ಅವಕಾಶಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚಿಬಿಟ್ಟರು, ಆತ್ಮಕತೆಯಲ್ಲಿ ಸಿದ್ದುಗೆ ಶಾಕ್​ ಕೊಟ್ಟ ಮೋಟಮ್ಮ

By Suvarna NewsFirst Published Jun 12, 2022, 9:42 PM IST
Highlights

* ಮಾಜಿ ಸಚಿವೆ ಮೋಟಮ್ಮ ಅವರು ಬರೆದಿರುವ ಆತ್ಮಕತೆ ಬಿಡುಗಡೆ
* ಬಿ'ದಿರು ನೀನ್ಯಾರಿಗಲ್ಲದವಳು' ಹೆಸರಿನ ಆತ್ಮಕ
* ಸಿದ್ದರಾಮಯ್ಯ ವಿರುದ್ಧ ಮೋಟಮ್ಮ ಅಸಮಾಧಾನ 

ಬೆಂಗಳೂರು, (ಜೂನ್.12): ಮಾಜಿ ಸಚಿವೆ ಮೋಟಮ್ಮ ಅವರು ಬರೆದಿರುವ 'ಬಿದಿರು ನೀನ್ಯಾರಿಗಲ್ಲದವಳು' ಹೆಸರಿನ ಆತ್ಮಕತೆ ಇಂದು ಲೋಕಾರ್ಪಣೆಗೊಂಡಿದೆ. ಆತ್ಮಕತ್ಯೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್​ ನಾಯಕರ ವಿರುದ್ಧ ಮೋಟಮ್ಮ ಅಸಮಾಧಾನ ಹೊರಹಾಕಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಭಾನುವಾರ) ನಡೆದ ಕಾರ್ಯಕ್ರಮದಲ್ಲಿ ಆತ್ಮಕತೆ ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್​ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತ್ಮಕತೆ ಲೋಕಾರ್ಪಣೆಗೊಳಿಸಿದರು.

ಸಿದ್ದರಾಮಯ್ಯ ವಿರುದ್ಧ ಮೋಟಮ್ಮ ಅಸಮಾಧಾನ 
ಆತ್ಮಕತೆಯ 'ಬಿಸಿಲುಗುದುರೆ ಬೆನ್ನೇರಿ' ಎಂಬ ಭಾಗದಲ್ಲಿ ಸಿದ್ದರಾಮಯ್ಯ ವಿರುದ್ಧ ಮೋಟಮ್ಮ ಅಸಮಾಧಾನ ಹೊರಹಾಕಿದ್ದಾರೆ. ನನ್ನನ್ನು ಮಂತ್ರಿ ಮಾಡಬಹುದಿತ್ತು. ಆದರೂ ಮಾಡಲಿಲ್ಲ. ಸಭಾಧ್ಯಕ್ಷೆ ಆಗುವ ಅವಕಾಶವೂ ಇತ್ತು. ಅದನ್ನು ಮಾಡಲಿಲ್ಲ. ಈ ಬಗ್ಗೆ ನನಗೆ ಇನ್ನೂ ಬೇಸರ ಇದೆ ಹೇಳಿದ್ದಾರೆ.

Rajya Sabha Poll ಡೈನಿಂಗ್ ಟೇಬಲ್ ಪಾಲಿಟಿಕ್ಸ್ ಸೋತಿದ್ದು ಎಲ್ಲಿ? ದಾರಿ ತಪ್ಪಿದರಾ ದಳಪತಿಗಳು?

ನಮ್ಮ ನಾಯಕರು ವೇದಿಕೆ ಮೇಲೆ ತುಂಬ ಸ್ನೇಹದಿಂದ ವರ್ತಿಸುತ್ತಾರೆ. ವೇದಿಕೆ ಇಳಿದ ಬಳಿಕ ತುಂಬಾ ವಿಭಿನ್ನವಾಗುತ್ತಾರೆ. ಪಕ್ಷದ ಉನ್ನತಿ ಅವರ ಗಮನದಲ್ಲಿಲ್ಲ, ಅವರು ವೈಯಕ್ತಿಕ ಲಾಭಕ್ಕೆ ಹೆಚ್ಚು ಗಮನ ಕೊಡುತ್ತಾರೆ. ತಾವೇ ಲೀಡರ್ ಆಗಬೇಕು ಎನ್ನುವುದಕ್ಕೆ ಒತ್ತು ಕೊಡುತ್ತಾರೆ. ಇದು ಪಕ್ಷದ ಬೆಳವಣಿಗೆಗೆ ತೊಂದರೆ ಆಗಿದೆ. ಇದರ ಬಗ್ಗೆ ಸೋನಿಯಾ ಗಾಂಧಿಗೆ ದೂರು ನೀಡಿದ್ದಕ್ಕೆ ಈಗಲ್ಟನ್ ರೆಸಾರ್ಟ್​ನಲ್ಲಿ ಸಭೆ ಮಾಡಿದರು. ಪಕ್ಷದಲ್ಲಿ ಅವಕಾಶಗಳಿಗೆ ಕಾದುಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನನಗಿದ್ದ ಎಲ್ಲಾ ಅವಕಾಶಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚಿಬಿಟ್ಟರು ಎಂದು ಸಿದ್ದರಾಮಯ್ಯ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಸಿಎಂ ಇಬ್ರಾಹಿಂಗೆ ಪರಿಷತ್ ಟಿಕೆಟ್ ನೀಡಲ್ಲ ಅಂದ್ರೆ ರಾಜೀನಾಮೆ ನೀಡುತ್ತೇನೆ ಎಂದು ಸೋನಿಯಾ ಗಾಂಧಿಗೆ ರಾಜೀನಾಮೆ ನೀಡಿದ್ದರು. ನನ್ನ ಜೊತೆಗೆ ಬಂದವರಿಗೆ ಟಿಕೆಟ್ ನೀಡಲ್ಲ ಅಂದಮೇಲೆ ನಾನು ಯಾಕೆ ಇರಬೇಕು. ನನ್ನ ಷರತ್ತಿಗೆ ಒಪ್ಪಿನೇ ಪಕ್ಷಕ್ಕೆ ಕರೆದುಕೊಂಡದ್ದು, ನನ್ನ ಮಾತಿಗೆ ಬೆಲೆ ಇಲ್ಲ ಅಂದಮೇಲೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಈ ವೇಳೆ ಪರಿಷತ್ ವಿರೋಧ ಪಕ್ಷದ ನಾಯಕಿಯಾಗಿದ್ದ ನಾನು ಸಮಾಧಾನ ಮಾಡಲು ಪ್ರಯತ್ನಿಸಿದೆ. ಆದರೆ, ನನ್ನ ನಿರ್ಧಾರ ಬದಲಿಸಲ್ಲ ಎಂದಿದ್ದರು. ಕೊನೆಗೆ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎಂದು ಹೇಳಿ ಮೂಲ ಕಾಂಗ್ರೆಸ್​ನವರ ವಿರೋಧ ಕಟ್ಟಿಕೊಂಡಿದ್ದೆ. ಕೊನೆಗೆ ಸಿದ್ದರಾಮಯ್ಯ ಸಿಎಂ ಆದ್ರು. ಆದರೆ, ನನಗೆ ಸಚಿವ ಸ್ಥಾನ ನೀಡದೇ ಮೋಸ ಮಾಡಿದರು. ಕೊನೆಗೆ ಸಭಾಪತಿ ಸ್ಥಾನವೂ ಉಳಿದಿತ್ತು. ಅದನ್ನೂ ಮಾಡಲಿಲ್ಲ ಎಂದು ಮೋಟಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕೈಗೆಟುಕದ ಮಂತ್ರಿಗಿರಿ ಭಾಗದಲ್ಲಿ ಖರ್ಗೆ ವಿರುದ್ಧ ಮೋಟಮ್ಮ ಬೇಸರ ಹೊರಹಾಕಿದ್ದಾರೆ. ನನಗೆ ಮಂತ್ರಿಗಿರಿ ತಪ್ಪಿದಾಗ ಖರ್ಗೆ ಅವರು ಮಾತಾಡಲಿಲ್ಲ. ಹೊರಗಿನಿಂದ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದಕ್ಕೆ ನನ್ನ ಮೇಲೆ ಕೋಪ ಇತ್ತೇನೋ? ಎಂದಿದ್ದಾರೆ. ನಮ್ಮ ಸಮುದಾಯದವರೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನನಗೆ ಯಾವುದೇ ಸ್ಥಾನಮಾನ ನೀಡಲಿಲ್ಲ ನ್ಯಾಯ ಒದಗಿಸಲಿಲ್ಲ. ನಾನು ರಾಜಕೀಯವಾಗಿ ಮೂಲೆಗುಂಪಾಗಬೇಕಾಯಿತು ಎಂದು ಪರಮೇಶ್ವರ್​ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. 

click me!