ಕಾವಲ್ ಬೈರಸಂದ್ರ ಗಲಭೆ ಪ್ರಕರಣದಲ್ಲಿ ಎಸ್.ಡಿ.ಪಿ.ಐ ಸಂಘಟನೆ ಕೈವಾಡವಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರು, (ಆ.13): ಎಸ್.ಡಿ.ಪಿ.ಐ ಸಂಘಟನೆ ಬ್ಯಾನ್ ಮಾಡ್ತೇವೆ ಅಂತಾ ಬಿಜೆಪಿ ನಾಯಕರು ಮಾತಾಡ್ತಾರೆ. ಆದ್ರೆ ಇಲ್ಲಿವರೆಗೂ ಬಿಜೆಪಿ ಎಸ್.ಟಿ.ಪಿ.ಐ ಸಂಘಟನೆ ಬ್ಯಾನ್ ಮಾಡಿಲ್ಲ ಏಕೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ರಾಮಲಿಂಗ ರೆಡ್ಡಿ ಪ್ರಶ್ನಿಸಿದ್ದಾರೆ.
ನಗರದ ಕಾವಲ್ ಬೈರಸಂದ್ರ ಗಲಭೆ ಪ್ರಕರಣದಲ್ಲಿ ಎಸ್.ಡಿ.ಪಿ.ಐ ಸಂಘಟನೆ ಕೈವಾಡವಿದೆ ಎಂದು ಬಿಜೆಪಿ ನಾಯಕರು ಆರೋಪ ಕೇಳಿಬರುತ್ತಿದೆ.
ಬೆಂಗಳೂರು ಗಲಭೆಗೆ 15 'ಬೆಂಕಿ' ಸಾಕ್ಷಿಗಳು..!
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮಲಿಂಗ ರೆಡ್ಡಿ, ಈ ರೀತಿ ಗಲಭೆಗಳಾದಾಗ ಎಸ್.ಡಿ.ಪಿ.ಐ ಬಗ್ಗೆ ಮಾತಾಡ್ತಾರೆ. ಮತ್ತೆ ಸುಮ್ಮನಾಗ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 6 ವರ್ಷ ಆಯ್ತು. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಎಸ್.ಡಿ.ಪಿ.ಐ ಸಂಘಟನೆಯನ್ನು ನಿಷೇಧಿಸಲಿ ಎಂದು ಸವಾಲು ಹಾಕಿದರು.
ಎಸ್.ಡಿ.ಪಿ.ಐ ಸಂಘಟನೆಯಿಂದ ಬಿಜೆಪಿಗೆ ಲಾಭ ಇದೆ. ಕಾಂಗ್ರೆಸ್ ಗೆ ನಷ್ಟ. ಕಾಂಗ್ರೆಸ್ ಮತಗಳನ್ನ ಎಸ್.ಡಿ.ಪಿ.ಐ ಸಂಘಟನೆ ಡಿವೈಡ್ ಮಾಡುತ್ತೆ. ಇದು ಗೊತ್ತಿದ್ದೆ ಬಿಜೆಪಿ ಅವರು ಎಸ್.ಡಿ.ಪಿ.ಐ ಸಂಘಟನೆ ಬ್ಯಾನ್ ಮಾಡ್ತಿಲ್ಲ. ಆರ್.ಎಸ್.ಎಸ್, ಎಸ್.ಡಿ.ಪಿ.ಐ, ಬಿಜೆಪಿ ಒಂದೇ ನಾಣ್ಯದ ಮುಖಗಳು ಎಂದು ಹೇಳಿದರು.
ಹೌದು...ರಾಮಲಿಂಗ ರೆಡ್ಡಿ ಅವರು ಪ್ರಶ್ನಿಸಿದ್ದು ನಿಜ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಇದೇ ಬಿಜೆಪಿ ನಾಯಕರು ಎಸ್.ಡಿ.ಪಿ.ಐ ನಿಷೇಧಿಸುವಂತೆ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದ್ದರೂ ಏಕೆ ಎಸ್.ಡಿ.ಪಿ.ಐಯನ್ನು ಬ್ಯಾನ್ ಮಾಡುತ್ತಿಲ್ಲ. ಇದಕ್ಕೆ ಬಿಜೆಪಿ ನಾಯಕರೇ ಉತ್ತರ ಕೊಡಬೇಕು.