ಯಾವ ಜಿಲ್ಲೆಯಲ್ಲಿ ಯಾರು ಧ್ವಜಾರೋಹಣ ಮಾಡ್ಬೇಕು? ಸಚಿವರ ಪಟ್ಟಿ ಪ್ರಕಟಿಸಿದ ಸರ್ಕಾರ

By Suvarna NewsFirst Published Aug 12, 2020, 9:04 PM IST
Highlights

ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ಸಹ ಸರ್ಕಾರ ಬಿಡುಗಡೆ ಮಾಡಿದೆ. ಹಾಗಾದ್ರೆ ಯಾವ ಸಚಿವರು ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ಬೆಂಗಳೂರು, (ಆ.12): ವಿದ್ಯಾರ್ಥಿಗಳು ಇಲ್ಲದೆಯೇ ಕಡ್ಡಾಯವಾಗಿ ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರುಗಳು ಮಾತ್ರ ಶಾಲೆಗಳಿಗೆ ಹಾಜರಾಗಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಆದೇಶಸಿದೆ.

ಇದರ ಬೆನ್ನಲ್ಲೇ ಇದೀಗ ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ಸಹ ಸರ್ಕಾರ ಬಿಡುಗಡೆ ಮಾಡಿದೆ. 

ಸ್ವಾತಂತ್ರ್ಯ ದಿನಾಚರಣೆ: ಮಹತ್ವದ ಸುತ್ತೋಲೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ

ಕಲಬುರಗಿ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದು, ಪಟ್ಟಿಯಂತೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಹಾಗಾದ್ರೆ ಯಾವ ಸಚಿವರು ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ಬಾಗಲಕೋಟೆ-ಗೋವಿಂದಕಾರಜೋಳ
ರಾಮನಗರ- ಡಾ.ಸಿ.ಎನ್.ಅಶ್ವತ್ಥ ನಾರಾಯಣ
ರಾಯಚೂರು- ಲಕ್ಷ್ಮಣಸವದಿ
ಶಿವಮೊಗ್ಗ- ಕೆ.ಎಸ್.ಈಶ್ವರಪ್ಪ
ಬೆಂಗಳೂರು ಗ್ರಾಮಾಂತರ- ಆರ್.ಅಶೋಕ
ಧಾರವಾಡ-ಜಗದೀಶ ಶೆಟ್ಟರ್ 
ಚಿತ್ರದುರ್ಗ- ಬಿ.ಶ್ರೀರಾಮುಲು 
ಚಾಮರಾಜನಗರ- ಎಸ್.ಸುರೇಶ್ ಕುಮಾರ್ 
ಕೊಡಗು- ವಿ.ಸೋಮಣ್ಣ
ಹಾವೇರಿ- ಬಸವರಾಜ ಬೊಮ್ಮಾಯಿ 
ದಕ್ಷಿಣ ಕನ್ನಡ- ಕೋಟಶ್ರೀನಿವಾಸ ಪೂಜಾರಿ
ತುಮಕೂರು- ಜೆ.ಸಿ.ಮಾಧುಸ್ವಾಮಿ.
ಗದಗ-ಸಿ.ಸಿ.ಪಾಟೀಲ
ಕೋಲಾರ- ಎಚ್.ನಾಗೇಶ್ 
ಬೀದರ್- ಪ್ರಭು ಚವ್ಹಾಣ್ 
ವಿಜಯಪುರ- ಶಶಿಕಲಾ ಜೊಲ್ಲೆ 
ಬಳ್ಳಾರಿ- ಆನಂದಸಿಂಗ್ 
ದಾವಣಗೆರೆ- ಭೈರತಿ ಬಸವರಾಜ 
ಕೊಪ್ಪಳ- ಬಿ.ಸಿ.ಪಾಟೀಲ 
ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್ 
ಮಂಡ್ಯ- ಕೆ.ಸಿ.ನಾರಾಯಣಗೌಡ  
ಉತ್ತರಕನ್ನಡ- ಶಿವರಾಮ ಹೆಬ್ಬಾರ್ 
ಬೆಳಗಾವಿ- ರಮೇಶ್ ಜಾರಕಿಹೊಳಿ 
ಹಾಸನ-ಕೆ.ಗೋಪಾಲಯ್ಯ 

click me!
Last Updated Aug 12, 2020, 9:04 PM IST
click me!