ರಾಜ್ಯದಲ್ಲಿ ಪಿಎಫ್​ಐ ಬೆಳೆಯೋದಕ್ಕೆ ಸಿದ್ದರಾಮಯ್ಯ ಕಾರಣರಾ..?

Published : Sep 27, 2022, 09:57 PM IST
ರಾಜ್ಯದಲ್ಲಿ ಪಿಎಫ್​ಐ ಬೆಳೆಯೋದಕ್ಕೆ ಸಿದ್ದರಾಮಯ್ಯ ಕಾರಣರಾ..?

ಸಾರಾಂಶ

ಭಯೋತ್ಪಾದಕ ಚಟುವಟಿಕೆಗೆ ನೆರವು, ಉಗ್ರರಿಗೆ ಆರ್ಥಿಕ ಸಹಾಯ ಸೇರಿದಂತೆ ಹಲವು ಆರೋಪಗಳಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮೇಲೆ ದೇಶಾದ್ಯಂತ NIA ದಾಳಿ ಮಾಡಿದೆ. ಈ ದಾಳಿ ಬೆನ್ನಲ್ಲೇ ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಪಿಎಫ್ಐ ಸಂಘಟನೆ ಗಟ್ಟಿಯಾಗಿ ಬೇರೂರಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಅನ್ನೋ ಬಲವಾದ ಆರೋಪ ಕೇಳಿಬರುತ್ತಿದೆ. ಮುಸ್ಲಿಂ ಮತ ಬ್ಯಾಂಕ್‌ಗಾಗಿ ಸಿದ್ದರಾಮಯ್ಯ ಕಣ್ಮುಚ್ಚಿ ಪಿಎಫ್ಐ ಸಂಘಟನೆಗೆ ಬೆಂಬಲ ನೀಡಿದ್ದರಾ? ಈ ಕುರಿತು ಸತ್ಯ ಹಾಗೂ ಸಂಪೂರ್ಣ ವಿವರ ಇಲ್ಲಿದೆ.   

Shashishekhar, Asianet Suvarna News

ರಾಜ್ಯದಲ್ಲಿ ಪಿಎಫ್​ಐ ಸಂಘಟನೆ ಬೆಳೆಯೋದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರೇ ಕಾರಣ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಮಾಡಿದವರಲ್ಲಿ ನಳಿನ್ ಕುಮಾರ್ ಕಟೀಲ್ ಮೊದಲಿಗರೂ ಅಲ್ಲ... ಕೊನೆಯವರೂ ಅಲ್ಲ. ಬಿಜೆಪಿಯ ಹಲವು ನಾಯಕರು ಇಂಥಾ ಆರೋಪವನ್ನ ಪಿಎಫ್​ಐ ವಿಷಯ ಬಂದಾಗಲೆಲ್ಲಾ ಪ್ರಸ್ತಾಪಿಸುತ್ತಾರೆ. ಹಾಗಾದ್ರೆ ಈ ಆರೋಪದಲ್ಲಿ ಸತ್ಯಾಂಶ ಇದೆಯಾ..? ಪಿಎಫ್​ಐ ಮೇಲೆ ಸಿದ್ದರಾಮಯ್ಯನವರಿಗೆ ಪ್ರೀತಿ ಇತ್ತಾ..? ಮುಸ್ಲಿಂ ಸಂಘಟನೆ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಪಿಎಫ್​ಐ ಪರ ನಿಲುವು ಹೊಂದಿದ್ದರಾ..? ಈ ಆರೋಪದ ಬಗ್ಗೆ ವಾಸ್ತವಾಂಶ ಏನು..?

ಸಿದ್ದರಾಮಯ್ಯ ವಿರುದ್ಧ ಬಿಜೆಪಿಗರ ಈ ಆರೋಪಕ್ಕೆ ಕಾರಣ ಇದೆ. ಅದೇನಂದ್ರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪಿಎಫ್​ಐ ಮತ್ತು ಕೆಎಫ್​ಡಿ ಸಂಘಟನೆಗಳ ಮೇಲಿದ್ದ 175 ಕ್ರಿಮಿನಲ್ ಕೇಸ್​ಗಳನ್ನ ವಾಪಸ್ ಪಡೆದಿದ್ದರು. ರೈತರ ಮೇಲಿನ ಕೇಸ್​ಗಳು.. ಕನ್ನಡ ಪರ ಸಂಘಟನೆಗಳ ಮೇಲಿನ ಕೇಸ್​ಗಳನ್ನ ವಾಪಸ್ ಪಡೆಯೋ ಸಂಪ್ರದಾಯ ಹಲವು ವರ್ಷಗಳಿಂದಲೂ ಇದೆ. ಸರ್ಕಾರದ ವಿರುದ್ಧ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸೋ ರೈತರು, ಕನ್ನಡ ಪರ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿದ್ದ ಕೇಸ್​ಗಳನ್ನ ಹಲವು ಸರ್ಕಾರಗಳು ವಾಪಸ್ ಪಡೆದಿರೋ ಉದಾಹರಣೆಗಳಿವೆ. ಆದ್ರೆ ಈ ರೀತಿಯ ನಿರ್ಧಾರಗಳಿಗೆ ಯಾರೂ ವಿರೋಧಿಸೋದಿಲ್ಲ.. ಆದ್ರೆ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಗಲಭೆ ಸೃಷ್ಟಿಸಿದ್ದ ಪಿಎಫ್​ಐ ಮತ್ತು ಕೆಎಫ್​ಡಿ ಸಂಘಟನೆಗಳ ವಿರುದ್ಧ ದಾಖಲಾಗಿದ್ದ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನೇ ವಾಪಸ್ ಪಡೆದಿತ್ತು.

ಗಾಂಧಿ-ನೆಹರು ಓಕೆ! ಸಾವರ್ಕರ್ ಯಾಕೆ? ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಾ? ಹೇಡಿನಾ?

2015ರ ಜೂನ್ 2ನೇ ತಾರೀಕು ಸಿದ್ದರಾಮಯ್ಯ ಸರ್ಕಾರ ಪಿಎಫ್​ಐ ಮತ್ತು ಕೆಎಫ್​ಡಿ ಸಂಘಟನೆಗಳ 1600ಕ್ಕೂ ಹೆಚ್ಚು ಕಾರ್ಯಕರ್ತರ ಮೇಲಿನ 175 ಕೇಸ್​ಗಳನ್ನ ವಾಪಸ್ ಪಡೆದಿತ್ತು. ಗೃಹ ಇಲಾಖೆ ಮತ್ತು ಕಾನೂನು ಇಲಾಖೆಗಳ ಸ್ಪಷ್ಟ ವಿರೋಧವನ್ನು ಲೆಕ್ಕಿಸದೇ ಸಿದ್ದು ಸರ್ಕಾರ ಈ ಕೇಸ್​ಗಳನ್ನು ವಾಪಸ್ ಪಡೆದಿತ್ತು. ಹಾಗಂತ ಇವೇನು ಸಣ್ಣಪುಟ್ಟ ಕೇಸ್​ ಗಳಲ್ಲ. ಎಲ್ಲವೂ ಗಲಭೆ ಸೃಷ್ಟಿಸಿದ್ದ ಪ್ರಕರಣಗಳೇ... ಕ್ಯಾಬಿನೆಟ್ ಸಬ್ ಕಮಿಟಿ ರಿಪೋರ್ಟ್ ಆಧಾರದ ಮೇಲೆ ಎಲ್ಲ ಕೇಸ್ ಗಳನ್ನ ವಾಪಸ್ ಪಡೆಯಲಾಗಿತ್ತು. ಆಗ ವಿರೋಧ ವ್ಯಕ್ತವಾದಾಗ ಕೇಸ್ ಹಾಕಿದ ಸರ್ಕಾರಕ್ಕೆ ಕೇಸ್ ಗಳನ್ನ ವಾಪಸ್ ಪಡೆಯೋ ಅಧಿಕಾರ ಸರ್ಕಾರಕ್ಕಿದೆ ಎಂದಿದ್ದರು ಆಗಿನ ಕಾನೂನು ಮಂತ್ರಿ ಟಿಬಿ ಜಯಚಂದ್ರ. 

2009: ಮೈಸೂರು ಗಲಭೆ, 40 ಕೇಸ್ ವಾಪಸ್
2009ರಲ್ಲಿ ಮೈಸೂರಿನ ಉದಯಗಿರಿ ಮತ್ತು ನರಸಿಂಹರಾಜ ಮತ್ತು ನರಸಿಂಹರಾಜದಲ್ಲಿ ನಡೆದಿದ್ದ ಗಲಭೆಯಲ್ಲಿ ಮೂವರ ಕೊಲೆಯಾಗಿತ್ತು. 250ಕ್ಕೂ ಹೆಚ್ಚು ಪಿಎಫ್​ಐ, ಕೆಎಫ್​ಡಿ ಗಲಭೆಕೋರರ ಮೇಲೆ ಕೇಸ್ ಗಳನ್ನ ದಾಖಲಿಸಲಾಗಿತ್ತು. ಕೊಲೆ ಕೇಸ್​ ಹೊರತುಪಡಿಸಿ 40 ಕೇಸ್​ಗಳನ್ನ ಸರ್ಕಾರ ವಾಪಸ್ ಪಡೆದಿತ್ತು.  

2010 : ಶಿವಮೊಗ್ಗ, ಹಾಸನ ಗಲಭೆ, 135 ಕೇಸ್ ವಾಪಸ್
2010ರಲ್ಲಿ ಶಿವಮೊಗ್ಗದಲ್ಲಿ ನಡೆದ ಗಲಭೆ ಕೇಸ್​ಗೆ ಸಂಬಂಧಿಸಿ 114 ಕೇಸ್​ಗಳು ದಾಖಲಾಗಿದ್ದವು. ಹಾಸನದಲ್ಲಿ 21 ಕೇಸ್ ಗಳು ದಾಖಲಾಗಿದ್ದವು. 1400ಕ್ಕೂ ಹೆಚ್ಚು ಪಿಎಫ್​ಐ ಮತ್ತು ಎಸ್​ಡಿಪಿಐ ಕಾರ್ಯಕರ್ತರ ಮೇಲೆ ದಾಖಲಿಸಲಾಗಿದ್ದ ಕೇಸ್​ಗಳು. ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಅವರ ಲೇಖನ ವಿರೋಧಿಸಿ ಗಲಭೆ ಹಾಸನ, ಶಿವಮೊಗ್ಗದಲ್ಲಿ ಗಲಭೆ ನಡೆದಿತ್ತು. ಇಸ್ಲಾಂನಲ್ಲಿ ಪರದೆ ಹಾಕುವುದು ಧರ್ಮದಲ್ಲಿ ಕಡ್ಡಾಯನಾ ಎಂಬ ಬಗ್ಗೆ ಇದ್ದ ಲೇಖನದ ಕನ್ನಡ ಅನುವಾದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಈ ಲೇಖನ ವಿರೋಧಿಸಿ ಪಿಎಫ್​ಐ ಮತ್ತು ಕೆಎಫ್​ಡಿ ಕಾರ್ಯಕರ್ತರು ಗಲಭೆ, ಹಿಂಸಾಚಾರ ನಡೆಸಿದ್ದರು..

ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!

ಇದು ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಪಿಎಫ್​ಐ ಪರವಾಗಿ ಕೈಗೊಂಡ ನಿರ್ಣಯಗಳು... ಈ ಎರಡು ಗಲಭೆಗಳಾದ ನಂತರ ರಾಜ್ಯದಲ್ಲಿ ಪಿಎಫ್​ಐ ಕಾರ್ಯಕರ್ತರ ಮೇಲೆ ಅದೆಷ್ಟೋ ಗಲಭೆ, ಹಿಂಸಾಚಾರ, ಕೊಲೆಗಳಿಗೆ ಸಂಬಂಧಿಸಿದ ಕೇಸ್​ಗಳು ದಾಖಲಾಗಿವೆ... ಆರಂಭದಲ್ಲೇ ಪಿಎಫ್​ಐನ ಹಿಂಸಾತ್ಮಕ ಹೋರಾಟವನ್ನ ಕಾನೂನು ಪ್ರಕಾರ ಮಟ್ಟ ಹಾಕಿದ್ದರೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ...
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ