
ದಾವಣಗೆರೆ, (ಅ.16): ಆರ್‌ಎಸ್ಎಸ್ (RSS)ಬಗ್ಗೆ ಮಾತಾಡೋರು ಸರ್ವನಾಶ ಆಗುತ್ತೀರಿ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಎಚ್ಚರಿಕೆ ಕೊಟ್ಟಿದ್ದಾರೆ.
ದಾವಣಗೆರೆಯಲ್ಲಿ (Davanagere) ಇಂದು (ಅ.16) ಮಾಧ್ಯಮಗಳೊಂದಿಗೆ ಮಾತಾಡಿದ ರೇಣುಕಾಚಾರ್ಯ, ಆರ್‌ಎಸ್ಎಸ್ ಬಗ್ಗೆ ಮಾತಾಡುವ ನೀವು ಮಾನಸಿಕ ಅಸ್ವಸ್ಥರು. ಹೀಗಾಗಿಯೇ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದೀರಿ. ಇನ್ನು ಮುಂದೆಯಾದರೂ ಹೀಗೆ ಮಾತಾಡೋದು ಬಿಡಿ ಎಂದು ಮಾಜಿ ಸಿಎಂ ಎಚ್‌ಡಿಕ ಕುಮಾರಸ್ವಾಮಿಗೆ IHD Kumaraswamy) ತಿರುಗೇಟು ನೀಡಿದರು.
ಸಿಂಡಿಕೇಟ್‌ನಲ್ಲಿ RSSನವರಿಂದ ಲೂಟಿ: ಎಚ್‌ಡಿಕೆ ಆರೋಪಕ್ಕೆ ಅಶೋಕ್ ತಿರುಗೇಟು
ಆರ್‌ಎಸ್ಎಸ್ ದೇಶಕ್ಕಾಗಿ ಪ್ರಾಣ ಕೊಟ್ಟವರು. ಆರ್ಎಸ್ಎಸ್ಗೆ ಅಲ್ಲದೇ ಭಯೋತ್ಪಾದಕರಿಗೆ ಸ್ಥಾನ ನೀಡಬೇಕೆ. ಆರ್‌ಎಸ್ಎಸ್ ಬಗ್ಗೆ ಮಾತಾಡುವ ನೀವು ಮಾನಸಿಕ ಅಸ್ವಸ್ಥರು. ಹೀಗಾಗಿಯೇ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದೀರ ಟಾಂಗ್ ಕೊಟ್ಟರು.
ಇನ್ನು ಇದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿಗೆ ಆರ್ಎಸ್ಎಸ್ನ ಗಂಧ ಗಾಳಿಯು ಗೊತ್ತಿಲ್ಲ. ಆರ್‌ಎಸ್ಎಸ್ ವಿರುದ್ಧ ಮಾತಾಡೋದು ಶೋಭೆ ತರುವಂತಹದ್ದಲ್ಲ. ಯಾವುದೇ ಪುಸ್ತಕ ಓದಿ ಹೀಗೆ ಮಾತಾಡೋದಲ್ಲ. ಅವರು ಓದಿದ ಪುಸ್ತಕ ಬರೆದೋರು ಯಾರು? ಒಂದು ಪುಸ್ತಕ ಓದಿದ್ರೆ ಆರ್‌ಎಸ್ಎಸ್ ಬಗ್ಗೆ ಗೊತ್ತಾಗಲ್ಲ ಎಂದು ಕಿಡಿಕಾರಿದರು.
ರಾಜ್ಯ ಉಪಚುನಾವಣೆ (By Elections) ಸಮೀಪಿಸುತ್ತಿರುವ ಹೊತ್ತಲ್ಲೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರ್‌ಎಸ್ಎಸ್ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ವಿಶ್ವವಿದ್ಯಾಯಲಗಳಲ್ಲಿ ಆರ್‌ಎಸ್‌ಎಸ್‌ನವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದ್ದು, ಅವರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.