ಶ್ರೀರಾಮುಲು ಆಪ್ತ ಸಹಾಯಕನ ಬಂಧನ: ಮಾಜಿ ಸಚಿವ ಖಾದರ್ ಪ್ರತಿಕ್ರಿಯಿಸಿದ್ದು ಹೀಗೆ

By Suvarna NewsFirst Published Jul 2, 2021, 4:20 PM IST
Highlights

* ಸಚಿವ ಶ್ರೀರಾಮಲು ಆಪ್ತಸಹಾಯಕನ ಬಂಧನ ವಿಚಾರ
* ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯೆ
* ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ
 

ಮಂಗಳೂರು, (ಜುಲೈ.02): ಸಿಸಿಬಿಯಿಂದ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಬಂಧನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಇಂದು (ಶುಕ್ರವಾರ) ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್,ಈ ಘಟನೆ ರಾಜ್ಯ ಸರ್ಕಾರ ಯಾವ ರೀತಿ ನಡೀತಾ ಇದೆ ಅನ್ನೋದಕ್ಕೆ ಉದಾಹರಣೆ. ಜನರು ಎಲ್ಲವನ್ನೂ ನೋಡ್ತಾ ಇದಾರೆ, ಸರಿಯಾದ ಸಮಯದಲ್ಲಿ ತೀರ್ಮಾನ ಕೊಡ್ತಾರೆ ಎಂದರು. 

"

ಅರೆಸ್ಟ್ ಆಗಿದ್ದ ರಾಮುಲು ಆಪ್ತ ರಿಲೀಸ್, ಅನುಮಾನ ಮೂಡಿಸಿದ ಸಿಸಿಬಿ ನಡೆ

2008ರಲ್ಲಿ ಇವರು ಅಧಿಕಾರಕ್ಕೆ ಬಂದಾಗಲೂ ಇಂಥದ್ದೇ ಸಮಸ್ಯೆ ಇತ್ತು. ಮತ್ತೆ ಸ್ಪಷ್ಟ ಬಹುಮತ ಇಲ್ಲದೇ ಇದ್ರೂ ಅಧಿಕಾರಕ್ಕೆ ಬಂದು ಮತ್ತೆ ಜನರನ್ನ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಹೆಸರಿನಲ್ಲಿ ಹಣ ಡೀಲ್ ಮಾಡುತ್ತಿದ್ದಾನೆ ಎಂದು ಸ್ವತಃ ಸಿಎಂ ಪುತ್ರಿ ಬಿವೈ ವಿಜಯೇಂದ್ರ ಅವರು ಸಿಸಿಬಿ ದೂರು ನೀಡಿದ್ದರು. ಇದರ ಅನ್ವಯ  ಸಿಸಿಬಿ ಪೊಲೀಸರು ನಿನ್ನೆ(ಜುಲೈ 01) ಸಂಜೆ ರಾಜಣ್ಣ ಅವರನ್ನ ವಶಕ್ಕೆ ಬಂದಿಸಿದ್ದರು. ಇದೀಗ ವಿಚಾರಣೆ ನಡೆಸಿ ಮತ್ತೆ ನೋಟಿಸ್ ಕೊಟ್ಟಾಗ ವಿಚಾರಣೆಗೆ ಹಾಜರಾಗಲು ಸೂಚಿಸಿ ಕಳುಹಿಸಿದ್ದಾರೆ.

click me!