ಮೈಸೂರು (ಅ.17): ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧ ಕಾಂಗ್ರೆಸ್ (Congress) ನಾಯಕರು ಗುಸು ಗುಸು ಮಾತನಾಡುತ್ತಿರುವುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ (Siddaramaiah) ವ್ಯವಸ್ಥಿತವಾದ ಷಡ್ಯಂತ್ರ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಆರೋಪಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರ ಮುಂದೆಯೇ ಸಲೀಂ-ಉಗ್ರಪ್ಪ (Saleem Ugrappa) ಮಾತಾಡಿದ್ದಾರೆ. ಡಿಕೆಶಿಯವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದು.
ಸಲೀಂ ಅವರು ಈಗಿರುವ ಸ್ಥಾನಕ್ಕೆ ಡಿಕೆಶಿ ಕಾರಣ. ಉಗ್ರಪ್ಪನವರು ಚುನಾವಣೆ (Election) ಗೆಲ್ಲುತ್ತಾರಾ ಎನ್ನುವುದು ಜನರಿಗೆ ಗೊತ್ತಿದೆ. ಉಗ್ರಪ್ಪರನ್ನು ಸಂಸದರನ್ನಾಗಿ ಮಾಡಿದ್ದು ಡಿಕೆಶಿಯವರು ಎಂದರು.
ಡಿಕೆಶಿ ಮೇಲಿನ ಕಮಿಷನ್ ಮಾತು... ಪ್ರತಿಕ್ರಿಯೆ ಕೊಡದೆ ಜಾರಿಕೊಳ್ಳುತ್ತಿರುವ ಸಿದ್ದು!
ಆದರೆ, ಇಷ್ಟೆಲ್ಲಾ ಇದ್ದರೂ ಡಿಕೆಶಿ ಅವರನ್ನೇ ಟಾರ್ಗೆಟ್ ಮಾಡಲಾಗಿದೆ. ಇದಕ್ಕೆ ನೇರವಾದ ಕಾರಣವೇ ಸಿದ್ದರಾಮಯ್ಯ ಅವರು. ರಾಷ್ಟ್ರ ರಾಜಕಾರಣಕ್ಕೆ (National Politics) ಸಿದ್ದರಾಮಯ್ಯಗೆ ಬನ್ನಿ ಎಂದು ಹೈಕಮಾಂಡ್ ಹೇಳಿದೆ. ಇದರಿಂದ ಎಲ್ಲಿ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕೆಂದು ಈ ರೀತಿ ಡಿಕೆಶಿ ಮೇಲೆ ಸಿದ್ದರಾಮಯ್ಯ ಷಡ್ಯಂತ್ರ ಮಾಡಿದ್ದಾರೆ ಎಂದು ದೂರಿದರು.
ಇದು ಸಂಪೂರ್ಣ ಸಿದ್ದರಾಮಯ್ಯ ಅವರಿಂದಲೇ ನಡೆದಿರುವ ಷಡ್ಯಂತ್ರ ಎಂದು ದೂರಿದರು.
ಸ್ವಪಕ್ಷ ನಾಯಕರನ್ನು ಮುಗಿಸಿದ್ದೆ ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರ ಬಗ್ಗೆ ‘ಕಮಿಷನ್ ಹಾಗೂ ಪರ್ಸೆಂಟೇಜ್ ಗಿರಾಕಿ’ ಎಂಬ ಹೇಳಿಕೆ ನೀಡಿರುವ ಸಲೀಂ ಮತ್ತು ಉಗ್ರಪ್ಪ ಅವರ ನಡುವಿನ ವಿಡಿಯೋ ಸಂಭಾಷಣೆ ವೈರಲ್ ಆಗಿದೆ. ಇದು ರಾಜಕೀಯ ಸಂಚಲನ ಉಂಟು ಮಾಡಿದೆ.
ಬೈ ಎಲೆಕ್ಷನ್ ಗೆಲ್ಲಲು ಬಿಜೆಪಿ ಜಾತಿ ಲೆಕ್ಕಾಚಾರ: ಸಚಿವರಿಗೆ ಸ್ಪೆಷಲ್ ಟಾಸ್ಕ್ ಕೊಟ್ಟ ಸಿಎಂ
ಈ ವಿಚಾರವಾಗಿ ಸಿದ್ದರಾಮಯ್ಯಗೆ (Siddaramaiah) ಎಚ್‌ಡಿಕೆ (HDKumaraswamy) ಗುದ್ದು ನೀಡಿದ್ದಾರೆ. 'ಆಡಿಯೋ ನೆಪದಲ್ಲಿ ಸಲೀಂ ಮೊಹಮ್ಮದ್ ಬಲಿ ಪಡೆದಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ದೊಡ್ಡವರ ರಕ್ಷಣೆ ಮಾಡಲಾಗಿದೆ. ಸಲೀಂ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ರಸಸ್ವಾದ ಮಾಡಿ. ಪುಕ್ಕಟೆ ಮನರಂಜನೆ ಪಡೆದು ವ್ಯಕ್ತಿಗೆ ರಕ್ಷಣೆ ನೀಡಿದ್ದೀರಿ. ಅಲ್ಪ ಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ ಸಿದ್ದಹಸ್ತರೇ, ನಿಮಗೆ ಪಾಠ ಕಲಿಸುವ ಜನತಾ ಪರ್ವ ಆರಂಬವಾಗಲಿದೆ, ಕಾದು ನೋಡಿ ಎಂದು ಟೀಕಿಸಿದ್ದಾರೆ