ಮಂಡ್ಯದಿಂದ ಸುಮಲತಾ ಅಂಬರೀಶ್ ಗೆ ಟಿಕೆಟ್ ನೀಡಿಕೆ ವಿಚಾರದ ಬಗ್ಗೆ ಮತ್ತೆ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಸುಮಲತಾಗೆ ಟಿಕೆಟ್ ಇಲ್ಲ ಎಂದು ಮತ್ತೊಮ್ಮೆ ಸಡ್ಪಷ್ಟಪಡಿಸಿದ್ದಾರೆ.
ಬಳ್ಳಾರಿ[ಫೆ. 26] ದೋಸ್ತಿ ಪಕ್ಷಗಳ ನಡುವೆ ಟಿಕೆಟ್ ಹಂಚಿಕೆ ಗೊಂದಲ ಆರಂಭವಾಗಿದ್ದೆ ಮಂಡ್ಯ ಕ್ಷೇತ್ರದಿಂದ. ಮಂಡ್ಯದಿಂದ ಸುಮಲತಾ ಅಂಬರೀಶ್ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂಬ ಮಾತು ಕೇಳಿ ಬಂದಿದ್ದವು.
ಮಂಡ್ಯದಿಂದ ಸ್ಪರ್ಧೆ ಘೋಷಿಸಿದ ಸುಮಲತಾ ಅಂಬರೀಶ್
ಸುಮಲತಾಗೆ ಮಂಡ್ಯ ಟಿಕೆಟ್ ಇಲ್ಲ. ಅವರು ನಮ್ಮ ರಾಜ್ಯ ನಾಯಕರ ಜತೆ ಮಾತನಾಡಲಿ. ಮಂಡ್ಯ ಲೋಕಸಭೆಯನ್ನು ಉಪಚುನಾವಣೆ ಯಲ್ಲಿ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದೇವೆ ಎಂದರು.
ಸುಮಲತಾ ಪಕ್ಷದ ವೇದಿಕೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. ರಾಜಕಾರಣಕ್ಕೆ ನಬಂದಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಮಂಡ್ಯ ಸೀಟು ಸಮರ ತಾರಕಕ್ಕೆ; ಜೆಡಿಎಸ್‌ಗೆ ಅಂಬೀ ಫ್ಯಾನ್ಸ್ ಸವಾಲ್!