ಪ್ರಧಾನಿ ಮೋದಿ ಜನಸೇವೆ ಮೆಚ್ಚಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ

By Kannadaprabha News  |  First Published Mar 12, 2023, 9:30 PM IST

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಸೇವೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನಪರವಾದ ಯೋಜನೆಗಳು ಮತಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅನೇಕರು ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಕಡೆ ಒಲವು ತೋರುತ್ತಿದ್ದಾರೆ. ಬರಲಿರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ: ಮುರುಗೇಶ ನಿರಾಣಿ 


ಬೀಳಗಿ(ಮಾ.12): ತಾಲೂಕಿನ ಗಿರಿಸಾಗರ ಗ್ರಾಮದ ನೂರಾರು ಜನರು ಕಾಂಗ್ರೆಸ್‌ ಪಕ್ಷವನ್ನು ತೊರೆದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ ಆರ್‌. ನಿರಾಣಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಸಚಿವರಾದ ಡಾ.ಮುರುಗೇಶ ನಿರಾಣಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಸೇವೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನಪರವಾದ ಯೋಜನೆಗಳು ಮತಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅನೇಕರು ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಕಡೆ ಒಲವು ತೋರುತ್ತಿದ್ದಾರೆ. ಬರಲಿರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನ ವಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಪರ್ವದ ಗಾಳಿ ಬೀಸುತ್ತಿದೆ. ಪ್ರತಿಯೊಂದು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸದಾ ಸಿದ್ಧ ಎಂದರು.

Tap to resize

Latest Videos

undefined

ಬಿಜೆಪಿಗೆ ಅಧಿಕಾರ ಖಚಿತ, ಸಿದ್ದರಾಮಯ್ಯ ಹರಕೆಯ ಕುರಿ: ಸಚಿವ ಶ್ರೀರಾಮುಲು

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ವಿಠಲ ಬಾಗೇವಾಡಿ, ಗಿರಿಸಾಗರ ಗ್ರಾಮದ ಪ್ರಮುಖರಾದ ಭೀಮಶಿ ಮೇಲ್ನಾಡ, ಗ್ರಾಪಂ ಪ್ರಕಾಶ ಹೆಗ್ಗೂರ, ಈರಣ್ಣ ವಾರದ, ಭೀಮಶಿ ಅರಮನಿ, ತಮ್ಮಣ್ಣ ತೋಟದ, ಗ್ರಾಪಂ ಸದಸ್ಯ ಗುಂಡಪ್ಪ ಕಾಳಪ್ಪಗೋಳ, ಯಂಕಪ್ಪ ನುಚ್ಚಿನ, ಭೀಮಪ್ಪ ಮೇತ್ರಿ, ನಿಂಗನಗೌಡ ಪಾಟೀಲ, ಮಹಾದೇವಪ್ಪ ಪಟ್ಟಣಶೆಟ್ಟಿ, ಯಮನುರಿ ನದಾಪ ಹಾಗೂ ಇನ್ನೂ ಅನೇಕರು ಇದ್ದರು.

click me!