ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.ದೋಸ್ತಿ ಸರ್ಕಾರದ ಸದ್ಯದ ಸ್ಥಿತಿಗತಿಯನ್ನು ವಿವರಿಸಿದ್ದಲ್ಲೆ ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಮಂಗಳೂರು[ಜ.24] ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದಿದ್ದೇ ಪಕ್ಷವನ್ನು ಮುಗಿಸಲಿಕ್ಕೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಇವತ್ತು ಈ ಸರ್ಕಾರ ಉಳಿಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಣ. ಇನ್ನು ದೇವೇಗೌಡರನ್ನು ಯಾವತ್ತೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಅವರು ನನ್ನನ್ನು ಸುಮ್ಮನೆ ಗುರುಗಳೇ ಅನ್ನಲ್ಲ. ಸರ್ಕಾರದ ಉಳಿವಿನಲ್ಲಿ ದೇವೆಗೌಡರ ಪಾತ್ರ ಇದೆ ಅನ್ನೋದ್ರಲ್ಲಿ ಡೌಟೇ ಇಲ್ಲ ಎಂದು ಹೇಳಿದರು.
ಇಂದಿರಾ ಮತ್ತು ಪ್ರಿಯಾಂಕಾ: ಕಾಂಗ್ರೆಸ್‌ಗೆ ಇದೆಲ್ಲಾ ಬೇಕಾ?
ಪಕ್ಷ ಲೋಕಸಭೆಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಪ್ರಚಾರ ಮಾಡುತ್ತೇನೆ. ಐವನ್ ಡಿಸೋಜಾ ಅವರಿಗೆ ಟಿಕೆಟ್ ಕೊಡಲ್ಲ ಅನ್ನೋದು ಜಗ್ತತಿಗೆ ಗೊತ್ತಿದೆ. ಉಗ್ರಪ್ಪನಂಥವರಿಗೆ ಟಿಕೆಟ್ ತೆಗೆಸಿಕೊಡುವ ಶಕ್ತಿ ಐವನ್ ಡಿಸೋಜಾಗೆ ಜನ್ಮದಲ್ಲಿ ಬರಲ್ಲ. ಉಗ್ರಪ್ಪನವರನ್ನ ನಾನು ನೋಡಿದ್ದೇನೆ, ಉಗ್ರಪ್ಪ ನನ್ನ ಶಿಷ್ಯ. ಐವನ್ ನನ್ನ ಶಿಷ್ಯ ಅಲ್ಲ, ನನ್ನ ಶಿಷ್ಯ ಆಗೋದು ಬೇಡ. ಬಿ.ಕೆ.ಹರಿಪ್ರಸಾದ್ ಗೆ ಎಂಪಿ ಟಿಕೆಟ್ ಗೆ ಜನಾರ್ದನ ಪೂಜಾರಿ ರೆಕಮಂಡೇಶನ್ ಬೇಡ ಅವರಿಗೆ ಅಲ್ಲಿ ಅವರದ್ದೇ ಆದ ಸ್ಥಾನಮಾನ ಇದೆ, ಎಐಸಿಸಿಯಲ್ಲಿ ಅವರು ಇದ್ದಾರೆ ಎಂದು ಹಲವು ನಾಯಕರ ಹೆಸರು ಉಲ್ಲೇಖ ಮಾಡಿದರು.
ರಮಾನಾಥ್ ರೈ ಒಂದು ತಪ್ಪು ಮಾಡಿದ್ದಾರೆ, ನನಗೆ ಮುಸ್ಲಿಮರ ಓಟು ಬೇಕು ಅಂತ. ಓಟಿಗೆ ನಿಲ್ಲೋರು ಎಲ್ಲರ ಓಟು ಕೇಳಬೇಕು, ಇದ್ರಲ್ಲೀ ಆ ಮನುಷ್ಯ ತಪ್ಪು ಮಾಡಿದ್ದಾರೆ. ಎಸ್ಪಿಯನ್ನು ಕೂಡ ಬೈದಿದ್ದಾರೆ, ಇದೆಲ್ಲಾ ರಮಾನಾಥ್ ರೈಗೆ ಶನಿಯ ಕಾಟ ಇದೆ ಎಣದು ಹೇಳಿದರು.
ಜನಾರ್ದನ ಪೂಜಾರಿಯನ್ನು ಎನ್‌ಕೌಂಟರಲ್ಲಿ ಕೊಲ್ಲಬೇಕು: ಆಡಿಯೋ ವೈರಲ್
ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣ ಪ್ರವೇಶ ವಿಚಾರದ ಬಗ್ಗೆಯೂ ಮಾತನಾಡಿದ ಪೂಜಾರಿ, ನೆಹರೂ ಕುಟುಂಬದಲ್ಲಿ ಪ್ರಧಾನ ಮಂತ್ರಿ ಆದವರು ಇದ್ದಾರೆ. ಇನ್ನೊಬ್ಬ ವ್ಯಕ್ತಿ ಇದಾರೆ, ಅವರು ಬಂದ್ರೆ ಈ ದೇಶ ಜಗತ್ತು ಏನಾಗುತ್ತೆ ನೀವೇ ನೋಡಿ. ನಾನು ಯಾರು? ಏನು ಅಂಥ ಹೇಳುವುದಿಲ್ಲ. ಕಾಲವೇ ಎಲ್ಲವನ್ನು ಹೇಳುತ್ತದೆ ಎಂದರು.
ಪ್ರಿಯಾಂಕ ಎಂಟ್ರಿಯಿಂದ ಮೋದಿಗೆ ನಿದ್ದೆ ಬರೋಕೆ ಸಾಧ್ಯವೇ ಇಲ್ಲ. ನಿನ್ನೆ ರಾತ್ರಿ ಮಾತನಾಡುವಾಗ ಮೋದಿ ಕೋಪದಿಂದ ನಡುಗುತ್ತಿದ್ದರು ಎಂದ ಪೂಜಾರಿ ನನಗೆ ಟಿಕೆಟ್ ಕೊಟ್ಟರೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಗ್ಯಾರಂಟಿ. ನಾನು ಟಿಕೆಟ್ ವಿಚಾರದಲ್ಲಿ ದೆಹಲಿಗೆ ಹೋಗಿ ಕೇಳ್ತೇನೆ. ಪ್ರಿಯಾಂಕ, ಸೋನಿಯಾ, ರಾಹುಲ್ ಭೇಟಿಗೆ ಅವಕಾಶ ಕೇಳ್ತೇನೆ. ಕೊಟ್ಟರೆ ಭೇಟಿಯಾಗಿ ಟಿಕೆಟ್ ಕೇಳ್ತೇನೆ, ಇಲ್ಲಾಂದ್ರೆ ವಾಪಾಸ್ ಬರುತ್ತೇನೆ ಎಂದರು.