ಆಳಂದ ವಿಧಾನಸಭೆ ಕ್ಷೇತ್ರದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ

Kannadaprabha News   | Kannada Prabha
Published : Sep 19, 2025, 04:21 AM IST
rahul gandhi

ಸಾರಾಂಶ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಆಳಂದ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಆರೋಪ ಮಾಡುವ ವೇಳೆ, ತಮ್ಮ ಆಪಾದನೆಗೆ ಪೂರಕವಾಗಿ ಕ್ಷೇತ್ರದ 3 ಮತದಾರರನ್ನು ಹೆಸರಿಸಿ ಹಾಜರುಪಡಿಸಿದರು.

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಆಳಂದ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಆರೋಪ ಮಾಡುವ ವೇಳೆ, ತಮ್ಮ ಆಪಾದನೆಗೆ ಪೂರಕವಾಗಿ ಕ್ಷೇತ್ರದ 3 ಮತದಾರರನ್ನು ಹೆಸರಿಸಿ ಹಾಜರುಪಡಿಸಿದರು. ಈ ಮತದಾರರ ಹೆಸರು ಗೋದಾಬಾಯಿ, ಸೂರ್ಯಕಾಂತ್, ನಾಗರಾಜ್.

ಉದಾಹರಣೆ 1:ಗೋದಾಬಾಯಿ

ರಾಹುಲ್‌ ಗಾಂಧಿ ನೀಡಿದ ಮೊದಲ ಉದಾಹರಣೆಯೆಂದರೆ 63 ವರ್ಷದ ಗೋದಾಬಾಯಿ ಎಂಬ ಆಳಂದ ಕ್ಷೇತ್ರದ ನಿವಾಸಿ. ‘ಗೋದಾಬಾಯಿ’ ಹೆಸರನ್ನು ಬಳಸಿಕೊಂಡು ನಕಲಿ ಲಾಗಿನ್ ಅನ್ನು ರಚಿಸಲಾಗಿತ್ತು ಮತ್ತು ಅವರ 12 ನೆರೆಹೊರೆಯವರನ್ನು ಮತದಾರರ ಪಟ್ಟಿಯಿಂದ ಅಳಿಸಲು ಆ ಮೂಲಕ ಅರ್ಜಿ ಸಲ್ಲಿಸಲಾಗಿತ್ತು ಎಂದು ರಾಹುಲ್‌ ಆರೋಪಿಸಿದರು.

‘ಈ ಬಗ್ಗೆ "ಗೋದಾಬಾಯಿಗೆ ಏನೂ ಗೊತ್ತಿರಲಿಲ್ಲ. ಮೇಲಾಗಿ ಮತದಾರರನ್ನು ಅಳಿಸುವ ಅರ್ಜಿಯಲ್ಲಿ ನಮೂದಿಸಲಾದ ಮೊಬೈಲ್‌ ನಂಬರ್‌ಗಳು ಕರ್ನಾಟಕದದ್ದಲ್ಲ. ಅವು ಎಲ್ಲಿಂದ ಕಾರ್ಯನಿರ್ವಹಿಸುತ್ತಿವೆ?’ ಎಂದು ಪ್ರಶ್ನಿಸಿದರು ಹಾಗೂ ಗೋದಾಬಾಯಿಯ ವಿಡಿಯೋ ಬೈಟ್‌ ಪ್ರದರ್ಶಿಸಿದರು.

ಉದಾಹರಣೆ 2: ಸೂರ್ಯಕಾಂತ್ಗಾಂಧಿಯವರ ‘ಉದಾಹರಣೆ 2’ ಸೂರ್ಯಕಾಂತ್ ಎಂಬ ವ್ಯಕ್ತಿ. ‘ಸೂರ್ಯಕಾಂತ್‌ 14 ನಿಮಿಷಗಳಲ್ಲಿ 12 ಮತದಾರರನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾದರು. ಅವರು ಅಳಿಸಿದ್ದ ಹೆಸರಿನಲ್ಲಿ ಬಬಿತಾ ಎಂಬ ಮತದಾರ್ತಿಯ ಹೆಸರೂ ಇದೆ’ ಎಂದು ಆಗಾ ಹೇಳಿದರು. ತಮ್ಮ ಪ್ರಸ್ತುತಿಯ ಸಮಯದಲ್ಲಿ ಸೂರ್ಯಕಾಂತ್ ಮತ್ತು ಬಬಿತಾ ಚೌಧರಿ ಇಬ್ಬರನ್ನೂ ರಾಹುಲ್‌ ಪ್ರತ್ಯಕ್ಞವಾಗಿ ವೇದಿಕೆಗೆ ಕರೆತಂದರು.

ಉದಾಹರಣೆ 3: ನಾಗರಾಜ್ಇನ್ನೊಂದು ಪ್ರಕರಣದಲ್ಲಿ, ‘ನಾಗರಾಜ್ ಎಂಬ ವ್ಯಕ್ತಿ 36 ಸೆಕೆಂಡುಗಳ ಒಳಗೆ 2 ಡಿಲೀಷನ್‌ (ಅಳಿಸುವಿಕೆ) ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಫಾರ್ಮ್‌ಗಳನ್ನು ಸಲ್ಲಿಸಿದ ಸಮಯ ಅನುಮಾನಾಸ್ಪದವಾಗಿತ್ತು. ಏಕೆಂದರೆ ಆಗ ಸಮಯ ಬೆಳಿಗ್ಗೆ 4.07 ಆಗಿತ್ತು. ಅಲ್ಲದೆ 36 ಸೆಕೆಂಡಲ್ಲಿ ಒಬ್ಬನೇ ವ್ಯಕ್ತಿ 2 ಅರ್ಜಿ ಹಾಕಲು ಸಾಧ್ಯವಿಲ್ಲ. ಏಕೆಂದರೆ ಅರ್ಜಿ ಭರ್ತಿ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಯಾಂತ್ರೀಕೃತವಾಗಿ ಇದನ್ನು ಮಾಡಿರುವ ಸಾಧ್ಯತೆ ಇದೆ’ ಎಂದು ಅವರು ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ