಬಿಜೆಪಿ(BJP) ರಾಜಕೀಯ(Politics) ಬೆಳವಣಿಗೆಗಳ ಮಧ್ಯೆ ಇಬ್ಬರ ಮಾತುಕತೆ ಕುತೂಹಲ ಮೂಡಿಸಿದೆ. ಐಟಿ ರೇಡ್(IT Raid), ಡಿಕೆಶಿ ಲಂಚದ ಗಿರಾಕಿ ಎಂಬ ಚರ್ಚೆಗಳ ಬಳಿಕ ಇವರಿಬ್ಬರ ಚರ್ಚೆ ಭಾರೀ ಕುತೂಹಲ ಕೆರಳಿಸಿದೆ. ಮುರುಘಾ ಶರಣರು ಸೇರಿದಂತೆ ಹಲವು ಗಣ್ಯರ ನಡುವೆ ಇಬ್ಬರದೇ ಮಾತುಕತೆ ಜೋರಾಗಿತ್ತು ಎಂದು ತಿಳಿದು ಬಂದಿದೆ.

Latest Videos

undefined

ಕಾರ್ಯಕ್ರಮದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಿರಬಹುದು ನನ್ನ ಮಿತ್ರರೂ ಹೌದು. ವೇದಿಕೆಯಲ್ಲಿ ಸಹಜವಾಗಿ ಮಾತನಾಡಿದ್ದೇವೆ. ರಾಜಕೀಯವಾಗಿ ಚರ್ಚಿಸಿಲ್ಲ, ವೈಯಕ್ತಿಕವಾಗಿ ಮಾತಾಡಿದ್ದೇವೆ ಅಷ್ಟೇ ಅಂತ ತಿಳಿಸಿದ್ದಾರೆ. 

ಕಾಂಗ್ರೆಸ್‌ನವರೇ ಡಿಕೆಶಿ ಕಲೆಕ್ಷನ್‌ ಗಿರಾಕಿ ಅಂದ ಮೇಲೆ ನಮ್ಮ ವಿಶ್ಲೇಷಣೇ ಏನಿದೆ?: ಸಚಿವ ಅಶ್ವತ್ಥ್‌

ಗುತ್ತಿಗೆದಾರರ ಮೇಲೆ ಐಟಿ ದಾಳಿಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೂ(BS Yediyurappa) ಯಾವುದೇ ಸಂಬಂಧವಿಲ್ಲ. ಬಸವರಾಜ ಬೊಮ್ಮಾಯಿ(Basavaraj Bommai) ಸಿಎಂ ಆದ ಬಳಿಕ ರಾಜ್ಯ ಸುತ್ತಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದಾರೆ. ಇದನ್ನೆಲ್ಲ ರಾಜ್ಯದ(Karnataka) ಜನತೆ ಗಮನಿಸುತ್ತಿದ್ದಾರೆ. ರಾಜ್ಯದಲ್ಲಿನ ಇತ್ತೀಚೆಗೆ ನಡೆದ ಮೂರು ಮಹಾನಗರ ಪಾಲಿಕೆ ಚುನಾವಣೆಗಳಲ್ಲೂ(Election) ಬಿಜೆಪಿ ಮತದಾರ ಪ್ರಭು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಸಿಂದಗಿ(Sindagi) ಹಾಗೂ ಹಾನಗಲ್‌(Hanagal) ಉಪಚುನಾವಣೆಯಲ್ಲಿ(Byelection) ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನ ಬಿ.ವೈ. ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ. 

ಈ ಮಧ್ಯೆ ಕಾಂಗ್ರೆಸ್ ಪಕ್ಷ‌ ತಿರುಕನ ಕನಸು ಕಾಣುತ್ತಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ದೇಶದ ಕೆಲವು ರಾಜ್ಯಗಳಲ್ಲಿ ಮಾತ್ರ ಅವಶೇಷದ ರೂಪದಲ್ಲಿ ಮಾತ್ರ ಉಳಿದಿದೆ. ಕಾಂಗ್ರೆಸ್ ಏನೇ ಬೊಬ್ಬೆ ಹೊಡೆದರೂ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಪಕ್ಕಾ ಆಗಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಬೇಗುದಿ ಮಟ್ಟ ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕಾಂಗ್ರೆಸ್ ಪಕ್ಷ ಮುಗಿಸಲು ವಿಪಕ್ಷಗಳೇ ಬೇಕಿಲ್ಲ. ಪಂಜಾಬ್‌ನಲ್ಲಿ ಕಾಂಗ್ರೆಸ್ ಒಡೆದು ಹೋಳಾಗುತ್ತಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಒಡೆದು ಮೂರು ಮನೆ ಆಗಲಿದೆ ಅಂತ ಹೇಳಿದ್ದಾರೆ. 

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ ಅವರು, ಅವರ ಹೇಳಿಕೆಯಲ್ಲಿ ಹುರುಳಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಿದ್ದರಾಮಯ್ಯ(Siddaramaiah) ಭೇಟಿ ವಿಚಾರ ಸುಳ್ಳು ಆಗಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಚ್‌ಡಿಕೆಯಿಂದ ರಾಜಕೀಯ‌ ಪ್ರೇರಿತ ಹೇಳಿಕೆಯಾಗಿದೆ ಎಂದು ಹೇಳಿದ್ದಾರೆ. 
 

click me!