'ಮನ್ ಕಿ‌ ಬಾತ್ ಸಾಕು ಮೋದಿಯವರೇ ಕಾಮ್ ಕಿ‌ ಬಾತ್ ಕರೋ'

By Web DeskFirst Published Feb 27, 2019, 4:10 PM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೇಲೆ ವಾಗ್ದಾಳಿ ಮಾಡಿದ್ದಾರೆ.

ವಿಜಯಪುರ(ಫೆ.27)  ವಿಜಯಪುರದ ಪರಿವರ್ತನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೋಮುವಾದಿ ಭಾರತೀಯ ಜನತಾ ಪಾರ್ಟಿಗೆ ಸೋಲುಣಿಸಲು ನಾಂದಿ ಹಾಡಲಾಗಿದೆ. ಬಿಜೆಪಿ‌ ಅಧಿಕಾರಕ್ಕೆ ಬಂದ ಮೇಲೆ ಯಾವ ವರ್ಗದ ಜನರೂ ಕೂಡಾ ನೆಮ್ಮದಿಯಿಂದ ಇಲ್ಲ. ದಲಿತರು, ಮುಸ್ಲಿಮರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಲ್ಲಿಯವರೆಗಿನ ಪ್ರಧಾನಿಗಳಲ್ಲಿ ಯಾರಾದರೂ ಸುಳ್ಳುಗಾರ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ. ಮೋದಿ ಹೊದಲೆಲ್ಲ‌‌ ಸುಳ್ಳು‌ ಹೇಳುತ್ತಿದ್ದಾರೆ. ಮೋದಿ ಹಾಗೂ ಮಹಾತ್ಮ ಗಾಂಧಿ ಗುಜರಾತ್ ನಲ್ಲಿ‌ ಹುಟ್ಟಿದ್ದು. ಅವರು‌ ನಡೆದು ಬಂದ ದಾರಿ ನೋಡಿ ಮೋದಿಯ ದಾರಿ ನೋಡಿ ಎಂದರು.

ಲೋಕಸಭೆಗೆ ಸ್ಪರ್ಧೆ ಇಲ್ಲ, ರಾಜ್ಯ ರಾಜಕಾರಣದಲ್ಲೇ ಇರುವೆ: ಸಿದ್ದರಾಮಯ್ಯ

ನಾವು ನುಡಿದಂತೆ ನಡೆದಿದ್ದೇವೆ  ಮೋದಿ ಸರ್ಕಾರ ಹೇಳಿದ್ದೇನು?, ನಡೆದುಕೊಂಡಿದ್ದು ಹೇಗೆ ಎಂದು‌ ಗಮನಿಸಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಮಾಲೀಕರು. ನಾವು ಕಳೆದ ಬಾರಿ ಚುನಾವಣೆಯಲ್ಲಿ 165  ಭರವಸೆಗಳನ್ನು ನೀಡಿದ್ದೇವು.   ಇವೆಲ್ಲವುಗಳನ್ನು ನಾವು ಈಡೇರಿಸಿದ್ದೇವೆ.

ನಾನು ಮುಖ್ಯಮಂತ್ರಿ ಆದ ಅರ್ಧ ಗಂಟೆಯಲ್ಲಿ‌ 6 ಕಾರ್ಯಕ್ರಮ ಈಡೇರಿಸಿದ್ದೆ. ಸಬ್ ಕಾತ್ ಸಾಥ್ ಸಬ್ ಕಾ ವಿಕಾಸ ಎಂದು‌ಹೇಳುತ್ತಾ ಮೋದಿ‌ ಹೊರಟಿದ್ದಾರೆ. ಸಬ್ ಕಾ ಸಾಥ್ ಎಂದರೆ ಮೇಲ್ವರ್ಗದ ಜನ, ಉದ್ಯಮಿಗಳು, ಬಂಡವಾಳ ಶಾಹಿಗಳು. ಇಂದು ಮೋದಿ‌ ಮಾತೆದ್ದರೆ ಅದು ಮನ್ ಕಿ ಬಾತ್, ಮನ್ ಕಿ ಬಾತ್ ಎನ್ನುತ್ತಾರೆ ಎಂದರು.

'ತಂತ್ರ'ರಾಮಯ್ಯನ ನಿಗೂಢ ಆಟಕ್ಕೆ ಬೆಚ್ಚಿದ ದಳಪತಿ..!

ಮನ್ ಕಿ‌ ಬಾತ್ ಸಾಕು ಮೋದಿಯವರೇ ಕಾಮ್ ಕಿ‌ಬಾತ್ ಕರೋ. ಅಚ್ಛೆ ದಿನ‌‌‌ ಆಯೇಗಾ ಎನ್ನುತ್ತಿದ್ದೀರಿ? ಯಾರಿಗೆ ಬಂದಿದೆ ಅಚ್ಛೆದಿನ. 2014 ರಲ್ಲಿ ನಾಲ್ಕು ನೂರು ಇದ್ದು ಸಿಲಿಂಡರ್ ಈಗ ಸಾವಿರ ಆಗಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ದೂರಿದರು.

 ವಿಜಯಪುರದ ಜನ ಆ ಜಿಗಜಿಣಗಿಯನ್ನು ಯಾಕೆ ಗೆಲ್ಲಸತೀರಾ ಗೊತ್ತಾಗುತ್ತಿಲ್ಲ. ಆತನ ಕೊಡುಗೆ ಏನಾದ್ರು ಇದೆಯಾ ಜಿಲ್ಲೆಗೆ, ಆತ ಅಣ್ಣ, ಮಾವ, ಕಾಕಾ ಅಂದು ಕೊಂಡೇ ಕಾಲ ಕಳೆದಿದ್ದಾರೆ. ಅಣ್ಣ, ಮಾವಾ, ಕಾಕಾ ಮತಿಗೆಲ್ಲ ಮರಳಾಗಬೇಡಿ. ಈ ಬಾರಿ ನೋ ಬಿಜೆಪಿ ಬರೀ ಕಾಂಗ್ರೆಸ್, ಬರೀ ಕಾಂಗ್ರೆಸ್ ಎಂದು ಸಿದ್ದಾರಮಯ್ಯ ಘೋಷಣೆ ಮಾಡಿದರು.

ಮೋದಿ ಅವರು ಕಪ್ಪು ಹಣ ತರುತ್ತೇವೆ, ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು ಎಲ್ಲಿ ‌ಬಂದಿದೆ. ಪ್ರತಿ‌ವರ್ಷ 2 ಕೋಟಿ‌ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು, ಬರೀ 72 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ  ಯಾರ ಬಳಿ ಕಪ್ಪು ಹಣ ಇತ್ತೋ ಅವರು ವೈಟ್ ಮನಿ ಮಾಡಿಕೊಂಡರು. ಮೋದಿ‌ ಹೇಳಿದ್ದ ಒಂದೇ ಒಂದು‌ ಕೆಲಸ ಮಾಡಿಲ್ಲ. ಇವತ್ತು ರೈತರ ಸಾಲ ಮನ್ನಾ ಮಾಡಿದ್ದರೆ, ಅದು ನಮ್ಮ‌ ಸರ್ಕಾರ. ನೀರವ ಮೋದಿ, ಲಲಿತ ಮೋದಿ, ಮಲ್ಯ ಅಂತವರ ಸಾಲ ಮನ್ನಾ ಮಾಡುತ್ತಾರೆ. ಮಾತೆತ್ತಿದರೆ ನಾನು ಚೌಕಿದಾರ್, ನಾನು ಚೌಕಿದಾರ್ ಎನ್ನುತ್ತೀರಾ. ನೀವು ಚೌಕಿದಾರ್ ಅಲ್ಲ, ಭ್ರಷ್ಟಾಚಾರದ ಭಾಗಿದಾರ್  ಎಂದರು.

ನರೇಂದ್ರ ಮೋದಿ‌ ಐದು‌ ವರ್ಷದ ಸಾಧನೆಗಳ ಕುರಿತು ಎಲ್ಲಿಯೂ ಮಾತಾನಾಡಲ್ಲ. ಯಾಕೆಂದರೆ ಅವರಿಗೆ ಮಾತನಾಡಲು ಏನು‌ ಇಲ್ಲ.ದು ಯಡಿಯೂರಪ್ಪ ‌ವಿರೋಧ‌ ಪಕ್ಷದ ನಾಯಕನಾಗಿ ಅವರ ಕೆಲಸ ಮಾಡಿಲ್ಲ. ಮಿಸ್ಟರ್ ಯಡಿಯೂರಪ್ಪ ಕೋಟ್ಯಂತರ ಹಣ ಕೊಟ್ಟು ನಮ್ಮ ಶಾಸಕರನ್ನು ಕೊಂಡು ಕೊಳ್ಳಲು ನೋಡಿದ್ದರು. ಯಡಿಯೂರಪ್ಪ ನವರಿಗೆ ಹಣ ಸರಬರಾಜು ಮಾಡಿದ್ದು ಮಿಸ್ಟರ್ ಚೌಕಿದಾರ್, ಹಾಗೂ ಶಾ.

ಈ ಅಮಿತಾ ಶಾ ಸೇರಿದಂತೆ ಹಲವು ಬಿಜೆಪಿಗರು ಜೈಲಿಗೆ ಹೋಗಿ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿ ಬದಲಾವಣೆ ಆಗಲೇಬೇಕು. ನರೇಂದ್ರ ಮೋದಿ‌ ಹೋಗಲೇ ಬೇಕು, ಬಿಜೆಪಿ ತೊಲಗಲೇ ಬೇಕು. ರಾಹುಲ್ ಗಾಂಧಿ ಪ್ರಧಾನಿಯಾಗಲೇ ಬೇಕು ಎಂದು ಹೇಳಿದರು.


 

click me!