ಯಡಿಯೂರಪ್ಪ ಅವರು ಜನರಿಂದ ಚುನಾಯಿತರಾದ ಮುಖ್ಯಮಂತ್ರಿ ಅಲ್ಲ. ಜನ ಅವರಿಗೆ ಆಶೀರ್ವಾದ ಮಾಡಿರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ, ಅವರಿಗೆ ಹಣದಾಸೆಗೆ ತೋರಿಸಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಬೆಳಗ್ಗೆ ಅಬ್ಬರಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದೀಗ ಅದೇ ಬಿಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನ ತಿಳಿಸಿದ್ದಾರೆ.
ಬೆಂಗಳೂರು, (ಜುಲೈ.27): ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಸಂಭ್ರಮವನ್ನು ಇಂದು (ಸೋಮವಾರ) ಬಿಜೆಪಿ ಆಚರಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ರಾಜಭವನ ಚಲೋ ನಡೆಸಿತು.
ಮತ್ತೊಂದೆಡೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಬೆಳಗ್ಗೆಯಿಂದಲೇ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಸಂಜೆ ಬಿಎಸ್‌ವೈಗೆ ಅಭಿನಂದನೆಗಳನ್ನ ತಿಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
'ಭ್ರಷ್ಟಾಚಾರದ ಸುವಾಸನೆ ಬರ್ತಿದೆ ಅಂಥ ಕರಿಬೇಕಾ' ಸರ್ಕಾರಕ್ಕೆ ಸಿದ್ದು ದಾಖಲೆ ಪಂಚ್!
ಹೌದು...ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಟ್ವೀಟ್ ಮೂಲಕ ಅಭಿನಂದನೆ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ನಿಮಗೆ ಅಭಿನಂದನೆಗಳು. ಮುಖ್ಯಮಂತ್ರಿಯಾಗುವ ಗುರಿ ತಲುಪಿ ವರ್ಷ ಕಳೆದ ಸಂಭ್ರಮದಲ್ಲಿರುವ ನೀವು ತುಸು ಬಿಡುವು ಮಾಡಿಕೊಂಡು, ಈ ಗುರಿ ಮುಟ್ಟಲು ಬಳಸಿದ ದಾರಿಯ ಬಗ್ಗೆ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶಿಸಿಕೊಳ್ಳಿ. ನಿಮ್ಮ 'ಸಾಧನೆ' ಯ ಬಗ್ಗೆ ಮುಂದೆ ಮಾತನಾಡೋಣ ಎಂದು ಲೇವಡಿ ಮಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಅವರಿಗೆ ಅಭಿನಂದನೆಗಳು.
ಮುಖ್ಯಮಂತ್ರಿಯಾಗುವ ಗುರಿ ತಲುಪಿ ವರ್ಷ ಕಳೆದ ಸಂಭ್ರಮದಲ್ಲಿರುವ ನೀವು ತುಸು ಬಿಡುವು ಮಾಡಿಕೊಂಡು,
ಈ ಗುರಿ ಮುಟ್ಟಲು ಬಳಸಿದ ದಾರಿಯ ಬಗ್ಗೆ ನಿಮ್ಮ ಆತ್ಮಸಾಕ್ಷಿಯನ್ನು ಪ್ರಶಿಸಿಕೊಳ್ಳಿ.
ನಿಮ್ಮ 'ಸಾಧನೆ' ಯ ಬಗ್ಗೆ ಮುಂದೆ ಮಾತನಾಡೋಣ.