'ಕಾಂಗ್ರೆಸ್​​ ನಾಯಕರಿಗೆ ಪ್ರಚಾರದ ಗೀಳು…ಅವರೆಂದೂ ಬೆಳಕು ಹುಡುಕುವುದಿಲ್ಲ'

By Suvarna NewsFirst Published Jul 27, 2020, 5:22 PM IST
Highlights

 ಕಾಂಗ್ರೆಸ್​ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಬಿಜೆಪಿಯಿಂದ ಪ್ರಜಾಪ್ರಭುತ್ವ, ಸಂವಿಧಾನಗಳು ನಾಶವಾಗುತ್ತಿವೆ ಎಂದು ಆರೋಪಿಸಿದ ಅವರು, ಸಂವಿಧಾನ ರಕ್ಷಿಸಿ..ಪ್ರಜಾಪ್ರಭುತ್ವ ಉಳಿಸಿ ಎಂದು ಘೋಷವಾಕ್ಯ ಕೂಗುತ್ತ ಮೆರವಣಿಗೆ ಮಾಡಿದ್ದು, ಇದಕ್ಕೆ ಸಚಿವ ಸುಧಾಕರ್ ಚಾಟಿ ಬೀಸಿದ್ದಾರೆ.

ಬೆಂಗಳೂರು, (ಜುಲೈ.27): ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್​ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಟ್ವೀಟ್‌ ಮೂಲಕ ಚಾಟಿ ಬೀಸಿರುವ ಸುಧಾಕರ್, ಕೊವಿಡ್​-19 ಇದ್ದರೂ ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸದೆ ಪ್ರತಿಭಟನೆ ನಡೆಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

'ವಿಪಕ್ಷದವರು ರಾತ್ರಿ ಸೂರ್ಯನನ್ನು ಹುಡುಕುತ್ತಾರೆ'

ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ,ಸಾಮಾಜಿಕ ಅಂತರವನ್ನು ಮರೆತು ಕಾಂಗ್ರೆಸ್‌ ಮುಖಂಡರು ಜಾತ್ರೆಯಂತೆ ರಾಜ್ಯಪಾಲರಿಗೆ ದೂರು ನೀಡಲು ಹೋಗಿರುವುದು ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ಇವರಿಗೆ ಸಾಮಾಜಿಕ ಕಳಕಳಿಗಿಂತ ಪ್ರಚಾರದ ಗೀಳು ಜಾಸ್ತಿ.ʼತಾವು ಇರುವ ಕತ್ತಲೆಯನ್ನು ಅರಿಯದವರು, ಬೆಳಕಿಗಾಗಿ ಎಂದೂ ಹುಡುಕುವುದಿಲ್ಲʼ

ಕಾಂಗ್ರೆಸ್​ ನಾಯಕರು ಕೊವಿಡ್​-19 ನಿಯಂತ್ರಣಾ ನಿಯಮಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರವನ್ನು ಮರೆತು ಜಾತ್ರೆಯಂತೆ ಪ್ರತಿಭಟನೆ ಮಾಡಿದ್ದಲ್ಲದೆ, ರಾಜ್ಯಪಾಲರಿಗೆ ದೂರು ನೀಡಲು ಹೋಗಿದ್ದು ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದರು.

ಇವರಿಗೆ ಸಮಾಜದ ಒಳಿತಿಗಿಂತಲೂ ಪ್ರಚಾರದ ಗೀಳು ಜಾಸ್ತಿ. ತಾವು ಇರುವ ಕತ್ತಲೆಯನ್ನು ಅರಿಯದವರು ಬೆಳಕಿಗಾಗಿ ಎಂದೂ ಹುಡುಕುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿ,ಸಾಮಾಜಿಕ ಅಂತರವನ್ನು ಮರೆತು ಕಾಂಗ್ರೆಸ್‌ ಮುಖಂಡರು ಜಾತ್ರೆಯಂತೆ ರಾಜ್ಯಪಾಲರಿಗೆ ದೂರು ನೀಡಲು ಹೋಗಿರುವುದು ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ಇವರಿಗೆ ಸಾಮಾಜಿಕ ಕಳಕಳಿಗಿಂತ ಪ್ರಚಾರದ ಗೀಳು ಜಾಸ್ತಿ.ʼತಾವು ಇರುವ ಕತ್ತಲೆಯನ್ನು ಅರಿಯದವರು, ಬೆಳಕಿಗಾಗಿ ಎಂದೂ ಹುಡುಕುವುದಿಲ್ಲʼ

— Dr Sudhakar K (@mla_sudhakar)
click me!