'ಅನುಭವವಿಲ್ಲದ ಸಚಿವ, ಹಠಮಾರಿ ಸಿಎಂ....ಈಶ್ವರಪ್ಪ ಖಾತೆಯ ಹಣ ಕಾಣತ್ತೆ, ಸಮಸ್ಯೆ ಗೊತ್ತಾಗಲ್ವಾ?'

By Suvarna NewsFirst Published Apr 12, 2021, 5:55 PM IST
Highlights

ಸಾರಿಗೆ ನೌಕರರ ಧರಣಿ ವಿಚಾರವಾಗಿ ಕಾಂಗ್ರೆಸ್ ನಾಯಕರಾದ ಎಚ್‌.ಎಂ.ರೇವಣ್ಣ ಹಾಗೂ ರಾಮಲಿಂಗರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿದ್ದು, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, (ಏ.12): ಸಿಎಂಗೆ ಈಶ್ವರಪ್ಪ ನವರ ಖಾತೆಯಲ್ಲಿರುವ ಹಣ ಕಾಣತ್ತೆ, ಆದರೆ ಈ ಸಮಸ್ಯೆ ಬಗೆಹರಿಸುವುದು ಗೊತ್ತಾಗಲ್ವಾ? ಎಂದು ಮಾಜಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹರಿಹಾಯ್ದಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರನ್ನು ನಡೆಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ.
ಮಾನಸಿಕವಾಗಿ ಬಿಜೆಪಿಯವರಿಗೆ ಇಂಥ ಸಂಸ್ಥೆ ಇರಬಾರದು ಎನ್ನುವುದೇ ಚಿಂತನೆ. ಖಾಸಗೀಕರಣ ಮಾಡುವ ದಿಕ್ಕಿನಲ್ಲಿ ಇವರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ಸ್ಯಾಲರಿ ಬೇಕೋ, ವಜಾ ಆಗ್ತೀರೋ..? ಮುಷ್ಕರಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಸರ್ಕಾರ

ಅನುಭವ ಇಲ್ಲದ ಸಾರಿಗೆ ಸಚಿವ, ಹಠಮಾರಿ ಸಿಎಂ ಇಂದಾಗಿ ಇಂಥ ತೊಂದರೆ ಬಂದಿದೆ ಎಂದ ಅವರು ಸಂಧಾನದ ಮೂಲಕ ಬಗೆಹರಿಸುವುದು ಅವಶ್ಯಕತೆ ಇದೆ. ಬೇರೆ ಬೇರೆ ಮಾರ್ಗದ ಮೂಲಕ ಬೆದರಿಸುವ ಬದಲು ಸಂಧಾನ ಮಾಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಸರಿಗೆ ಸಚಿವ ರಾಮಲಿಂಗಾರೆಡ್ಡಿ, ಶೇ.40ರಷ್ಟು ಬಸ್ಸುಗಳು ನಷ್ಟದಲ್ಲೇ ಓಡುತ್ತವೆ, ಶೇ. 40ರಷ್ಟು ಬಸ್‌ಗಳು ನೋ ಪ್ರಾಫಿಟ್‌'- ನೋ ಲಾಸ್‌ನಲ್ಲಿ ಓಡುತ್ತವೆ ಶೇ.20ರಷ್ಟು ಬಸ್ಸುಗಳು ಮಾತ್ರ ಲಾಂಗ್ ರೂಟ್‌ನಲ್ಲಿ ಲಾಭ ತಂದುಕೊಡುತ್ತವೆ. ಒಟ್ಟಾರೆ ನಷ್ಟ ಆದರೂ ಕೂಡ ಜನರಿಗಾಗಿ ಬಸ್ ಓಡಿಸಬೇಕಾಗುತ್ತದೆ. ಎಂದರು.

click me!