ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮೂಕ ಬಸವ: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

Published : Oct 18, 2022, 11:35 AM IST
ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಮೂಕ ಬಸವ: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಸಾರಾಂಶ

Paresh Mestha case: ಮಾಜಿ ಸಚಿವ ಮತ್ತು ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರನ್ನು ಮೂಕ ಬಸವ ಎಂದು ಕರೆದಿದ್ದಾರೆ. ಪರೇಶ್‌ ಮೇಸ್ತಾ ಪ್ರಕರಣದಲ್ಲಿ ಸಿಬಿಐ ವರದಿ ಬಂದಿದೆ, ಇಷ್ಟಾದರೂ ಅದನ್ನು ರಾಜಕೀಯಕ್ಕೆ ಬಳಸಿಕೊಂಡು ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ. 

ಬೆಂಗಳೂರು: ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಟಿ ನಡೆಸಿ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಅವರು ಪ್ರಣಾಳಿಕೆಯಲ್ಲಿ 600ಕ್ಕೂ ಹೆಚ್ಚು ಭರವಸೆ ನೀಡಿದ್ದರು. ಆದರೆ ಒಂದೇ ಒಂದು ಭರವಸೆಯನ್ನೂ ಈಡೇರಿಸುವ ಕೆಲಸ ಮಾಡಿಲ್ಲ. ನಾವು ಇಲ್ಲಿಯತನಕ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದೇವೆ. ಆದರೆ ಅವರು ಉತ್ತರ ನೀಡುವ ಪ್ರಯತ್ನ ಮಾಡಲಿಲ್ಲ. ನಾವು PayCM ಜೊತೆಗೆ ಈಗ SayCm ಅಭಿಯಾನ ಮಾಡಬೇಕಾಗಿದ ಅಗತ್ಯ ಎದುರಾಗಿದೆ. ಯಾಕಂದ್ರೆ ಸಿಎಂ ಮೂಕ ಬಸವನ ರೀತಿ ಕೂತರೆ ಆಗಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕರಿಗೆ ಅವರು ಉತ್ತರ ಕೊಡಬೇಕಿದೆ ಎಂದ ಪ್ರಿಯಾಂಕ್ ಖರ್ಗೆ, ಪರೇಶ್ ಮೆಸ್ತಾ ಸಾವಿನ ಬಗ್ಗೆ ಸಿಬಿಐ ವರದಿಯ ಕುರಿತು ಮಾತು ಮುಂದುವರೆಸಿದರು.

ಸಾವಿನ ಮೇಲೆ ಬಿಜೆಪಿ ರಾಜಕೀಯ ಮಾಡಲು ಹೇಸುವುದಿಲ್ಲ. ಮಹೇಂದ್ರ ಕುಮಾರ್‌ ಅಂತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರಿದ್ದರು. ಅವರ ಒಂದು ಭಾಷಣ ಮಾಡಿದ್ದರು ಎಂದು ಹಳೇ ಭಾಷಣ ವಿಡಿಯೋವನ್ನು ಮತ್ತೆ ಬಿಡುಗಡೆ ಮಾಡಿದರು. ಬಿಜೆಪಿ ಯುವಕರಿಗೆ ಶಿಕ್ಷಣ ಉದ್ಯೋಗ ನೀಡುವ ಬದಲಾಗಿ ಧರ್ಮ ರಕ್ಷಣೆ, ಗೋರಕ್ಷಣೆ ಬಿರುದು ನೀಡುತ್ತಿದ್ದಾರೆ. ಯುವಕರ ಭವಿಷ್ಯದ ಜೊತೆಗೆ ಬಿಜೆಪಿ ಚೆಲ್ಲಾಟ ಆಡುತ್ತಿದೆ. ಪರೇಶ್ ಮೇಸ್ತಾ ಸಾವಿನ ಬಗ್ಗೆ ಸಿಬಿಐ ವರದಿ ಬಂದಿದೆ. ವರದಿಯಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಬಿಜೆಪಿ ಯುವಕರಿಗೆ ಶಿಕ್ಷಣ - ಉದ್ಯೋಗ ನೀಡುತ್ತಿಲ್ಲ. ಹಿಂದೂಳಿದ ಯುವಕರ ಬ್ರೇನ್ ವಾಶ್‌ ಮಾಡಲಾಗುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ. 

ಇದನ್ನೂ ಓದಿ: ಪರೇಶ್‌ ಮೇಸ್ತಾ ಸಾವು ಕೇಸ್‌: ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ, ಖಾದರ್‌

ಹಿಂದೂ ಧರ್ಮದ ಹೆಸರಲ್ಲಿ ಬ್ರೇನ್ ವಾಶ್‌ ಮಾಡಲಗುತ್ತಿದೆ. ಸಿಬಿಐ ವರದಿ ಬಹಳ ಸ್ಪಷ್ಟವಾಗಿದೆ. ಪರೇಶ್ ಮೆಸ್ತಾ ಸಾವು ಆಕಸ್ಮಿಕವಾಗಿ ಸಂಭವಿಸಿದ್ದು ಎಂದು ಸಿಬಿಐ ವರದಿ ನೀಡಿದೆ. ಯಾವುದೇ ಕೋಮು ಗಲಭೆಯಿಂದ ಆದ ಸಾವಲ್ಲ ಎಂದು ಸ್ಪಷ್ಟಪಡಿಸಿದೆ. 2017ರಲ್ಲಿ ಉ.ಕ ಗುಡ್ಲದಲ್ಲ ಒಂದು ಕೋಮು ಗಲಭೆ ಆಗುತ್ತೆ. ಆದಾದ ಎರಡು ದಿನಕ್ಕೆ ಪರೇಶ್ ಮೆಸ್ತಾ ಸಾವಾಗುತ್ತೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಹಿಂದೂ ಮುಖಂಡರು‌ ಕುಳಿತಿದ್ದರು. 

ಆ ವೇಳೆ ಒಂದು ಅಪಘಾತದ ಸುದ್ದಿ ಅವರಿಗೆ ಗೊತ್ತಾಗುತ್ತೆ. ಅದು ಹಿಂದೂ ಮುಸ್ಲಿಂ ನಡುವೆ ಆದ ಅಪಘಾತ. ಅಪಘಾತ ವಿಚಾರವಾಗಿ ಗುಡ್ಲ ಬಳಿ ಕೋಮು ಸಂಘರ್ಷ ಆಗುತ್ತದೆ. ಅದನ್ನು ಪರೇಶ್‌ ಮೇಸ್ತಾ ಸ್ವಾಭಾವಿಕ ಸಾವಿಗೆ ಲಿಂಕ್‌ ಮಾಡಿ ರಾಜ್ಯಾದ್ಯಂತ ಕೋಮು ದ್ವೇಷ ಬಿತ್ತುವ ಕೆಲಸವಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

ಇದನ್ನೂ ಓದಿ: ಬಿಜೆಪಿ ಮಹಾನ್‌ ಸುಳ್ಳುಗಾರನೆಂದು ಮತ್ತೆ ಸಾಬೀತು: ಸಿದ್ದರಾಮಯ್ಯ

ಯುವಕರು ಬಿಜೆಪಿ ಧರ್ಮದ ರಕ್ಷಣೆಗೆ ಬಲಿಯಾಗಬೇಡಿ. ಬಡವರು ಮಕ್ಕಳು ಮಾತ್ರ ಬಲಿ ಕೊಡೋದು ಅವರು. ಅವರ ಮಕ್ಕಳು ಎಷ್ಟು ಕೇಸರಿ ಶಾಲು ಹಾಕಿ ಹೋರಾಟ ಮಾಡಿದ್ದಾರೆ. ಧರ್ಮದ ರಕ್ಷಣೆ ಅಂತ ಯಾರು ಹೊರಗೆ ಬಂದು ಮಾತನಾಡಿದ್ದಾರೆ. ಬಡವರ ‌ಮಕ್ಕಳು ಮಾತ್ರ ಬೇಕು ಬಲಿ ಕೋಡೊಕೆ ಅವರಿಗೆ ಬೇಕು. ಬಿಜೆಪಿಗರ‌ ಮಾತಿಗೆ ಯುವಕರು ಬಲಿಯಾಗಬೇಡಿ. ನಿಮ್ಮ ಭವಿಷ್ಯ ‌ನಿಮ್ಮ ಕೈಯಲ್ಲಿ ಉಜ್ವಲವಾಗಿದೆ. ಮೊದಲು‌ ಮೆಸ್ತಾ ಕುಟುಂಬಕ್ಕೆ ಬಿಜೆಪಿ ಕ್ಷಮೆಯಾಚನೆ ಮಾಡಬೇಕು. ಧಮ್ ಬಗ್ಗೆ ಬಿಜೆಪಿಗರು ‌ಮಾತನಾಡುತ್ತಾರೆ. ಬಿಜೆಪಿಗೆ ಈಗ ಧಮ್ ಇದೆಯಾ ಈ ಘಟನೆ ಬಗ್ಗೆ ಮಾತನಾಡಲು. ಹದಿನೈದು ದಿನ ನಾವು ಕಾಯುತ್ತೇವೆ. ಬಿಜೆಪಿಗರು ಕ್ಷಮೆ ಕೇಳಬೇಕು. ಆಸ್ತಿ ಹಾನಿ ಮಾಡಿದವರ ಮೇಲೆ ಕೇಸ್ ಆಗಬೇಕು. ಇಲ್ಲದೆ ಹೊದ್ರೆ ನಾವೇ ದೂರು ನೀಡಿ ಬಂಧನಕ್ಕೆ ಒತ್ತಾಯ ‌ಮಾಡ್ತೆವೆ, ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!