Karnataka Politics: ಕರ್ನಾ​ಟ​ಕ​ದಲ್ಲಿ ಇರು​ವುದು ಮಾಫಿಯಾ ಸರ್ಕಾರ: ರಾಮಲಿಂಗಾ ರೆಡ್ಡಿ

By Govindaraj S  |  First Published Apr 17, 2022, 8:26 PM IST

ಕರ್ನಾ​ಟ​ಕ​ದಲ್ಲಿ ಉತ್ತರ ಪ್ರದೇಶ ಮಾದ​ರಿಯ ಮಾಫಿಯಾ ಸರ್ಕಾರ ಆಡ​ಳಿತ ನಡೆ​ಸು​ತ್ತಿದೆ ಎಂದು ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ರಾಮ​ಲಿಂಗಾ​ರೆಡ್ಡಿ ಬಿಜೆ​ಪಿ ಸರ್ಕಾ​ರದ ವಿರುದ್ಧ ವಾಗ್ದಾಳಿ ನಡೆ​ಸಿ​ದರು.


ರಾಮ​ನ​ಗರ (ಏ.17): ಕರ್ನಾ​ಟ​ಕ​ದಲ್ಲಿ (Karnataka) ಉತ್ತರ ಪ್ರದೇಶ ಮಾದ​ರಿಯ ಮಾಫಿಯಾ ಸರ್ಕಾರ (Mafia Government) ಆಡ​ಳಿತ ನಡೆ​ಸು​ತ್ತಿದೆ ಎಂದು ಕೆಪಿ​ಸಿಸಿ ಕಾರ್ಯಾ​ಧ್ಯಕ್ಷ ರಾಮ​ಲಿಂಗಾ​ ರೆಡ್ಡಿ (Ramalinga Reddy) ಬಿಜೆ​ಪಿ ಸರ್ಕಾ​ರದ ವಿರುದ್ಧ ವಾಗ್ದಾಳಿ ನಡೆ​ಸಿ​ದರು. ನಗ​ರದ ಪೊಲೀಸ್‌ ಭವ​ನದ ಎದು​ರಿನ ವೃತ್ತ​ದಲ್ಲಿ ಮಾಜಿ ಸಚಿವ ಈಶ್ವರಪ್ಪ (KS Eshwarappa) ಬಂಧ​ನಕ್ಕೆ ಒತ್ತಾ​ಯಿಸಿ ಕಾಂಗ್ರೆಸ್‌ (Congress) ನಡೆ​ಸಿದ ಪ್ರತಿ​ಭ​ಟನಾ (Protest) ಸಭೆ​ಯಲ್ಲಿ ಮಾತ​ನಾ​ಡಿದ ಅವರು, ಕರ್ನಾ​ಟ​ಕ​​ದಲ್ಲಿ ಬೊಮ್ಮಾಯಿ ನೇತೃ​ತ್ವದ ಸರ್ಕಾರ ಇಲ್ಲ. ಹಿಂದೂ ಜಾಗ​ರಣ ವೇದಿಕೆ, ಶ್ರೀರಾ​ಮ​ಸೇನೆ, ಭಜ​ರಂಗ​ದಳದ ಮಾಫಿಯಾ ಸರ್ಕಾರ ಆಡ​ಳಿತ ನಡೆ​ಸು​ತ್ತಿದೆ ಎಂದು ಟೀಕಿ​ಸಿ​ದರು.

ಭ್ರಷ್ಟಾ​ಚಾರ ಮತ್ತು ಅಭಿ​ವೃದ್ಧಿ ವೈಫ​ಲ್ಯ​ವನ್ನು ಮರೆ​ಮಾ​ಚಲು ಬಿಜೆಪಿ ತನ್ನ ಅಂಗ ಸಂಘ​ಟನೆ​ಗಳ ಮೂಲಕ ಹಿಜಾಬ್‌ - ಕೇಸರಿ ಶಾಲು, ಹಲಾಲ್‌ ಕಟ್‌ - ಝಟ್ಕಾ ಕಟ್‌ನಂತಹ ವಿಚಾರ​ಗ​ಳಿಗೆ ವಿವಾದ ಸ್ವರೂಪ ನೀಡಿ ಕೋಮು​ಸೌ​ಹಾ​ರ್ದತೆ ಕದ​ಡುವ ಪ್ರಯತ್ನ ಮಾಡಿ​ದರು ಎಂದು ಆರೋ​ಪಿ​ಸಿ​ದರು. ಭ್ರಷ್ಟಾ​ಚಾ​ರದ ಆರೋಪ ಹೊತ್ತಿ​ರುವ ಈಶ್ವ​ರಪ್ಪ ಘನಂದಾರಿ ಕೆಲಸ ಮಾಡಿ​ದವರಂತೆ ಮೆರ​ವ​ಣಿ​ಗೆ​ಯಲ್ಲಿ ಬಂದು ಸಚಿವ ಸ್ಥಾನಕ್ಕೆ ರಾಜೀ​ನಾಮೆ ನೀಡಿದ್ದಾರೆ. ಈಶ್ವರಪ್ಪ ಮೂರು ಬಿಟ್ಟಿ​ದ್ದರೆ, ಆತ​ನೊಂದಿಗೆ ಬಂದ​ವರು ಮಾನ​ಗೆ​ಟ್ಟ​ವರು ಎಂದು ಟೀಕಿ​ಸಿ​ದರು. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿ​ಯೂ​ರಪ್ಪ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರರವರು ಈಶ್ವ​ರಪ್ಪ ಮತ್ತೆ ಸಚಿ​ವ​ರಾ​ಗು​ತ್ತಾ​ರೆಂದು ಹೇಳು​ತ್ತಿ​ದ್ದಾರೆ. 

Tap to resize

Latest Videos

Mandya Politics: ರಾಜಕೀಯ ಪಕ್ಷ ಸೇರಲು ಆತುರ ಮಾಡಲ್ಲ: ಸಂಸದೆ ಸುಮಲತಾ

ಇದರಿಂದ ಪೊಲೀಸ್‌ ತನಿಖೆ ಯಾವ ರೀತಿ ನಡೆ​ಯು​ತ್ತದೆ ಎಂಬ ಆತಂಕ ಕಾಡು​ತ್ತಿದೆ ಎಂದು ರಾಮ​ಲಿಂಗಾ​ರೆಡ್ಡಿ ಹೇಳಿ​ದ​ರು. ವಿಧಾನ ಪರಿ​ಷತ್‌ ಸದಸ್ಯ ಎಸ್‌.ರವಿ ಮಾತ​ನಾಡಿ, ರಾಜ್ಯ​ದಲ್ಲಿ ಕೋಮು ಸೌಹಾ​ರ್ತಗೆ ಕೊಳ್ಳಿ ಇಡು​ತ್ತಿ​ದ್ದರು ಹಾಗೂ ಸಚಿ​ವ​ರೊ​ಬ್ಬರ ಮೇಲೆ ಭ್ರಷ್ಟಾ​ಚಾರದ ಆರೋಪ ಬಂದರೂ ಮುಖ್ಯ​ಮಂತ್ರಿ ಬೊಮ್ಮಾಯಿ ಮೌನ ವಹಿ​ಸುವ ಮೂಲಕ ತಾವು ಮೌನಿ ಬಾಬಾ ಎಂಬು​ದನ್ನು ನಿರೂ​ಪಿ​ಸಿ​ದ್ದಾರೆ. ಬೊಮ್ಮಾಯಿ ಮತ್ತು​ ಅವರ ಸಚಿವ ಸಂಪುಟ ಆಲಿ ಮತ್ತು ನಲ​ವತ್ತು ಕಳ್ಳ​ರು ಇದ್ದಂತೆ ಎಂದು ಲೇವಡಿ ಮಾಡಿ​ದರು. ವಿಧಾನ ಪರಿ​ಷತ್‌ ಮಾಜಿ ಸದಸ್ಯ ಎಚ್‌ .ಎಂ.​ರೇ​ವಣ್ಣ ಮಾತ​ನಾಡಿ, ಗುತ್ತಿ​ಗೆ​ದಾರ ಸಂತೋಷ್‌ ಆತ್ಮ​ಹತ್ಯೆ ವಿಷಯ​ದಲ್ಲಿ ಕಾಂಗ್ರೆಸ್‌ ಹೋರಾ​ಟದ ಎಚ್ಚ​ರಿಕೆ ನೀಡಿದ ನಂತರ ಪ್ರಕ​ರಣ ದಾಖ​ಲಿ​ಸಿ​ದರು. 

ಇದು ಕೊಲೆ ಪ್ರಕ​ರಣ ಆಗಿ​ರು​ವು​ದ​ರಿಂದ ಈಶ್ವ​ರಪ್ಪ ಅವ​ರನ್ನು ಕೂಡಲೇ ಬಂಧಿ​ಸ​ಬೇಕು. ಇಲ್ಲ​ದಿ​ದ್ದರೆ ಹೋರಾಟ ಮುಂದು​ವ​ರೆ​ಯ​ಲಿದೆ ಎಂದು ಎಚ್ಚ​ರಿ​ಸಿ​ದ​ರು. ಮಾಜಿ ಶಾಸಕ ಕೆ.ರಾಜು ಮಾತ​ನಾಡಿ, ಬಿಜೆಪಿ ಸರ್ಕಾರ ಭ್ರಷ್ಟಾ​ಚಾರ ಹಾಗೂ ಅಭಿ​ವೃದ್ಧಿ ವೈಫಲ್ಯ ವಿಚಾ​ರ​ವಾಗಿ ಜನರ ದಿಕ್ಕು ತಪ್ಪಿ​ಸಲು ಮತೀಯ ಗಲಭೆ ಮಾಡಿ​ಸು​ತ್ತಿದೆ. ಮುಖ್ಯ​ಮಂತ್ರಿ ಬೊಮ್ಮಾಯಿ ಕೂಡ ಭ್ರಷ್ಟರ ಪರ​ವಾಗಿ ನಿಂತಿ​ದ್ದಾರೆ. ಭ್ರಷ್ಟಾ​ಚಾರ ಮೈಗೂ​ಡಿ​ಸಿ​ಕೊಂಡು ಪ್ರೋತ್ಸಾಹ ನೀಡುವ ಇಂತಹ ಮುಖ್ಯ​ಮಂತ್ರಿಯನ್ನು ಕರ್ನಾ​ಟಕ ಎಂದೂ ನೋಡಿ​ರ​ಲಿಲ್ಲ ಎಂದು ಟೀಕೆ ಮಾಡಿ​ದ​ರು. ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌, ಸಂಸದ ಡಿ.ಕೆ.​ಸು​ರೇಶ್‌, ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಲಿಂಗ​ಪ್ಪ, ಜಿಪಂ ಮಾಜಿ ಅಧ್ಯ​ಕ್ಷ​ರಾದ ಇಕ್ಬಾಲ್‌ ಹುಸೇನ್‌ , ಕೆ.ರಮೇಶ್‌, ಮುಖಂಡ​ರಾದ ಜಿಯಾ​ವುಲ್ಲಾ, ಕೆ.ಶೇ​ಷಾದ್ರಿ ಮತ್ತಿ​ತ​ರರು ಹಾಜ​ರಿ​ದ್ದ​ರು.

Karnataka Politics: ಕಾಂಗ್ರೆಸಿಗರು ಮೇಕೆದಾಟು ವಿರೋಧಿಸಿದ್ರು: ದೇವೇಗೌಡ

ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್‌ ಹೋರಾಟ: ಸಚಿವ ಕೆ.ಎಸ್‌.ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್‌ ನಾಯಕರು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ 24 ಗಂಟೆಗಳ ಅಹೋರಾತ್ರಿ ಧರಣಿ ಶುಕ್ರವಾರ ಮಧ್ಯಾಹ್ನಕ್ಕೆ ಅಂತ್ಯವಾಗಿದ್ದು, ಇದರ ಬೆನ್ನಲ್ಲೇ ಶನಿವಾರದಿಂದಲೇ ಈಶ್ವರಪ್ಪ ಬಂಧನ ಹಾಗೂ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಹತ್ತು ಪ್ರತ್ಯೇಕ ತಂಡಗಳೊಂದಿಗೆ ರಾಜ್ಯಮಟ್ಟದ ಹೋರಾಟಕ್ಕೆ ಕಾಂಗ್ರೆಸ್‌ ಸಜ್ಜಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನ ಪ್ರಮುಖ ಹತ್ತು ನಾಯಕರ ನೇತೃತ್ವದಲ್ಲಿ ಏ.16 ರಿಂದ 20ರವರೆಗೆ ಐದು ದಿನ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರತಿಭಟನೆ ನಡೆಸಲಿದ್ದಾರೆ. ಜತೆಗೆ ಶನಿವಾರ ವಿಜಯಪುರ ಜಿಲ್ಲೆ ಹೊಸಪೇಟೆಯಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಎಚ್‌.ಕೆ. ಪಾಟೀಲ್‌ ನೇತೃತ್ವದಲ್ಲಿ ಮುತ್ತಿಗೆ ಹಾಕುವ ಮೂಲಕ ಸರ್ಕಾರದ ಹಾಗೂ ಬಿಜೆಪಿ ಪಕ್ಷ ಎರಡರ ಮೇಲೂ ಹೋರಾಟ ತೀವ್ರಗೊಳಿಸಿ ಒತ್ತಡ ಹಾಕಲು ನಿರ್ಧಾರ ಮಾಡಲಾಗಿದೆ.

click me!