ಬೆಂಗಳೂರು (ಜೂ.13): ನಾನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತನಾಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಎಚ್ಚರಿಕೆ ನೀಡಿಲ್ಲ ಎಂದು ಶಾಸಕ ಜಮೀರ್ ಅಹಮದ್ ಖಾನ್ ಸಮಜಾಯಿಷಿ ನೀಡಿದ್ದಾರೆ.
‘ಕುಮಾರಸ್ವಾಮಿ ಹೇಗೆ ಮಾತಾಡುತ್ತಾರೋ ನಾನೂ ಅದೇ ರೀತಿ ಮಾತನಾಡುತ್ತೇನೆ. ಅವರ ಜೊತೆ ನನಗೆ ಅಂತಹ ಸ್ನೇಹ ಸಂಬಂಧವಿದೆ.
ಜಮೀರ್ ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತಾಡಲಿ: ನಿಖಿಲ್ ಗರಂ ..
ಮುಖ್ಯಮಂತ್ರಿ ಆಗಿದ್ದಾಗಲೂ ಏಕವಚನದಲ್ಲೇ ಮಾತನಾಡುತ್ತಿದ್ದರು. ಶಿವಕುಮಾರ್ ಅವರು ನನಗೆ ವಾರ್ನಿಂಗ್ ಕೊಟ್ಟಿಲ್ಲ. ಮಾತನಾಡುವಾಗ ನೋಡಿಕೊಂಡು ಮಾತನಾಡಿ ಎಂದಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಪಕ್ಷದ ಬಗ್ಗೆ ಮಾತನಾಡಿಲ್ಲ. ವೈಯಕ್ತಿಕವಾಗಿ ಮಾತನಾಡಿದ್ದೇನೆ. ಇದು ಇಲ್ಲಿಗೇ ಮುಗಿದ ವಿಚಾರ ಎಂದು ಹೇಳಿದರು.