ಎಲೆಕ್ಷನ್ ಬಂದಾಗ ಮಾತ್ರ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ: HDK ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌

By Suvarna News  |  First Published Oct 17, 2021, 1:57 PM IST

*   ಬಿಜೆಪಿ ಅನಾಚಾರದ ಬಗ್ಗೆ ಕುಮಾರಸ್ವಾಮಿ ಯಾಕೆ ಪ್ರಶ್ನೆ ಮಾಡಲ್ಲ?
*   ಬಿಜೆಪಿ ಆಡಳಿತದ ವಿರುದ್ಧ ಜೆಡಿಎಸ್‌ನಿಂದ ಒಂದೇ ಒಂದು ಹೋರಾಟ ಇಲ್ಲ
*   ರಾಜ್ಯದಲ್ಲಿ ಉತ್ತಮ ಆಡಳಿತ ಕೊಟ್ಟ ಸಿದ್ದರಾಮಯ್ಯ 
 


ಹುಬ್ಬಳ್ಳಿ(ಅ.17):  ಯಾವುದೇ ವ್ಯಕ್ತಿ ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಎಲ್ಲರೂ ಗಮನಿಸುತ್ತಿರುತ್ತಾರೆ. ಬಾಯಿಗೆ ಬಂದಂಗೆ ಮಾತನಾಡಬಾರದು. ಸಿದ್ದರಾಮಯ್ಯ(Siddaramaiah) ಎಲ್ಲ ವರ್ಗದವರ ಜೊತೆ ಸಂಪರ್ಕದಲ್ಲಿರುತ್ತಾರೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಬಜೆಟ್‌ನಲ್ಲಿ 1,1000 ಕೋಟಿ ಮಾತ್ರ ಕೊಟ್ಟಿದ್ದರು. ಈಗ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಕೇವಲ ರಾಜಕಾರಣ ಮಾಡ್ತಾ ಇದ್ದಾರೆ ಅಂತ ಕಾಂಗ್ರೆಸ್‌ ನಾಯಕ ನಾಜೀರ್ ಅಹ್ಮದ್ ಎಚ್‌ಡಿಕೆ ವಿರುದ್ಧ ಕಿಡಿಕಾರಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಜಿ ಸಚಿವ ಯು.ಟಿ. ಖಾದರ್‌(UT Khader), ಶಾಸಕ ರಿಜ್ವಾನ್ ಅರ್ಷಾದ್(Rizwan Arshad), ವಿಧಾನ ಪರಿಷತ್ ಸದಸ್ಯ ನಾಜೀರ್ ಅಹ್ಮದ್(Nazir Ahmed) ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

Latest Videos

undefined

ಈ ವೇಳೆ ಮಾತನಾಡಿದ ನಾಜೀರ್ ಅಹ್ಮದ್, ಸಿದ್ದರಾಮಯ್ಯ ಸಾಕಷ್ಟು ಜನರನ್ನ ಎಂಎಲ್‌ಸಿ ಮಾಡಿದ್ದಾರೆ. ಅಲ್ಪಸಂಖ್ಯಾತರ ನಾಯಕರನ್ನ ಎಂಎಲ್‌ಸಿ ಮಾಡಿದ್ದಾರೆ. ಕುಮಾರಸ್ವಾಮಿ ಅವರೇ ನಿವೇನ್ ಮಾಡಿದ್ದೀರಿ. ಅಲ್ಪಸಂಖ್ಯಾತರ(Minorities) ನಾಯಕರು ಸಿದ್ದರಾಮಯ್ಯ ಜೊತೆ ಇದ್ದಾರೆ. ಕೇವಲ ಬೆಳಿಗ್ಗೆ ಎದ್ದು ಸಿದ್ದರಾಮಯ್ಯ ವಿರುದ್ಧ  ಮಾತನಾಡುತ್ತೀರಿ, ಕುಮಾರಸ್ವಾಮಿ ಬಿಜೆಪಿ(BJP) ಜೊತೆ ಒಳ ಒಪ್ಪಂದವನ್ನ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಬರೀ ಕುತಂತ್ರ ಕಲಸವನ್ನ ಮಾಡುತ್ತಿದ್ದಾರೆ. ಬಸವ ಕಲ್ಯಾಣದಲ್ಲಿ ನಮ್ಮ‌ ಅಭ್ಯರ್ಥಿಯನ್ನ ಸೋಲಿಸಲೂ ಜೆಡಿಎಸ್(JDS) ಅಭ್ಯರ್ಥಿ ಯನ್ನ ಹಾಕಿದ್ರಿಮ ನೀವು ಸಿಎಂ ಆದಾಗ ಏನೇನು ಮಾಡಿದ್ರಿ ಅಂತ ಎಲ್ಲವೂ ಗೊತ್ತಿದೆ ಅಂತ ಎಚ್‌ಡಿಕೆ ವಿರುದ್ಧ  ನಾಜೀರ್ ಅಹ್ಮದ ಹರಿಹಾಯ್ದಿದ್ದಾರೆ. 

ಮುಸ್ಲಿಂ ನಾಯಕರನ್ನ ಮುಗಿಸಿದ್ದೇ ಸಿದ್ದರಾಮಯ್ಯ: ಸಿದ್ದು ವಿರುದ್ಧ HDK ವಾಗ್ದಾಳಿ

ರಾಜ್ಯದಲ್ಲಿ ಉತ್ತಮ ಆಡಳಿತ ಕೊಟ್ಟ ಸಿದ್ದರಾಮಯ್ಯ 

ಯು.ಟಿ. ಖಾದರ್ ಮಾತನಾಡಿ, ಅಂಬೇಡ್ಕರ್(BR Ambedkar) ಕೊಟ್ಟ ಸಂವಿಧಾನದ(Constitution) ಅನುಗುಣವಾಗಿ ಸಿದ್ದರಾಮಯ್ಯ ನಡೆದುಕೊಂಡಿದ್ದಾರೆ. 2013 ರಿಂದ 18 ರ ವರೆಗೆ ಸಿದ್ದರಾಮಯ್ಯ ರಾಜ್ಯದಲ್ಲಿ ಉತ್ತಮ ಆಡಳಿತ ಕೊಟ್ಟಿದ್ದಾರೆ. ನಾವು ಎಲ್ಲ ರೀತಿಯ ಚರ್ಚೆಗೆ ಸಿದ್ದರಿದ್ದೇವೆ. ಇಲ್ಲ ಸಲ್ಲದ ಆರೋಪವನ್ನ ಯಾವ ಪಕ್ಷವೂ ಸಹಿಸೋದಿಲ್ಲ. ಕಾಂಗ್ರೆಸ್(Congress) ಯಾವ ವರ್ಗವನ್ನೂ ಕಡೆಗಣಿಸಿಲ್ಲ. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನ ಕಾಂಗ್ರೆಸ್ ಆಡಳಿತದಲ್ಲಿ ಜಾರಿಗೆ ತಂದಿದೆ. ಬಿಜೆಪಿ ಯವರಿಗೆ ಕುಮಾರಸ್ವಾಮಿ ಯಾಕೆ ಪ್ರಶ್ನೆ ಮಾಡ್ತಿಲ್ಲ? ಅಂತ ನೇರವಾಗಿ ಮಾಜಿ ಸಿಎಂ ಕುಮಾರಸ್ವಾಮಿಗೆ ಖಾದರ್ ಟಾಂಗ್ ಕೊಟ್ಟಿದ್ದಾರೆ. 

ಎಸ್‌ಸಿ,ಎಸ್‌ಟಿ ಅವರಿಗೆ ಕಾನೂನನ್ನ ಮಾಡಿಕೊಂಡು ಮೀಸಲಾತಿಯನ್ನ ಮಾಡಿದ್ದು ಕಾಂಗ್ರೆಸ್ ಸರ್ಕಾರವಾಗಿದೆ. ಬಸವ ಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ(Anubhav Mantap) ಚಾಲನೆ ಕೊಟ್ಟಿದ್ದು ಸಿದ್ದರಾಮಯ್ಯ, ಕೆಂಪೇಗೌಡ ಜಯಂತಿ, ಅದ್ಯಯನ ಪೀಠಗಳು, ಅನುದಾನವನ್ನ ಕೊಟ್ಡಿದ್ದೇ ಕಾಂಗ್ರೆಸ್‌ ಸರ್ಕಾರವಾಗಿದೆ. ಕುಮಾರಸ್ವಾಮಿ ಕೇವಲ ಕಾಂಗ್ರೆಸ್‌ಗೆ ಪ್ರಶ್ನೆ ಮಾಡ್ತಾರೆ. ಬಿಜೆಪಿ ಅವರಿಗೆ ಪ್ರಶ್ನೆ ಮಾಡಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಖಾದರ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

ಅಲ್ಪಸಂಖ್ಯಾತರಿಗೆ ನೀವೇನೂ ಅನುದಾನ ಕೊಟ್ಟಿದ್ದೀರಿ?

ಅಲ್ಪಸಂಖ್ಯಾತರಿಗೆ ನೀವೇನೂ ಅನುದಾನ ಕೊಟ್ಟಿದ್ದೀರಿ ಎಂದು ಎಚ್‌ಡಿಕೆಗೆ ಟಾಂಗ್ ಕೊಟ್ಡ ಖಾದರ್, ಬಿಜೆಪಿ ಸರ್ಕಾರದ ಬಗ್ಗೆ ಯಾಕೆ ಕುಮಾರಸ್ವಾಮಿ ಪ್ರಶ್ನೆ ಮಾಡಲ್ಲ?. ಕೇವಲ ಚುಣಾವಣೆಯ ಸಂದರ್ಭದಲ್ಲಿ ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಾರೆ. ನೀವು ಅಧಿಕಾರದಲ್ಲಿದ್ದಾಗ ಯಾವ ವರ್ಗಕ್ಕೆ ಯಾವ ಯೋಜನೆಗಳನ್ನ ಕೊಟ್ಟಿದ್ದೀರಿ ಹೇಳಿ ನೋಡೋಣ. ಬಿಜೆಪಿ ಬಂದ ನಂತರ ಎಲ್ಲ ಅನುದಾನ ಕಟ್ಟಾಗಿದೆ. ಜನ ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಧರ್ಮದ(Religion) ಜೊತೆ ಮತ್ತು ಜನಾಂಗದ ಜೊತೆ ಸಿದ್ದರಾಮಯ್ಯ ಇದ್ದಾರೆ. ಕುಮಾರಸ್ವಾಮಿ ಸಿಎಂ ಆದಾಗ ಏನೆಲ್ಲ ಯೋಜನೆಗಳನ್ನ ತಂದ್ದದ್ದೀರಿ ಅಂತ ಬಹಿರಂಗ ಪಡಿಸಿ ಎಚ್‌ಡಿಕೆಗೆ ಖಾದರ್‌ ಸವಾಲು ಹಾಕಿದ್ದಾರೆ. 
ಸಮಾಜದಲ್ಲಿ ಜನರ ಮನಸ್ಸನ್ನ ಒಡೆಯುವ ಕೆಲಸ ಮಾಡಬೇಡಿ. ಕಾಂಗ್ರೆಸ್ ಪಕ್ಷದ ಬಗ್ಗೆ ಯಾರು ಇಲ್ಲ ಸಲ್ಲದ ಆರೋಪಗಳ‌ನ್ನ ಮಾಡಬೇಡಿ. ಪ್ರತಿಪಕ್ಷ ಆಡಳಿತ ಪಕ್ಷಕ್ಕೆ ಪ್ರಶ್ನೆ ಮಾಡೋದನ್ನ ಬಿಟ್ಟು ಪ್ರತಿ ಪಕ್ಷ ಪ್ರತಿಕ್ಷವನ್ನ ಪ್ರಶ್ನೆ ಮಾಡೋದು ಅಂದ್ರೆ ನಮ್ಮ ರಾಜ್ಯದಲ್ಲಿ(Karnataka) ಮಾತ್ರ ಅಂತ ಯು.ಟಿ.ಖಾದರ್‌ ಬೇಸರ ವ್ಯಕ್ತಪಡಿಸಿದ್ದಾರೆ. 

ಟಿಪ್ಪು ಜಯಂತಿ ಅಂದೇ ವಿರೋಧಿಸಿದ್ದೆ, ಸಿದ್ದುಗ್ಗೆ ಗುದ್ದಿದ ಸಿಎಂ ಇಬ್ರಾಹಿಂ!

ಬೈಎಲೆಕ್ಷನ್ ಬಂದಾಗ ಮಾತ್ರ ಅಲ್ಪಸಂಖ್ಯಾತರ ಬಗ್ಗೆ ಎಚ್‌ಡಿಕೆಗೆ ತುಂಬಾ ಕಾಳಜಿ 

ಶಾಸಕ ರಿಜ್ವಾನ್‌ ಅರ್ಷದ್ ಮಾತನಾಡಿ, 20 ವರ್ಷದಲ್ಲಿ ಕುಮಾರಸ್ವಾಮಿ ರಾಜಕಾರಣದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲ. ಬೈಎಲೆಕ್ಷನ್(Byelection) ಬಂದಾಗ ಮಾತ್ರ ಅಲ್ಪಸಂಖ್ಯಾತರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಇವತ್ತು ಅಲ್ಪಸಂಖ್ಯಾತರ ಬಗ್ಗೆ ಮಾತನಾಡೋದು ಒಳ್ಳೆಯದು. ಸಿದ್ದರಾಮಯ್ಯ ಅವರನ್ನ ಟಾರ್ಗೆಟ್ ಮಾಡಿ ಮಾತನಾಡೋದು ಸರಿ ಅಲ್ಲ ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ನಾನು ಕುಮಾರಸ್ವಾಮಿಗೆ ಹೇಳುತ್ತೇನೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಿಲ್ಲ ಅಂತ ಅನ್ಕೋಬೇಡಿ. ನೀವೇ ಸಿಎಂ ಆದಾಗ ನಿಮ್ಮ ಜೆಡಿಎಸ್ ಪಕ್ಷದಿಂದ ಯಾರನ್ನೂ ಮಂತ್ರಿಗಳನ್ನ ಮಾಡಿಲ್ಲ. ಕಾಂಗ್ರೆಸ್ ಪಕ್ಷ ನಿಮ್ಮ ಥರ ನಡೆದುಕೊಂಡಿಲ್ಲ, ಎಲ್ಲರನ್ನೂ ಬೆಳಸಿದೆ. ಜೆಡಿಎಸ್ ಪಕ್ಷದಿಂದ ಯಾವುದೇ ಹೋರಾಟಗಳಿಲ್ಲ ಬಿಜೆಪಿ ವಿರುದ್ಧ, ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. ನಿಮ್ಮ ಪಕ್ಷದಿಂದ ಒಂದೇ ಒಂದು ಹೋರಾಟ ಮಾಡುತ್ತಿಲ್ಲ. ಕುಮಾರಸ್ವಾಮಿ ಬಡವರ ಪರ ಇಲ್ಲ ಅಂತ ಟೀಕಿಸಿದ್ದಾರೆ. 

ಬಿಜೆಪಿ ಆಡಳಿತದ ವಿರುದ್ಧ ಜೆಡಿಎಸ್‌ನಿಂದ ಒಂದೇ ಒಂದು ಹೋರಾಟ ಇಲ್ಲ

ರಾಜ್ಯ, ಕೇಂದ್ರ ಬಿಜೆಪಿ ಆಡಳಿತದ ವಿರುದ್ಧ ಜೆಡಿಎಸ್‌ನಿಂದ ಒಂದೇ ಒಂದು ಹೋರಾಟ ಇಲ್ಲ. ನಿಮಗೆ ಏನಂತ ನಾವೂ ತಿಳಕೋಬೇಕು. ಬಿಜೆಪಿ ಅಲೈನ್ಸ್ ಪಕ್ಷ ಅಂತ ತಿಳಕೋಬೇಕಾ?. ನಾವು ಹೋರಾಟ ಮಾಡೇ ಮಾಡುತ್ತೇವೆ. ಸಿದ್ದರಾಮಯ್ಯ ಜೊತೆ ವೈಯಕ್ತಿಕ ದ್ವೇಷ ಇದ್ರೆ ಮಾಡಿಕೊಳ್ಳಿ, ಆದರೆ ಅಲ್ಪಸಂಖ್ಯಾತರ ವಿರುದ್ಧ ಮಾತನಾಡಬೇಡಿ ಎಂದು ಕುಮಾರಸ್ವಾಮಿಗೆ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ. 

ಉಪಚುನಾವಣೆಯ ಬಗ್ಗೆ ಮಾತನಾಡಿದ ರಿಜ್ವಾನ್‌ ಅರ್ಷದ್, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಕೇವಲ ಅಲ್ಪಸಂಖ್ಯಾತರ ಮತಗಳನ್ನ ಟರ್ನ್‌ ಮಾಡಲಿಕ್ಕೆ ಕುಮಾರಸ್ವಾಮಿ ಈ ರೀತಿ ಮಾಡುತ್ತಿದ್ದಾರೆ. ಸಿಎಂ ಇಬ್ರಾಹಿಂ  ಮಾತನಾಡಿದ್ದು ಕುಮಾರಸ್ವಾಮಿ ಮಾತನಾಡಿದಕ್ಕೂ ವ್ಯತ್ಯಾಸವಿದೆ. ಕುಮಾರಸ್ವಾಮಿ ಸಿಎಂ ಆದವರು ಹೀಗೆಲ್ಲ ಮಾತನಾಡಬಾರದು. ಈಗಿನ ಬಿಜೆಪಿ ಅನಾಚಾರದ ಬಗ್ಗೆ ಕುಮಾರಸ್ವಾಮಿ ಯಾಕೆ ಪ್ರಶ್ನೆ ಮಾಡಲ್ಲ. ಸಿಎಂ ಇಬ್ರಾಹಿಂ ಟಿಪ್ಪು ಜಯಂತಿ ಬಗ್ಗೆ ಮಾತನಾಡಿದರ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಮಾತನಾಡುತ್ತದೆ. ಸಿಎಂ ಇಬ್ರಾಹಿಂ(CM Ibrahim) ಅವರಿಗೆ ಜ್ಞಾನ ಇರಲಿಲ್ಲವೇನೋ?. ಟಿಪ್ಪು ಜಯಂತಿ(Tipu Jayanti) ಎಷ್ಟೋ ವರ್ಷಗಳಿಂದ ಆಚರಣೆ ಮಾಡುತ್ತಿದೆ ಅನ್ನೋದು ಗೊತ್ತಿರಲಿಲ್ಲವೇನೂ. ಪ್ರತಿಪಕ್ಷದಲ್ಲಿ ಇದ್ದು ಕ್ಕೊಂಡು ನೀವೇನೂ ಮಾಡ್ತಾ ಇದಿರಿ ಎಂದು ಕುಮಾರಸ್ವಾಮಿಗೆ ಕಾಂಗ್ರೆಸ್ ನಾಯಕರು ಟಾಂಗ್ ಕೊಟ್ಟಿದ್ದಾರೆ.
 

click me!