ಭುಗಿಲೆದ್ದ ಅತೃಪ್ತಿ: ರಮೇಶ್ ಜಾರಕಿಹೊಳಿ ಮನೆಗೆ ಬಿಜೆಪಿ ಶಾಸಕರ ದಂಡು

By Web DeskFirst Published Nov 30, 2018, 3:55 PM IST
Highlights

ರಾಜ್ಯ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ವಿಳಂವಾಗುತ್ತಿರುವುದಕ್ಕೆ ಕಾಂಗ್ರೆಸ್ ಪಾಳೇಯದಲ್ಲಿ ಅತೃಪ್ತಿ ಭುಗಿಲೆದ್ದಿದೆ. ಇದರ ಬೆನ್ನಲ್ಲಿಯೇ ಬಿಜೆಪಿಯ ನಾಯಕರ ದಂಡು ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದು, ರಾಜ್ಯ ರಾಜಕಾರಣ ಗರಿಗೆದರಿದೆ. 

ಬೆಂಗಳೂರು, [ನ.30]: ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ.  ಸಚಿವ ಆಕಾಂಕ್ಷಿಗಳ ಪಟ್ಟಿ ಆಂಜನೆಯ್ಯನ ಬಾಲದಂತೆ ಬೆಳದಿದೆ.

ಇದ್ರಿಂದ  ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದರಿಂದ ಸಂಪುಟ ವಿಸ್ತರಣೆಯನ್ನ ಮುಂದೂಡುತ್ತಿದೆ. ಮತ್ತೊಂದೆಡೆ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಕಾಂಗ್ರೆಸ್ ಪಾಳೇಯದಲ್ಲಿ ಅತೃಪ್ತಿ ಭುಗಿಲೆದ್ದಿದೆ.

ರಾಜ್ಯ ಕಾಂಗ್ರೆಸ್‌ ಅತೃಪ್ತಿ ಸ್ಫೋಟ?: ಮುಂಬೈಗೆ ಹೊರಟ 10 ಶಾಸಕರು!

ಈ ಮಧ್ಯೆ ಇಂದು [ಶುಕ್ರವಾರ] ರಮೇಶ್ ಜಾರಕಿಹೊಳಿ ಮನೆಗೆ ಬಿಜೆಪಿ ಶಾಸಕರ ದಂಡೇ ದೌಡಾಯಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಶಾಸಕ ಸಿದ್ದು ಸವದಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಹಲವು ಬಿಜೆಪಿ ನಾಯಕರ ದಂಡೇ ರಮೇಶ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ತೆರಳಿದ್ದಾರೆ.

ಆದ್ರೆ ಈ ಬಗ್ಗೆ ಸ್ವತಃ ಪೌರಾಡಳಿತ ರಮೇಶ್ ಜಾರಕೊಹೊಳಿ ಪ್ರತಿಕ್ರಿಯೆಸಿದ್ದು ,  ಮುಂಬೈಗೆ ಹೋಗುವ ಬಗ್ಗೆ ಪ್ಲಾನ್ ಮಾಡಿಲ್ಲ. ನನ್ನ ಹೆಸರಿಗೆ ಡ್ಯಾಮೇಜ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು  ​​​​​ಪರೋಕ್ಷವಾಗಿ ಡಿ.ಕೆ.ಶಿವಕುಮಾರ್​​​​ ಟಾಂಗ್​​​ ಕೊಟ್ಟಿದ್ದಾರೆ. 

ಕಾಂಗ್ರೆಸ್​​​​ನ ಸ್ವಯಂ ಘೋಷಿತ ನಾಯಕರಿಂದಲೇ ನನ್ನ ಹೆಸರನ್ನು ಡ್ಯಾಮೇಜ್ ಮಾಡಲು ಷಡ್ಯಂತ್ರ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್​​​​ನ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬ ಸುದ್ದಿಯನ್ನು ಕಾಂಗ್ರೆಸ್​​​ನವರೆ ಹಬ್ಬಿಸಿದ್ದಾರೆ. ಕಾಂಗ್ರೆಸ್​​​​​ನ ಯಾವೊಬ್ಬ ಶಾಸಕರು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಇನ್ನೂ ಕಾಂಗ್ರೆಸ್‍ನಲ್ಲಿದ್ದುಕೊಂಡೇ ಆಗಾಗ್ಗೆ ಭಿನ್ನಮತ ಹೊರ ಹಾಕುತ್ತಿರುವ ಸಚಿವ ರಮೇಶ್ ಜಾರಕಿಹೊಳಿಯನ್ನು ಬಿಜೆಪಿ ಶಾಸಕರು ಇಂದು ಭೇಟಿಯಾಗಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

click me!