ಸೀಟು ಸಿಕ್ಕರೆ ಮಂಡ್ಯದಿಂದ ನಿಲ್ಲುತ್ತಿರಾ? ನಿಖಿಲ್ ಕೊಟ್ಟ ಖಡಕ್ ಉತ್ತರ

Published : Jan 23, 2019, 11:24 PM ISTUpdated : Jan 23, 2019, 11:54 PM IST
ಸೀಟು ಸಿಕ್ಕರೆ ಮಂಡ್ಯದಿಂದ ನಿಲ್ಲುತ್ತಿರಾ? ನಿಖಿಲ್ ಕೊಟ್ಟ ಖಡಕ್ ಉತ್ತರ

ಸಾರಾಂಶ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಅಖಾಡ ನಿಧಾನವಾಗಿ ಸಿದ್ಧವಾಗಲು ಆರಂಭಿಸಿದೆ. ಮಾಧ್ಯಮದವರು ಸಹ ಈ ಬಗೆಯ ಪ್ರಶ್ನೆಗಳನ್ನೇ ಕೇಳುವುದು ಸಾಮಾನ್ಯ. ಅಂಥದ್ದೆ ಒಂದು ಉದಾಹರಣೆಗೆ ಇಲ್ಲಿ ಸಿಕ್ಕ ಉತ್ತರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. 

ಮಂಡ್ಯ[ಜ.23]  ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಇಟ್ಟುಕೊಳ್ಳುತ್ತದೆಯೋ ಅಥವಾ ಜೆಡಿಎಸ್‌ಗೆ ಬಿಟ್ಟುಕೊಡುತ್ತದೆಯೋ ಎಂಬುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ.  ಅಭಿಷೇಕ್ ಅಂಬರೀಶ್, ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಹಲವು ಸಾರಿ ಕೇಳಿಬಂದಿದೆ. ಇದೆ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮದವರು ನಿಖಿಲ್ ಬಳಿ ಪ್ರಶ್ನೆ ಮಾಡಿದ್ದರು.

ಮಂಡ್ಯದಲ್ಲಿ ತಮ್ಮ ಸಿನಿಮಾ ‘ಸೀತಾರಾಮ ಕಲ್ಯಾಣ’ ದ ಶೂಟಿಂಗ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಇದ್ದರು. ಈ ವೇಳೆ ಚಿತ್ರಕ್ಕೆ ಸಂಬಂಧಿಸಿ ಮಾಧ್ಯಮ ಗೋಷ್ಠಿ ಏರ್ಪಡಿಸಿದ್ದರು. ನಿಖಿಲ್ ಗೆ ಮಂಡ್ಯದಲ್ಲಿ ಸೀಟ್ ಸಿಕ್ಕಿದ್ರೆ ರಾಜಕೀಯಕ್ಕೆ ಬರ್ತಿರಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಿಖಿಲ್ ‘ಸಿನಿಮಾನ ಸಿನಿಮಾ ರೀತಿ ನೋಡಿ‌ ಅದನ್ನ ಪೋಲಿಟಿಸೈಜ್ ಮಾಡೋದು ಬೇಡ’ ಎಂಬ ಉತ್ತರ ನೀಡಿದರು.

ಅಂಬರೀಶ್ ಕುಟುಂಬಕ್ಕಿಲ್ಲ ಮಂಡ್ಯ ಟಿಕೆಟ್

ಒಟ್ಟಿನಲ್ಲಿ ರಾಜಕಾರಣ ಬೇರೆ, ಸಿನಿಮಾ ಬೇರೆ ಎಂದು ನಿಖಿಲ್ ಈ ಮೂಲಕ ಸ್ಪಷ್ಟಪಡಿಸಿದರು.  ಸಿನಿಮಾವನ್ನು ಸಿನಿಮಾ  ಎಂದೇ ನೋಡಿ ಎನ್ನುವ ಮೂಲಕ ರಾಜಕಾರಣದ ಪ್ರಶ್ನೆ ಕೇಳಬೇಡಿ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ