ಕಲಬುರಗಿ: ಕಾಂಗ್ರೆಸ್‌ ತೊರೆದು ಹಲವರು ಬಿಜೆಪಿ ಸೇರ್ಪಡೆ

By Kannadaprabha News  |  First Published Jan 21, 2023, 10:30 PM IST

ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷವನ್ನು ತೊರೆದು ಶಾಸಕ ಸುಭಾಷ್‌ ಗುತ್ತೇದಾರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.


ಆಳಂದ(ಜ.21):  ಹೀರೋಳಿ ಗ್ರಾಮದ ಅನೇಕ ಜನ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷವನ್ನು ತೊರೆದು ಶಾಸಕ ಸುಭಾಷ್‌ ಗುತ್ತೇದಾರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಹೀರೋಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸೋಮಲಿಂಗ ಕವಲಗಿ, ಶಿವಲಿಂಗಪ್ಪ ಗುಡ್ಡದ, ಗಜಾನಂದ ಕವಲಗಿ, ಶರಣಬಸಪ್ಪ ವಾಡೇದ, ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಅಪ್ಪಾಶಾ (ಶಿವಶರಣಪ್ಪ ಮಾಳಿ), ರಾಮಚಂದ್ರ ಮಾಳಿ, ರಾಚಯ್ಯ ಸ್ವಾಮಿ, ಹಣಮಂತ ಸರಸಂಬಿ, ಶರಣಬಸಪ್ಪ ರಾಯಿನುರೆ, ಸೋಮನಾಥ ತೊರಣಗಿ, ಸಿದ್ದರಾಮ ವಾಡೆದ, ಸೋಮನಾಥ ದಿಂಡುರಗಿ, ಸೋಮಲಿಂಗ ತೋರಣಗಿ, ಮಲ್ಲಯ್ಯ ತೀರ್ಥ, ಶ್ರೀಶೈಲ ಪರಿಟ, ಸೋಮನಾಥ ಕಾಮನಳ್ಳಿ , ಚಂದ್ರಶ್ಯಾ ಸುತಾರ, ರಾಮಣ್ಣ ಮಣ್ಣೆ, ವಾಗೇಶ ಹಣಮಶೆಟ್ಟಿ, ಶಾಂತಕುಮಾರ ಮಣ್ಣೇ, ನಾಗೇಶ ಚಿಣಮಗೆರಿ, ದಿಗಂಬರ ಭಿಮಗೊಳ, ಕಲ್ಯಾಣಿ ವಾಡೆದ, ಶಿವರಾಜ ವಾಡೆದ ಮತ್ತು ಪಂಡಿತ ವಾಡೆದ ಇವರು ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

Tap to resize

Latest Videos

ನಾನು ದಿಲ್ಲಿಯಲ್ಲಿರುವ ನಿಮ್ಮ ಮಗ: ಪ್ರಧಾನಿ ನರೇಂದ್ರ ಮೋದಿ

ಸೇರ್ಪಡೆಯಾದ ಮುಖಂಡರನ್ನು ಶಾಸಕ ಸುಭಾಷ್‌ ಆರ್‌ ಗುತ್ತೇದಾರ ಪಕ್ಷದ ಬಾವುಟ, ಶಾಲು ನೀಡಿ ಸ್ವಾಗತಿಸಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಸಹಕಾರಿ ಧುರೀಣ ಮಹಾಂತಪ್ಪ ಆಲೂರೆ, ಚೆನ್ನು ಪಾಟೀಲ, ಶಿವಪುತ್ರಪ್ಪ ಚಲಗೆರಿ, ಶರಣಬಸಪ್ಪ ಡುಮ್ಮಾ, ಮಲ್ಲಿನಾಥ ಮಾನಾಜಿ, ಗ್ರಾಪಂ ಸದಸ್ಯ ಕಾಶಿನಾಥ ವಾಡೆದ, ಶಿವಶರಣ ಚೌಡೇಶ್ವರಿ, ಶಿವಲಿಂಗಪ್ಪ ಗುಡ್ಡದ, ವಿಶ್ವನಾಥ ಇಕ್ಕಳಕಿ, ಹಟಗಾರ ಸಮಾಜದ ಮುಖ್ಯಸ್ಥರಾದ ನಾಗೇಂದ್ರ ಬಳೂರ್ಗಿ, ವಿಶ್ವನಾಥ ಮಣುರ, ಬಸವರಾಜ ಹುಲಗೆರಿ, ಶಿವಪುತ್ರ ಸನಗುಂದಿ, ಕಲ್ಲಪ್ಪ ಜಟ್ಟೇಪಗೊಳ, ಮಹಾಂತು ಜಗದೇ, ಸೂರ್ಯಕಾಂತ ಪೊಲೀಸ್‌ ಪಾಟೀಲ, ರಾಜೇಂದ್ರ ಖಾನಾಪೂರೆ, ಮಲ್ಲಿಕಾರ್ಜುನ ಕುಂಬಾರ ಉಪಸ್ಥಿತರಿದ್ದರು.

click me!