ಸಿದ್ದರಾಮಯ್ಯಗೆ ಶಾಕ್ ಕೊಟ್ಟ ಕಾಂಗ್ರೆಸ್ ಶಾಸಕನ ರಾಜೀನಾಮೆ ಮಾತು

By Web DeskFirst Published Nov 30, 2018, 4:58 PM IST
Highlights

ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ​ ಬೆಳ​ವ​ಣಿ​ಗೆಗಳು ಗರಿಗೆದರಿದ್ದು, ಕಾಂಗ್ರೆಸ್ ಶಾಸಕರೊಬ್ಬರು ಬಾಯಲ್ಲಿ ರಾಜೀನಾಮೆ ಮಾತು ಕೇಳಿಬಂದಿದೆ. ಇದ್ರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್  ಮೈತ್ರಿ ಸರ್ಕಾರವನ್ನ  ಮತ್ತೊಮ್ಮೆ ತಲ್ಲ​ಣ​ಗೊ​ಳಿ​ಸಿದೆ. 

ಬೆಂಗಳೂರು, [ನ.30]:  ಸಚಿವ ಸಂಪುಟ ವಿಸ್ತ​ರಣೆ ವಿಳಂಬ ಹಾಗೂ ಮೈತ್ರಿ ಸರ್ಕಾ​ರ​ದಲ್ಲಿ ಜೆಡಿ​ಎಸ್‌ ಅಧಿ​ಪ​ತ್ಯಕ್ಕೆ ಬೇಸರಗೊಂಡಿರುವ ಕಾಂಗ್ರೆಸ್‌ ಶಾಸಕರ ಅತೃಪ್ತಿ ಭುಗಿಲೆದ್ದಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ನಾಯಕರಿಗೆ ನೆಮ್ಮದಿಯಿಲ್ಲ. ಕಾಂಗ್ರೆಸ್ ನ ಅಭಿಪ್ರಾಯಗಳಿಗೆ ಸರ್ಕಾರದಲ್ಲಿ ಮನ್ನಣೆಯಿಲ್ಲ ಎನ್ನುವ ಕೆಲ ನಾಯಕರ ಆಕ್ರೋಶದ ಕಟ್ಟೆ ಹೊಡೆದಿದೆ.

ಭುಗಿಲೆದ್ದ ಅತೃಪ್ತಿ: ರಮೇಶ್ ಜಾರಕಿಹೊಳಿ ಮನೆಗೆ ಬಿಜೆಪಿ ಶಾಸಕರ ದಂಡು

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್,  ಸಂಪುಟ ವಿಸ್ತರಣೆ ವಿಳಂಬ ಮತ್ತು ತಮ್ಮ ಕ್ಷೇತ್ರದ ಕೆಲಸಗಳಾಗದಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಶಾಸಕನಾಗಿ ನಾನು ಈ ಸರ್ಕಾರಕ್ಕೆ ಏಕೆ ಬೆಂಬಲಿಸಬೇಕು. ಜೆಡಿಎಸ್ ಜೊತೆ ಮೈತ್ರಿಯಿಂದ ನನಗೊಬ್ಬನಿಗೆ ಅಲ್ಲ ಕಾಂಗ್ರೆಸ್ ಶಾಸಕರಿಗೆ ಯಾವ ಕೆಲಸಗಳು ಆಗ್ತಿಲ್ಲ. 

ರಾಜ್ಯ ಕಾಂಗ್ರೆಸ್‌ ಅತೃಪ್ತಿ ಸ್ಫೋಟ?: ಮುಂಬೈಗೆ ಹೊರಟ 10 ಶಾಸಕರು!

ಇನ್ನು ಮಂತ್ರಿ ಪದವಿ ಸಿಕ್ರೆ ಒಂದಿಷ್ಟು ಕೆಲಸ ಮಾಡಿಸಿಕೊಳ್ಳಬಹುದು ಅಂದ್ರೆ ಸಂಪುಟ ವಿಸ್ತರಣೆಯೂ ಆಗ್ತಿಲ್ಲ. ಹೀಗೆ ಮುಂದುವರಿದ್ರೆ ನಾನು ರಾಜೀನಾಮೆ ಕೊಟ್ಟು ಬಿಡ್ತೇನೆ ಎಂದು ಹೇಳುವ ಮೂಲಕ ಸುಧಾಕರ್ ಅವರು ಹೈಕಮಾಂಡ್ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಸಿದ್ದ ಶಾಂತಿ ಪಾಠಕ್ಕೆ ಮುಂದಾಗಿದ್ದು, ಮಾರ್ಚ್ ತಿಂಗಳ ವರೆಗೆ ಸುಮ್ಮನಿರು . ಲೋಕಸಭೆ ಚುನಾವಣೆ ಮುಗಿಯಲಿ ಎಂದು ಸಮಧಾನ ಪಡಿಸಲು ಪ್ರಯತ್ನಿಸಿದರು.

ಆದರೆ ಇದಕ್ಕೆ ಕ್ಯಾರೆ ಎನ್ನದ ಸುಧಾಕರ್, ಅಲ್ಲಿಯ ವರೆಗೂ ಕಾಯಲ್ಲ ಸರ್ ನೀವು ಬೆಳಗಾವಿ ಅಧಿವೇಶನಕ್ಕೂ ಮೊದಲೇ ಸಂಪುಟ‌ ವಿಸ್ತರಣೆ ಮಾಡಿ. ಇಲ್ಲವೇ ನಮ್ಮ ದಾರಿ ಮಗೆ ಎಂದು ಸುಧಾಕರ್ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.

click me!