ವಿವಾದಾತ್ಮಕ ಹೇಳಿಕೆ ನೀಡಲು ಯತ್ನಾಳ್ ಅವರಿಗೆ ಬಿಜೆಪಿಯವರು ತರಬೇತಿ ನೀಡಿದಂತಿದೆ. ಯತ್ನಾಳ್ ಪದೇ ಪದೇ ಅಮಿತ್ ಶಾ ಅವರನ್ನು ನೋಡಿಕೊಂಡೇ ವಿಷದ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ನೋಡಿಯೇ ಆ ಪದ ನೆನಪಾಗಿರಬಹುದು ಎಂದು ಹೇಳಿದರು. ಬಿಜೆಪಿಯವರ ಹೇಳಿಕೆಗಳೇ ವಿಷ ಕಾರುವಂತಿರುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಹಳ್ಳಿ ಭಾಷೆಯಲ್ಲಿ ಹೇಳಿದ್ದಾರೆ: ಬಿ.ಕೆ.ಹರಿಪ್ರಸಾದ್
ಬೆಂಗಳೂರು(ಏ.29): ‘ಬಿಜೆಪಿಯವರ ಹುಟ್ಟುಗುಣವೇ ವಿಷ ಕಾರುವುದು. ಕೆ.ಎಸ್.ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಅಷ್ಟೇಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಗುಣವೇ ವಿಷ ಕಾರುವುದು’ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ವಿಷ ಕನ್ಯೆ ಎಂಬ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ವಿವಾದಾತ್ಮಕ ಹೇಳಿಕೆ ನೀಡಲು ಯತ್ನಾಳ್ ಅವರಿಗೆ ಬಿಜೆಪಿಯವರು ತರಬೇತಿ ನೀಡಿದಂತಿದೆ. ಯತ್ನಾಳ್ ಪದೇ ಪದೇ ಅಮಿತ್ ಶಾ ಅವರನ್ನು ನೋಡಿಕೊಂಡೇ ವಿಷದ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ನೋಡಿಯೇ ಆ ಪದ ನೆನಪಾಗಿರಬಹುದು ಎಂದು ಹೇಳಿದರು. ಬಿಜೆಪಿಯವರ ಹೇಳಿಕೆಗಳೇ ವಿಷ ಕಾರುವಂತಿರುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಹಳ್ಳಿ ಭಾಷೆಯಲ್ಲಿ ಹೇಳಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಎರಡೂ ಎಂಜಿನ್ ಫೇಲ್: ಎಂ.ಬಿ.ಪಾಟೀಲ ವಾಗ್ದಾಳಿ
ಅಮಿತ್ ಶಾ ಅವರು ರಾಜ್ಯದಲ್ಲಿ ದೊಂಬಿ ಗಲಾಟೆ ಮಾಡಿಸಿ ಚುನಾವಣೆ ಗೆಲ್ಲಲು ಪ್ಲ್ಯಾನ್ ಮಾಡಿದ್ದಾರೆ. ಈ ಬಗ್ಗೆ ಯಾರೂ ಮಾತನಾಡಲ್ಲ. ಸ್ವತಃ 27 ಗಂಭೀರ ಪ್ರಕರಣ ಎದುರಿಸುತ್ತಿದ್ದ ಯೋಗಿ ಆದಿತ್ಯಾನಾಥ್ ಅವರ ಸರ್ಕಾರದ ಮಾದರಿ ಅನುಷ್ಠಾನಗೊಳಿಸುತ್ತೇವೆ ಎನ್ನುತ್ತಾರೆ. ಉತ್ತರ ಪ್ರದೇಶ ಮಾದರಿ ಮಾಡುವುದು ಬೇಕಿಲ್ಲ. ನಮ್ಮ ಕರ್ನಾಟಕದ ಮಾಡೆಲ್ ಬೇಕಿದ್ದರೆ ಅವರು ಮಾಡಿಕೊಳ್ಳಲಿ ಎಂದರು.